Advertisement
ನೆರೆ ಸಂತ್ರಸ್ತರಿಗಾಗಿ ಅಧಿಕ ಪ್ರಮಾಣದಲ್ಲಿ ತರಕಾರಿ ಸಾಗಿಸುತ್ತಿದ್ದರೂ ಮಾರ್ಕೆಟ್‌ನಲ್ಲಿ ತರಕಾರಿ ಕೊರತೆ ಕಂಡು ಬಂದಿಲ್ಲ. ಸಂತ್ರಸ್ತರಿಗೆ ನೀಡುವುದಕ್ಕಾಗಿ ಖರೀದಿಸಲು ಬರುವ ನೈಜ ದಾನಿಗಳಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ ಎಂದವರು ವಿವರಿಸಿದ್ದಾರೆ.
ಮಂಗಳೂರಿಗೆ ಈರುಳ್ಳಿ ಹುಬ್ಬಳ್ಳಿಯಿಂದ ಹಾಗೂ ಬಟಾಟೆ ಮಹಾರಾಷ್ಟ್ರದ ಪುಣೆಯಿಂದ ಸರಬರಾಜು ಆಗುತ್ತಿದೆ. ಇತರ ತರಕಾರಿಗಳು ಬೆಂಗಳೂರು ಮತ್ತು ರಾಜ್ಯದ ಬಯಲು ಸೀಮೆಯಿಂದ ಬರುತ್ತಿವೆ. ಶಿರಾಡಿ ಘಾಟಿ, ಚಾರ್ಮಾಡಿ ಮತ್ತು ಮಡಿಕೇರಿ ಮಾರ್ಗಗಳು ಮುಚ್ಚಿದ್ದರಿಂದ ಎಸ್‌ಕೆ ಬಾರ್ಡರ್ ಮೂಲಕ ಮಂಗಳೂರಿಗೆ ತರಿಸಲಾಗುತ್ತದೆ. ಹಾಗಾಗಿ ಮಾರ್ಕೆಟ್‌ಗೆ ತರಕಾರಿ ತಲಪುವಾಗ 2- 3 ಗಂಟೆ ವಿಳಂಬವಾಗುತ್ತಿದೆ.
ಮಂಗಳೂರಿನಿಂದ ಕೊಡಗಿಗಿಂತಲೂ ಹೆಚ್ಚಾಗಿ ಕೇರಳಕ್ಕೆ ತರಕಾರಿ ರವಾನೆಯಾಗುತ್ತದೆ. ದಾನಿಗಳು ಈರುಳ್ಳಿ ಮತ್ತು ಬಟಾಟೆ ಅಧಿಕ ಪ್ರಮಾಣದಲ್ಲಿ ಖರೀದಿಸಿ ಸಾಗಾಟ ಮಾಡುತ್ತಿದ್ದಾರೆ. ಸೋಮವಾರ ಮಂಗಳೂರಿಗೆ ಎಂದಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ತರಿಸಿದ್ದು, ಎಲ್ಲವೂ ಖಾಲಿಯಾಗಿದೆ ಎನ್ನುತ್ತಾರೆ ನಗರದ ಸೆಂಟ್ರಲ್ ಮಾರ್ಕೆಟ್‌ನ ವ್ಯಾಪಾರಿ ಡೇವಿಡ್ ಡಿ’ಸೋಜಾ.