Advertisement

ಜಿಲ್ಲಾ ಬಿಜೆಪಿಯಿಂದ ಬಡ ಕುಟುಂಬಗಳಿಗೆ ತರಕಾರಿ ವಿತರಣೆ

01:26 PM May 26, 2021 | Team Udayavani |

ರಾಮನಗರ: ಕೋವಿಡ್‌ ಸೋಂಕಿನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ನಾಯಕರು ಟೀಕೆ, ಅಪಪ್ರಚಾರ, ಸುಳ್ಳು ಹೇಳುವುದನ್ನು ಬಿಟ್ಟು ಸರ್ಕಾರಕ್ಕೆಸಲಹೆ, ಸಹಕಾರ ನೀಡಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಹೇಳಿದರು.

Advertisement

ಕೋವಿಡ್‌ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಜಿಲ್ಲಾಬಿಜೆಪಿ ಪರವಾಗಿ ಆರ್ಥಿಕವಾಗಿ ಬಡ ಕುಟುಂಬಗಳಿಗೆ ತರಕಾರಿ ವಿತರಿಸಿ ಮಾತನಾಡಿದರು.ಕೋವಿಡ್‌ ಪರಿಸ್ಥಿತಿ ಎದುರಿಸಲು ಸಲಹೆ, ಸಹಕಾರ ನೀಡುವುದನ್ನು ಬಿಟ್ಟು ಎಷ್ಟು ಜನ ಸತ್ತಿದ್ದಾರೆ,ಎಷ್ಟು ಜನರನ್ನು ಸುಟ್ಟಿರಿ ಎಂದೆಲ್ಲ ಪ್ರಶ್ನೆ ಕೇಳುತ್ತಿದಾರೆ. ಕಾಂಗ್ರೆಸ್‌ ನಾಯಕರಾದ  ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್‌ ಮುಂತಾದವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಇದು ದುರ್ದೈವ ಎಂದರು.

ದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲುಪ್ರಧಾನಿ ನರೇಂದ್ರ ಮೋದಿ ಶ್ರಮಿಸಿದ್ದಾರೆ. ಆಲ್‌ಇಂಡಿಯಾ ಮೆಡಿಕಲ್‌ ಸೈನ್ಸ್‌ ನ 16 ಘಟಕಗಳನ್ನುಎನ್‌ಡಿಎ ಆಡಳಿತ ಸ್ಥಾಪಿಸಿದೆ. ಕೆಲವೇ ವರ್ಷಗಳಲ್ಲಿಮೆಡಿಕಲ್‌ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಮತ್ತು ವೈದ್ಯಕಿಯ ಮೂಲ ಸೌಕರ್ಯಗಳು ಹೆಚ್ಚಾಗಿವೆ ಎಂದು ತಿಳಿಸಿದರು.

ಕೋವಿಡ್‌ 2ನೆ ಅಲೆ ಸುನಾಮಿ: ಕೋವಿಡ್‌ಸೋಂಕಿನ ಮೊದಲನೇ ಅಲೆಯಲ್ಲಿ ಸೋಂಕಿತರಿಗೆ14 ದಿನಗಳ ಚಿಕಿತ್ಸೆ ನಂತರ ಗುಣಮುಖರಾಗಿ ಮನೆಗೆ ಹೋಗುತ್ತಿದ್ದರು. 2ನೇ ಅಲೆಯಲ್ಲಿಸೋಂಕು ಪತ್ತೆಯಾದ 2-3 ದಿನಗಳಲ್ಲೇ ಶ್ವಾಸಕೋಶ ಗಂಭೀರ ಪರಿಸ್ಥಿತಿಗೆ ತಿರುಗುತ್ತಿದೆ. ಅಲ್ಲದೆಆಕ್ಸಿಜನ್‌ಗಾಗಿ ಬೇಡಿಕೆಯೂ ಹೆಚ್ಚಾಗಿದೆ. ಮೋದಿಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಿ ಪಿಎಂ ಕೇರ್‌ಫ‌ಂಡ್‌ನಿಂದ 1 ಲಕ  ಆಕ್ಸಿಜನ್‌ ಸಾಂದ್ರಕ ಖರೀದಿಸಿ ಎಲ್ಲಾ ರಾಜ್ಯಗಳಿಗೂ ಕೊಟ್ಟಿದೆ. ಅಲ್ಲದೆ ರಾಜ್ಯದಲ್ಲಿ14ಕಡೆ ಕ್ಷಿಪ್ರಗತಿಯಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪಿಸಲು ನೆರವು ನೀಡಿದೆ.

ರಾಮನಗರ ಜಿಲ್ಲೆಯಲ್ಲಿಯೂ ಆಕ್ಸಿಜನ್‌ ಉತ್ಪಾದನಾ ಘಟಕನಿರ್ಮಾಣವಾಗಲಿದೆ ಎಂದರು.ಟೀಕೆ ಸರಿಯಲ್ಲ: ಸಂಘ ಪರಿವಾರದ ಸಂಸ್ಥೆಗಳುಜಿಲ್ಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿ 600ಕ್ಕೂಹೆಚ್ಚು ರಕ್ತದ ಯೂನಿಟ್‌ ಸಂಗ್ರಹಿಸಿದೆ. ಬಡವರಿಗೆಉಚಿತ ಆಹಾರ ವಿತರಣೆ ನಡೆಯುತ್ತಿದೆ. ತರಕಾರಿ ವಿತರಣೆ ಆರಂಭವಾಗಿದೆ. ಇಂತಹ ಜನಪರಕಾರ್ಯಗಳನ್ನು ಕಾಂಗ್ರೆಸ್‌ ಕೈಗೊಳ್ಳುವುದನ್ನು ಬಿಟ್ಟುಟೀಕೆ ಮಾಡುವುದು ಸರಿಯಲ್ಲ ಎಂದರು.

Advertisement

ಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್‌, ಪ್ರಧಾನ ಕಾರ್ಯದರ್ಶಿ ರುದ್ರದೇವರು,ಮಾಧ್ಯಮ ಪ್ರಮುಖ್‌ ಚಂದ್ರಶೇಖರರೆಡ್ಡಿ, ನಗರಮಂಡಲ ಅಧ್ಯಕ್ಷ ಪಿ.ಶಿವಾನಂದ, ಪ್ರಧಾನಕಾರ್ಯದರ್ಶಿ ಡಿ.ನರೇಂದ್ರ ಪ್ರಮುಖರಾದ ವಿ.ರಾಜು,ನಂದೀಶ್‌, ಸಾವಿತ್ರಮ್ಮ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next