Advertisement
ತಾಲೂಕಿನ ಮರಿಯಾಲ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಠದಲ್ಲಿ ಮಂಗಳವಾರ ನಡೆದ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೋಬಳಿ ಘಟಕದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
Related Articles
Advertisement
ಬೆಂಬಲ: ರಾಜ್ಯ ಸಮಿತಿ ನಿರ್ದೇಶಕ ಹೆಗ್ಗವಾಡಿಪುರ ಮಹದೇವಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಿಲ್ಲಾ ಕೇಂದ್ರ ದಲ್ಲಿ ಬಸವ ಭವನ ನಿರ್ಮಾಣಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚಿನ ರೀತಿಯ ಬೆಂಬಲ ನೀಡ ಬೇಕು. ಇದೊಂದು ಭವನ ಸಮಾಜದ ಆಸ್ತಿಯಾ ಗಬೇಕಾಗಿದೆ. ರಾಜ್ಯದಲ್ಲಿ ರಾಜಕೀಯ ಪಕ್ಷಗಳು ವೀರಶೈವ ಲಿಂಗಾಯತ ಸಮಾಜಕ್ಕೆ ಸಾಮಾಜಿಕ, ಅರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಹೋಬಳಿ ಘಟಕದಿಂದ ನೂತನ ಅಧ್ಯಕ್ಷ ಹೊಸೂರು ನಟೇಶ್ ಮತ್ತು ನಿರ್ದೇಶಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಗ್ರಾಪಂ ಘಟಕ ಅಧ್ಯಕ್ಷರ ನೇಮಕ: ಕಸಬಾ ಹೋಬಳಿ ವ್ಯಾಪ್ತಿಯ ಮಹಾಸಭಾ ಗ್ರಾಪಂ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು. ಹೆಗ್ಗೋಠಾರ ಪಂಚಾಯಿತಿಗೆ ಅಧ್ಯಕ್ಷರಾಗಿ ಗೌಡಿಕೆ ಮಾದಪ್ಪ, ಭೋಗಾಪುರ ಗ್ರಾಪಂ ಅಧ್ಯಕ್ಷರಾಗಿ ಕಸ್ತೂರು ಬಸವಣ್ಣ, ಬಸವಗುಪ್ಪೆ ಗ್ರಾಪಂಗೆ ಬಿ.ಎಸ್. ಮಹದೇವಪ್ಪ, ಕೂಡ್ಲೂರು ಗ್ರಾಪಂಗೆ ಡಿ.ಎಂ. ಹುಚ್ಚಪ್ಪ, ಮಂಗಲ ಗ್ರಾಪಂಗೆ ಯಡಿಯೂರು ಪ್ರಕಾಶ್, ಮಾದಾಪುರ ಗ್ರಾಪಂಗೆ ಕಿರಗಸೂರು ನಾಗರಾಜು ಅವರನ್ನು ನೇಮಕ ಮಾಡಿ, ಸ್ವಾಮೀಜಿಗಳ ನೇತೃತ್ವದಲ್ಲಿ ಶಾಲು ಹೊದಿಸಿ, ಅಭಿನಂದಿಸಲಾಯಿತು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಬಸವಣ್ಣ, ಸದಸ್ಯರಾದ ನೀಲಮ್ಮ ಬಸವಣ್ಣ, ಎಪಿಎಂಸಿ ನಿರ್ದೇಶಕ ನಾಗೇಂದ್ರ, ಹೋಬಳಿ ಅಧ್ಯಕ್ಷ ಕೆಲ್ಲಂಬಳ್ಳಿ ಬಸವಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ನಿರ್ದೇಶಕ ವೈ.ಪಿ. ರಾಜೇಂದ್ರ, ಕೆ. ನಾಗರಾಜು, ಬಿರ್ಲ ನಾಗರಾಜು, ಜಿ. ಕುಮಾರಸ್ವಾಮಿ, ಗುರುಸ್ವಾಮಿ, ಮಂಜು, ಪಾರ್ವತಮ್ಮ, ಮಂಜುಳಾ, ನಿರ್ಮಲಾ, ನಾಗಮಣಿ, ದೊಡ್ಡರಾಯಪೇಟೆ ಗಿರೀಶ್ ಇತರರು ಇದ್ದರು.