ಹಾವೇರಿ: ವೀರಶೈವ ಧರ್ಮದ ಇತಿಹಾಸ ತಿರುಚುವವರ ವಿರುದಟಛಿ ಕ್ರಮ ಕೈಗೊಳ್ಳಬೇಕು ಹಾಗೂ ವೀರಶೈವ ಲಿಂಗಾಯತ ಎಂಬುದು ಒಂದೇ ಧರ್ಮವಾಗಿದ್ದು, ಸಮುದಾಯವನ್ನು ಒಡೆಯುವುದು ಬೇಡ ಎಂದು ಆಗ್ರಹಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನಾ ಪಾದಯಾತ್ರೆ ನಡೆಯಿತು. ನಗರದ ಪುರಸಿದ್ದೇಶ್ವರ ಮಠದ ಆವರಣದಿಂದ ಆರಂಭವಾದ ಪಾದಯಾತ್ರೆಯಲ್ಲಿ 12 ಮಠಾಧೀಶರು, ನೂರಾರು ವೀರಶೈವ ಲಿಂಗಾಯತ ಅನುಯಾಯಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಮಾತೆ ಮಹಾದೇವಿ ವಿರುದಟಛಿ ಧಿಕ್ಕಾರ, ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂಬ ಘೋಷಣೆ ಕೇಳಿ ಬಂದವು.
ಬಳಿಕ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹೊಸಮನಿ ಸಿದ್ದಪ್ಪ ಮೂರ್ತಿಗೆ ಮಾಲಾರ್ಪಣೆ ಮಾಡಿ, ಬೃಹತ್ ಮಾನವ
ಸರಪಳಿ ರಚಿಸಲಾಯಿತು. ವಾಹನ ಸಂಚಾರಕ್ಕೆ ಕೆಲ ಹೊತ್ತು ತಡೆಯೊಡ್ಡಿ, ಡೀಸಿ ಮೂಲಕ ರಾಷ್ಪ್ರಪತಿಗೆ ಮನವಿ ಸಲ್ಲಿಸಿದರು.
ಒಂದೇ ಅರ್ಥದ ಎರಡು ಪದ: ಈ ವೇಳೆ ಮಠಾಧೀಶರು ಮಾತನಾಡಿ, ವೀರಶೈವ ಪುರಾತನ ಧರ್ಮ, ವೀರಶೈವ ಎಂಬ ಪದದ ಉಲ್ಲೇಖ ವಚನಗಳಲ್ಲಿಯೂ ಇದೆ. “ಗೋಪಾಲ ಕೃಷ್ಣ’ ಎಂಬ ಹೆಸರು ರೂಢಿಯಲ್ಲಿದ್ದಂತೆ ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಅರ್ಥದ ಎರಡು ಪದಗಳು. ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದೆಂದು ಮನವಿ ಮಾಡಿದರು.