Advertisement

Bantwal; ಪಾಣೆಮಂಗಳೂರು ರೈಲ್ವೆ ಸೇತುವೆ ರಾಡ್ ಗೆ ವಾಹನ ಡಿಕ್ಕಿ: ತಪ್ಪಿದ ಅನಾಹುತ

11:24 AM Oct 21, 2023 | Team Udayavani |

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ಬಿರುಕು ಕಂಡ ಹಿನ್ನೆಲೆಯಲ್ಲಿ ಘನಗಾತ್ರದ ವಾಹನಗಳು ಸಂಚಾರ ನಿಷೇಧ ಹೇರಿ ಇಲಾಖೆ ಹಾಕಲಾಗಿದ್ದ ಕಬ್ಬಿಣದ ತಡೆಗೆ ವಾಹನವೊಂದು ಡಿಕ್ಕಿ ಹೊಡೆದ ಘಟನೆ ಶನಿವಾರ (ಅ.21) ಬೆಳಿಗ್ಗೆ ನಡೆದಿದೆ.

Advertisement

ಶತಮಾನದ ಉಕ್ಕಿನ ಸೇತುವೆಯಾಗಿರುವ ಪಾಣೆಮಂಗಳೂರು ಬ್ರಿಡ್ಜ್ ನ ಮಧ್ಯ ಭಾಗದಲ್ಲಿ ಸಣ್ಣದಾದ ಬಿರುಕು ಕಂಡ ಕಾರಣಕ್ಕಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ  ಲಾರಿ ಸಹಿತ ಇತರ ಘನವಾಹನಗಳು ಸಂಚಾರ ಮಾಡದಂತೆ  ಪುರಸಭೆ ಸೇತುವೆಯ ಎರಡು ಬದಿಗಳಲ್ಲಿ ಕಬ್ಬಿಣದ ಪಿಲ್ಲರ್ ಗಳನ್ನು ಹಾಕಿ ಅದರ ಮೇಲೆ ಅಡ್ಡಲಾಗಿ ರಾಡ್ ಹಾಕಲಾಗಿತ್ತು.

ಆದರೆ ಸೇತುವೆ ಪ್ರವೇಶಕ್ಕೆ ಮೊದಲು ಘನಗಾತ್ರದ ವಾಹನಗಳ ನಿರ್ಬಂಧ ಮಾಡಲಾಗಿರುವ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನು ಹಾಕದ ಹಿನ್ನೆಲೆಯಲ್ಲಿ ಅರಿವಿಲ್ಲದೆ ಗೂಡ್ಸ್ ಟೆಂಪೋವೊಂದು ಸೇತುವೆಯಲ್ಲಿ ಸಂಚಾರ ಮಾಡಿದಾಗ ರಾಡ್ ಕೆಳಕ್ಕುರಳಿ ಬಿದ್ದಿದೆ.

ಅದೃಷ್ಟವಶಾತ್ ರಾಡ್ ಬೀಳುವ ವೇಳೆ ಹಿಂಬದಿಯಿಂದ ವಾಹನವಿಲ್ಲದ ಕಾರಣಕ್ಕಾಗಿ ಯಾವುದೇ ಪ್ರಾಣಹಾನಿ ನಡೆದಿಲ್ಲ. ‌ಕಾಮಗಾರಿ ನಡೆಸಿದವರು ಸರಿಯಾಗಿ ರಾಡನ್ನು ಅಳವಡಿಸಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ.

ಅವೈಜ್ಞಾನಿಕ ವಿಧಾನದಿಂದ ಮಾಡಿರುವ ಕಾಮಗಾರಿ ಜೀವಕ್ಕೆ ಅಪಾಯವಾಗುವ ಸಂಭವಿದೆ. ವಾಹನದ ಮೇಲ್ಬಾಗ ಡಿಕ್ಕಿಯಾದ ಪರಿಣಾಮ ರಾಡ್ ಕೆಳಗುರುಳಿದೆ. ಬಳಿಕ ಕೆಲಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಮತ್ತೆ ರಾಡನ್ನು ಮೇಲಕ್ಕೆ ಸಿಕ್ಕಿಸಿದ್ದಾರೆ. ಮತ್ತೆ ಘನಗಾತ್ರದ ವಾಹನಗಳು ಗೊತ್ತಿಲ್ಲದೆ ಸೇತುವೆಯಲ್ಲಿ ಸಂಚಾರ ಮಾಡಿ ಕಬ್ಬಿಣದ ರಾಡ್ ಮತ್ತೆ ಬೀಳುವ ಸ್ಥಿತಿಯಲ್ಲಿ ಇರುವುದು ಅಪಾಯಕಾರಿಯಾಗಿದೆ ಎಂದು ಸ್ಥಳೀಯರ ವಾದವಾಗಿದೆ.

Advertisement

ಇಲಾಖೆ ಕಾಮಗಾರಿ ಮಾಡುವಾಗ ಅದರಿಂದಾಗುವ ಪರಿಣಾಮಗಳ ಬಗ್ಗೆ ಅರಿತು ಕೆಲಸ ಮಾಡಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next