Advertisement

ವೀರಶೈವ ಲಿಂಗಾಯತ ಒಂದೇ: ತೇಲ್ಕೂರ್‌

09:20 AM Jul 16, 2018 | |

ಸೇಡಂ: ವೀರಶೈವ ಲಿಂಗಾಯತ ಸಮಾಜ ಒಡೆಯಲು ಯತ್ನಿಸಿದವರ ವಿರುದ್ಧ ವೀರಶೈವರು ಒಗ್ಗಟ್ಟು ಪ್ರದರ್ಶಿಸಿ ಪಾಠ ಕಲಿಸಿರುವುದು ಶ್ಲಾಘನೀಯ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್‌ ಹೇಳಿದರು.

Advertisement

ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಅನಾದಿ ಕಾಲದಿಂದಲೂ ವೀರಶೈವ ಲಿಂಗಾಯತ ಒಂದೇ. ಇಂತಹ ಐತಿಹಾಸಿಕ ಸಮಾಜವನ್ನು ಒಡೆಯುವ ಯತ್ನ ಸರಿಯಲ್ಲ. ವೀರಶೈವರು ಒಳಪಂಗಡ ಲೆಕ್ಕಿಸದೇ ಸರ್ವರೂ ಒಂದಾಗಿ ಸಮಾಜ ಬಲವರ್ಧನೆಗೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಬಹುದೊಡ್ಡ ಸಮಾಜವಾದ ವೀರಶೈವ ಲಿಂಗಾಯತರು ಬಡವರು, ದೀನರ ಒಳಿತಿಗೆ  ಕೈಜೋಡಿಸಬೇಕು. ಸಾಂಸ್ಕೃತಿಕ, ಶೈಕ್ಷಣಿಕವಾಗಿ ಬೆಳೆಯಲು ಸಹಕಾರಿಯಾಗಿ ಕೆಲಸ ಮಾಡಬೇಕು. ಇದೆಲ್ಲವೂ ಕೈಗೂಡಬೇಕಾದರೆ ಟ್ರಸ್ಟ್‌ ಮತ್ತು ವೀರಶೈವ ಮಹಾಸಭಾದ ಪದಾಧಿಕಾರಿಗಳಲ್ಲಿ ಏಕತಾಭಾವ ಮೂಡಬೇಕಿದೆ ಎಂದರು. 

ವೀರಶೈವ ಕಲ್ಯಾಣ ಮಂಟಪ ನಿರ್ಮಾಣ ಸಮಾಜದ ಬೆಳವಣಿಗೆಗೆ ಮತ್ತೂಂದು ಮೈಲಿಗಲ್ಲು ಇದ್ದಂತೆ. ಇದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು. ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ, ಹಾಲಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಟ್ರಸ್ಟ್‌ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿದರು.

ನೂತನ ತಾಪಂ ಅಧ್ಯಕ್ಷೆ ಇಂದ್ರಾದೇವಿ ಪಾಟೀಲ, ಚಿತ್ರಕಲಾ ಶಿಕ್ಷಕಿ ಸವಿತಾ ಕುಂಬಾರ, ಸಾಹಿತಿ ಡಾ| ಶ್ರೀಶೈಲ ಬಿರಾದರ, ಪತ್ರಕರ್ತ ಸಿದ್ದಯ್ಯಸ್ವಾಮಿ ಆಡಕಿ, ಕಲ್ಯಾಣ ಮಂಟಪಕ್ಕೆ ಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು.
 
ಸಮಾಜದ ಹಿರಿಯ ಮುಖಂಡ ವೀರಣ್ಣಸಾಹು ತಂಬಾಕೆ, ಡಾ| ಸದಾನಂದ ಬೂದಿ, ರೇವಣಕುಮಾರ ಪಾಟೀಲ ತರನಹಳ್ಳಿ, ವೀರಭದ್ರಪ್ಪ ಪಾಟೀಲ ತೊಟ್ನಳ್ಳಿ, ತಾಪಂ ಅಧ್ಯಕ್ಷೆ ಇಂದ್ರಾದೇವಿ ಪಾಟೀಲ ದೇವನೂರ ವೇದಿಕೆಯಲ್ಲಿದ್ದರು.

Advertisement

ಭಾಗ್ಯಶ್ರೀ ಮಠಪತಿ ಪ್ರಾರ್ಥಿಸಿದರು, ಜಿಪಂ ಮಾಜಿ ಅಧ್ಯಕ್ಷ ಶರಣಪ್ಪ ಪಾಟೀಲ ತೇಲ್ಕೂರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಶರಣಬಸಪ್ಪ ಹಾಗರಗಿ ಸ್ವಾಗತಿಸಿದರು. ಪ್ರದೀಪ ಪಾಟೀಲ ಹೊಸಳ್ಳಿ ನಿರೂಪಿಸಿದರು, ನಾಗಯ್ಯಸ್ವಾಮಿ ಬೊಮ್ನಳ್ಳಿ ವಂದಿಸಿದರು. 

ಕಾಂಗ್ರೇಸ್‌-ಬಿಜೆಪಿ ಬಿಡಿ ವೀರಶೈವ ಒಗ್ಗಟ್ಟಿಗೆ ಮುಂದಾಗಿ
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಶರಣಪ್ಪ ಪಾಟೀಲ ಸಮಾಜದ ಒಡಕಿಗೆ ಯತ್ನಿಸುವವರ ವಿರುದ್ಧ ಚಾಟಿ ಬೀಸಿದರು. ಅನೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್‌-ಬಿಜೆಪಿ ಮರೆತು ಸಮಾಜದ ಪ್ರತಿಭಾವಂತರು, ಜನಪ್ರತಿನಿ ಧಿಗಳನ್ನು ಸನ್ಮಾನಿಸಲಾಗುತ್ತದೆ. ಆದರೆ ಇಲ್ಲಿ ಪ್ರತಿ ಬಾರಿ ತಗಾದೆ ತೆಗೆಯುವ ರೂಢಿಯಾಗಿ ಬಿಟ್ಟಿದೆ. ಇವರು ಬಿಜೆಪಿ, ಮಹಾಸಭಾ ಅಧ್ಯಕ್ಷರು ಕಾಂಗ್ರೆಸ್‌ನೋರು ಎನ್ನೋದನ್ನು ಬಿಡಿ. ನಾವೆಲ್ಲರೂ ಕೂಡಿ ಶಾಸಕರಿಗೆ ಸನ್ಮಾನ ಮಾಡ್ತಿದ್ದಿವಿ ಎಂದು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next