Advertisement
ಶನಿವಾರ (ಸೆ.06) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ 700 ಕ್ಕೂ ಅಧಿಕ ಮತದಾರರನ್ನು ಅಕ್ರಮವಾಗಿ ನೋಂದಾಯಿಸಿಕೊಂಡು ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿತ್ತು. ಇದರ ವಿರುದ್ಧ ನಾನು ಅಂದಿನಿಂದಲೂ ಹೋರಾಟ ಮಾಡುತ್ತಿದ್ದೇನೆ. ಆದರೆ ಅಂದಿನ ಚುನಾವಣಾಧಿಕಾರಿಗಳು ನನ್ನ ಮಾತಿಗೆ ಬೆಲೆ ಕೊಡಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
Related Articles
Advertisement
ತಾಂತ್ರಿಕವಾಗಿ ಈಗಲೂ ಧಾರವಾಡ ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭಾಕ್ಕೆ ನಾನೇ ಅಧ್ಯಕ್ಷನಾಗಿದ್ದೇನೆ. ಒಂದೆಡೆ ನ್ಯಾಯಾಲಯ ನೂತನ ಆಡಳಿತ ಮಂಡಳಿಯ ಕಾರ್ಯಚಟುವಟಿಕೆಗಳಿಗೆ ತಡೆ ನೀಡಿದೆ. ಇನ್ನೊಂದೆಡೆ ಮಹಸಾಭೆಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯುವವರೆಗೂ ಸಂಘದ ನಿಯಮಗಳ ಅನ್ವಯ ನಾನೇ ಅಧ್ಯಕ್ಷನಾಗಿದ್ದೇನೆ. ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಹಣಸಿಮರದ ಹೇಳಿದರು.
ಏನಿದು ವಿವಾದ?
ಧಾರವಾಡ ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭೆ ಐದು ವರ್ಷದ ಆಡಳಿತ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಜುಲೈ 21, 2024 ರಂದು ಚುನಾವಣೆ ನಡೆದಿತ್ತು. 2800 ಮತದಾರರನ್ನು ಒಳಗೊಂಡಿದ್ದ ಮಹಾಸಭೆಯ ಅಧ್ಯಕ್ಷ ಸೇರಿದಂತೆ 31 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 700 ಕ್ಕೂ ಅಧಿಕ ಮತದಾರರಿಗೆ ನೀಡಿದ ಮಹಾಸಭೆ ಸದಸ್ಯತ್ವ ಅಕ್ರಮವಾಗಿದೆ ಎಂಬ ಕೂಗು ಕೇಳಿ ಬಂದಿತ್ತು. ಈ ಬಗ್ಗೆ ಚುನಾವಣೆಗೂ ಮುಂಚೆಯೇ ಆರೋಪ ಮಾಡಿದ್ದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಗುರುರಾಜ್ ಹುಣಸಿಮರದ, ಈ ಅಕ್ರಮದ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಅವರ ಮನವಿಯನ್ನು ಪುರಸ್ಕರಿಸಿದ ಜೆಎಂಎಫ್‌ಸಿ ನ್ಯಾಯಾಲಯ ಸದ್ಯಕ್ಕೆ ಆಯ್ಕೆಯಾಗಿರುವ ಧಾರವಾಡ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಘಟಕ ಯಾವುದೇ ರೀತಿಯ ಆಡಳಿತ ಚಟುವಟಿಕೆ ನಡೆಸದಂತೆ ಆದೇಶಿಸಿದೆ. ಮಹಾಸಭೆಯ ನಿಯಮಾವಳಿಗಳ ಅನ್ವಯ ಬರುವ ಅಕ್ಟೋಬರ್ ತಿಂಗಳಿನಿಂದ ಮುಂದಿನ ಐದು ವರ್ಷಗಳಿಗೆ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಬೇಕಿತ್ತು. ಇದೀಗ ನ್ಯಾಯಾಲಯ ಇದಕ್ಕೆ ತಡೆ ನೀಡಿದೆ.