Advertisement

ಗಗನಕ್ಕೇರಿದ ತರಕಾರಿ ಬೆಲೆ

10:46 AM Jul 05, 2017 | |

ಆಳಂದ: ಜೂನ್‌ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನಾದ್ಯಂತ ತರಕಾರಿ ಬೆಳೆ ಹಾನಿಗಿಡಾಗಿದೆ. ಮಳೆಯಿಂದ ತರಿಕಾರಿ ಉತ್ಪಾದನೆ ಕುಂಠಿತವಾಗುತ್ತಿದ್ದಂತೆ ಇದರ ನೇರ ಪರಿಣಾಮ ಗ್ರಾಹಕರ ಮೇಲಾಗಿದೆ. ಇತ್ತ ತೋಟಗಾರಿಕೆ ಉತ್ಪಾದಕರಿಗೆ ನಷ್ಟವಾದರೆ, ಮತ್ತೂಂದಡೆ ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ.

Advertisement

ಪಟ್ಟಣ ಸೇರಿ ಗ್ರಾಮೀಣ ಭಾಗದಿಂದ ಸ್ಥಳೀಯ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ನಿರೀಕ್ಷಿತ ಪ್ರಮಾನದಲ್ಲಿ
ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಸ್ಥಿರವಾಗಿದ್ದ ಉಳ್ಳಾಗಡ್ಡಿ ಬೆಲೆ ಬಿಟ್ಟರೆ ಉಳಿದೆಲ್ಲ ತರಕಾರಿ ದರ ದುಪ್ಪಟ್ಟಾಗಿದ್ದರಿಂದ ಖರೀದಿಗೆ ಬರುವ ಬಡ ಮತ್ತು ಮಧ್ಯಮ ವರ್ಗದ ಜನರು ಹಿಂದೆಮುಂದೆ ನೋಡುವಂತಾಗಿದೆ. ಜನರು ಬಾರದೆ ಮಾರುಕಟ್ಟೆ ಬಣಗುಡುತ್ತಿದೆ. ಬದನೆ 20 ರೂ.ದಿಂದ ಬದಲು 40 ರೂಗೆ, ಬೆಂಡೆ 20ರೂ.ದಿಂದ 40, ಟೊಮ್ಯಾಟೋ 20ರಿಂದ 50, ಆಲೂಗಡ್ಡೆ 25ದಿಂದ 30, ಮೆಂತೆ ಸೋಪ್ಪು 5 ರೂಪಾಯಿ ಬದಲು 10 ರೂ., ಪಾಲಕ 5 ರೂ ಬದಲು 10 ರೂಪಾಯಿ, ಚವಳಿಕಾಯಿ 20 ಬದಲು 40 ರೂ. ಕಿಲೋ, ಕೊತಂಬರಿ 5ರ ಬದಲು 10 ರೂ, ಸವತೆಕಾಯಿ
20 ರೂ ಬದಲು 30 ಕಿಲೋ ಮತ್ತು ಮೆಣಸಿನಕಾಯಿ 20 ಬದಲು 50 ರೂಪಾಯಿಗೆ ಕೆಜಿ ಮಾರಾಟವಾಗುತ್ತಿದೆ. ಪ್ರತಿ
ವರ್ಷ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ತರಕಾರಿ ಬೆಲೆ ಕುಸಿಯುತ್ತಿತ್ತು. ಆದರೆ ಈ ಬಾರಿ ಗಗನಕ್ಕೇರಿದೆ.

ವ್ಯಾಪಾರಿಗಳ ಅಳಲು 
ಮಾರುಕಟ್ಟೆಗೆ ತರಕಾರಿ ಪೂರೈಕೆ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಮೊದಲು ದಿನಕ್ಕೆ 8ರಿಂದ 10 ಸಾವಿರ ರೂಪಾಯಿ ವ್ಯಾಪಾರವಾಗುತ್ತಿತ್ತು. ಈಗ 3ರಿಂದ4 ಸಾವಿರ ರೂ. ಆಗುತ್ತಿದೆ. ತರಕಾರಿ ಖರೀದಿಸಿ ಮಾರಲು ಹಿಂದೆ, ಮುಂದೆ ನೋಡುತ್ತಿದ್ದೇವೆ. ಈಗ ದಿನದ ಕೂಲಿ ಒಮ್ಮೊಮ್ಮೆ ಏನು ಉಳಿಯುತ್ತಿಲ್ಲ. 

ನಾಗೇಶ ಕಟಕೆ ತರಕಾರಿ ವ್ಯಾಪಾರಿ ಶ್ರೀರಾಮ ಮಾರುಕಟ್ಟೆ ಆಳಂದ

Advertisement

Udayavani is now on Telegram. Click here to join our channel and stay updated with the latest news.

Next