Advertisement

ರಾಜ್ಯದ 63 ಲಕ್ಷ  ಕುಟುಂಬಗಳಿಗೆ ತರಕಾರಿ ಬೀಜ ವಿತರಣೆ: ಕೃಷಿ ಸಚಿವ 

02:30 AM Jul 16, 2017 | Harsha Rao |

ಕುಂಬಳೆ: ರಾಜ್ಯದ 63 ಲಕ್ಷ ಕುಟುಂಬಗಳಿಗೆ ತರಕಾರಿ ಬೀಜವನ್ನು ಸರಕಾರದ ವತಿಯಿಂದ ನೀಡಲಾಗುವುದು. ಈ ಬಾರಿಯ ಓಣಂ ಹಬ್ಬವನ್ನು ಅನ್ಯರಾಜ್ಯದ ತರಕಾರಿ ರಹಿತವಾಗಿ ಊರ ನಾಟಿ ತರಕಾರಿ ಯೊಂದಿಗೆ ಆಚರಿಸಬೇಕೆಂಬುದಾಗಿ ರಾಜ್ಯ ಕೃಷಿಸಚಿವ ವಿ.ಎಸ್‌. ಸುನಿಲ್‌ ಕುಮಾರ್‌ ಹೇಳಿದರು.

Advertisement

ಕಾಸರಗೋಡು ಜಿಲ್ಲೆಯ ಮುಕ್ಕುಟಿ ಚಾಲ್‌ನಲ್ಲಿ ಮಣ್ಣು ಮತ್ತು ಜಲಸಂರಕ್ಷಣೆ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ  ಸಚಿವರು ಸ್ಥಳೀಯಾಡಳಿತ ಮತ್ತು ಕೃಷಿ ಭವನ, ಕುಟುಂಬಶ್ರೀ ಮತ್ತು ಸಾರ್ವಜನಿಕರ ಪಾಲುದಾರಿಕೆಯಲ್ಲಿ ರಾಜ್ಯದಲ್ಲಿ ಮನೆ ಅಂಗಳದಲ್ಲಿ ತರಕಾರಿ ಬೆಳೆಯುವ ಯೋಜನೆಯನ್ನು ನಿರ್ವಹಿ ಸಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸಬೇಕು. ಇದರಂತೆ ಉತ್ತಮ ತರಕಾರಿ ಕೃಷಿ ಮಾಡಿದ ಮಹಿಳೆಯರಿಗೆ ಪ್ರಥಮ ಬಹುಮಾನವಾಗಿ ಒಂದು ಲಕ್ಷÒ ರೂ., ದ್ವಿತೀಯ 50 ಸಾವಿರ ರೂ., ತೃತೀಯ 25 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುವುದು. ಪ್ರಕೃತಿ ಮತ್ತು ಜಲಾಶಯ  ಸಂರಕ್ಷಿಸಲು ನಾವೆಲ್ಲರೂ ಸಂಘಟಿತರಾಗಿ ಮುಂದಾಗಬೇಕೆಂದರು.
ಪನತ್ತಡಿಯಲ್ಲಿ ಜರಗಿದ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ವಹಿಸಿ ಮಾತ ನಾಡಿ ಕೃಷಿಯನ್ನು ಮತ್ತು ನೀರನ್ನು ಉಳಿಸಿ ಮುಂದಿನ ಯುವ ಪೀಳಿಗೆಗೆ ಹಸ್ತಾಂತರಿಸಬೇಕೆಂದರು. ಎಲ್ಲರೂ ತಮ್ಮ ಹಿತ್ತಿಲಲ್ಲಿ, ಅಂಗಳದಲ್ಲಿ ತರಕಾರಿ ಬೆಳೆಯಲು ಮುಂದಾಗಬೇಕೆಂದರು.
ಸಮಾರಂಭದಲ್ಲಿ ಸಚಿಯದ್ವಯರು ಸೋಯಿಲ್‌ ಹೆಲ್ತ್‌ ಕಾರ್ಡ್‌ಗಳನ್ನು ವಿತರಿಸಿದರು.

ಮಣ್ಣು ಸಂರಕ್ಷಣೆ ಇಲಾಖೆಯ ನಿರ್ದೇಶಕ ಟಿ. ಜಸ್ಟಿನ್‌ ಮ್ಯಾಥುÂ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ  ಶಾಂತಮ್ಮ  ಫಿಲಿಪ್‌, ಸ‌ದಸ್ಯೆ ಇ. ಪದ್ಮಾವತಿ, ಪನತ್ತಡಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಹೇಮಾಂಬಿಕಾ, ಸ್ಥಾಯೀ ಸಮಿತಿ ಅಧ್ಯಕ್ಷ  ಎಂ.ಸಿ. ಮಾಧವನ್‌, ರಜನಿ ದೇವಿ, ಪಿ. ತಂಬಾನ್‌ ಪರಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next