Advertisement
ಸಾಮಾನ್ಯವಾಗಿ ಈ ಮೋಮೋಸ್ ಖಾದ್ಯ ವು ತಿನ್ನಲು ತುಂಬಾನೇ ಮೃದು ಹಾಗೂ ರುಚಿಕರ. ಬಹುತೇಕ ಮಂದಿ ಇದನ್ನು ಮೈದಾದಿಂದ ತಯಾರಿಸುತ್ತಾರೆ.ಮೋಮೋಸ್‌ಯಿಂದ ಬಗೆಬಗೆಯ ತಿಂಡಿ-ತಿನಿಸುಗಳನ್ನು ಮಾಡಬಹುದಾಗಿದೆ ಆದರೆ ನಾವು ಇಂದು ನಿಮಗಾಗಿ “ವೆಜ್ ಟೇಬಲ್ ಮೋಮೋಸ್” ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ….
ಮೈದಾ 1 ಕಪ್ ,ಕ್ಯಾರೆಟ್ 1/2 ಕಪ್, ಕ್ಯಾಬೇಜ್ 1/2 ಕಪ್, ಈರುಳ್ಳಿ 2, ಎಣ್ಣೆ 8 ಚಮಚ, ಶುಂಠಿ ಸ್ವಲ್ಪ, ಹಸಿ ಮೆಣಸು 2, ಕೊತ್ತಂಬರಿ ಸೊಪ್ಪು ಸ್ವಲ್ಪ,ಕಾಳು ಮೆಣಸಿನ ಪುಡಿ 1/4 ಚಮಚ, ಸಣ್ಣ ಗಾತ್ರದ ಲಿಂಬೆ 1, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಒಂದು ಬೌಲ್ ಗೆ ಮೈದಾ ಮತ್ತು ಉಪ್ಪನ್ನು ಸೇರಿಸಿ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಎಣ್ಣೆಯನ್ನು ಸವರಿ ಚೆನ್ನಾಗಿ ಮೃದು ಮಾಡಿಕೊಳ್ಳಿ ತದನಂತರ 20 ನಿಮಿಷಗಳ ಕಾಲ ಹಾಗೇ ಬಿಡಿ .
Related Articles
Advertisement
ನಂತರ ಕಲಸಿ ಇಟ್ಟುಕೊಂಡಂತಹ ಮೈದಾ ಹಿಟ್ಟನ್ನು ಸಣ್ಣ -ಸಣ್ಣ ಪೂರಿ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ತದನಂತರ ಲಟ್ಟಿಸಿಕೊಂಡ ಹಿಟ್ಟಿನ ಒಳಗೆ ಕಲಸಿ ಇಟ್ಟ ತರಕಾರಿ ಮಿಶ್ರಣವನ್ನು ಹಾಕಿಕೊಂಡು ಮೋದಕವನ್ನು ಮಡಚುವ ರೀತಿಯಲ್ಲಿ ಮಡಚಿಕೊಳ್ಳಬೇಕು ನಂತರ ಮೋಮೋಸ್ ನ್ನು ಹಬೆಯಲ್ಲಿ 15ನಿಮಿಷಗಳ ಕಾಲ ಬೇಯಿಸಿರಿ. ಈಗ ಬಿಸಿ ಬಿಸಿಯಾದ ವೆಜ್ ಮೋಮೋಸ್ ನ್ನು ಕೆಂಪು ಚಟ್ನಿ ಜೊತೆ ಸವಿಯಬಹುದು.