Advertisement

ಬೆಳಗಾವಿಯಿಂದ ಕಡಿಮೆ ಸರಬರಾಜು: ಗೋವಾದಲ್ಲಿ ತರಕಾರಿಗೆ ಹಾಹಾಕಾರ

06:51 PM May 27, 2021 | Team Udayavani |

ಪಣಜಿ: ಗೋವಾ ತೋಟಗಾರಿಕಾ ನಿಗಮಕ್ಕೆ ಬೆಳಗಾವಿಯಿಂದ ಸದ್ಯ ವಾರದಲ್ಲಿ ಮೂರು ದಿನಗಳ ಕಾಲ ತರಕಾರಿ ಪೂರೈಕೆಯಾಗುತ್ತಿದೆ, ಇದರಿಂದಾಗಿ ಅಲ್ಲಿರುವ ನಿಗಮದ ಹಲವು ತರಕಾರಿ ಅಂಗಡಿಗಳನ್ನು ಅನಿವಾರ್ಯವಾಗಿ ಬಂದ್ ಮಾಡುವಂತಾಗಿದೆ.

Advertisement

ಕೋವಿಡ್ ನಿರ್ಬಂಧದಿಂದಾಗಿ ಬೆಳಗಾವಿ ತರಕಾರಿ ಮಾರುಕಟ್ಟೆ ಬಂದ್ ಆಗಿದೆ. ಗೋವಾ ರಾಜ್ಯಾದ್ಯಂತ ನಿಗಮದ ಸುಮಾರು 1400 ತರಕಾರಿ ಅಂಗಡಿಗಳಿವೆ. ಈ ಅಂಗಡಿಗಳ ಮೂಲಕ ಸರ್ಕಾರವು ರಾಜ್ಯದಲ್ಲಿ ಜನತೆಗೆ ಸಬ್ಸಿಡಿ ದರದಲ್ಲಿ ತರಕಾರಿ ಮಾರಾಟ ಮಾಡುತ್ತದೆ. ಆದರೆ ಬೆಳಗಾವಿಯಿಂದ ಪ್ರತಿದಿನ ತರಕಾರಿ ಪೂರೈಕೆಯಾಗದ ಕಾರಣ ನಿಗಮದ ಹಲವು ತರಕಾರಿ ಅಂಗಡಿಗಳನ್ನು ಅನಿವಾರ್ಯವಾಗಿ ಬಂದ್ ಮಾಡುವಂತಾಗಿದೆ.

ಈ ಬಗ್ಗೆ ನಿಗಮದ ಹಿರಿಯ ಅಧಿಕಾರಿ ಸಂದೀಪ ಫಳದೇಸಾಯಿ ಅವರು ಮಾಹಿತಿ ನೀಡಿದ್ದು, ಬೆಳಗಾವಿಯಿಂದ ನಿಗಮದ ತರಕಾರಿ ಅಂಗಡಿಗಳಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ  ಮಾತ್ರ ತರಕಾರಿ ಪೂರೈಕೆಯಾಗುತ್ತದೆ. ಲಾಕ್‍ಡೌನ್ ಪೂರ್ವದಲ್ಲಿ  ಪ್ರತಿದಿನ ಸುಮಾರು 100 ಟನ್ ತರಕಾರಿಯನ್ನು ತರಿಸಿಕೊಳ್ಳಲಾಗುತ್ತಿತ್ತು.  ಆದರೆ, ಇದೀಗ ದಿನವೊಂದಕ್ಕೆ 130 ಟನ್‍ನಷ್ಟು  ವಾರದಲ್ಲಿ ಕೇವಲ ಮೂರು ದಿನ ಮಾತ್ರ ಬರುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next