Advertisement

ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಚಪ್ಪರ ಮುಹೂರ್ತ

02:35 PM Jan 31, 2018 | Team Udayavani |

ಉಳ್ಳಾಲ: ಅಬ್ಬಕ್ಕ ಉತ್ಸವ ಒಂದು ಪ್ರದೇಶದ ಉತ್ಸವವಾಗದೆ ಅದು ರಾಜ್ಯ, ರಾಷ್ಟ್ರ ಮಟ್ಟದ ಉತ್ಸವವಾಗಿ ಆಚರಿಸುವಂತಾಗಬೇಕು ಎಂದು ಆಹಾರ ಮತ್ತು ನಾಗರಿಕ ಸಚಿವ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ಸೋಮೇಶ್ವರ ಗ್ರಾಮದ ಕೊಲ್ಯ ಮೈದಾನದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ 2018ರ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

Advertisement

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್‌ ಅಧ್ಯಕ್ಷರಾದ ಮಹಮ್ಮದ್‌ ಮೋನು, ಸದಸ್ಯರಾದ ರಾಮಚಂದ್ರ ಕುಂಪಲ, ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸದಾಶಿವ ಉಳ್ಳಾಲ್‌, ಹಿರಿಯ ಮುಖಂಡ ಸೀತಾರಾಮ ಬಂಗೇರ, ಡಾ| ಶಿವಕುಮಾರ್‌ ಮಗದ, ಎಂ. ಸುರೇಶ್ಚಂದ್ರ ಶೆಟ್ಟಿ, ಭಾಸ್ಕರ್‌ ಐತಾಳ್‌, ಕ್ಲೇರಾ ಕುವೆಲ್ಲೊ, ಜಯಂತಿ, ಪ್ರಕಾಶ್‌ ಕರ್ಕೇರ, ಸುಂದರ ಕುಂಪಲ, ರೋಹಿದಾಸ್‌ ಭಟ್‌ನಗರ, ದಮಯಂತಿ ಉಳ್ಳಾಲ, ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಪದಾಧಿಕಾರಿಗಳಾದ ಯು.ಪಿ. ಆಲಿಯಬ್ಬ, ಅಬ್ದುಲ್‌ ಅಜೀಜ್‌ ಹಕ್‌, ತಾರನಾಥ ರೈ, ತೋನ್ಸೆ ಪುಷ್ಕಳ್‌ ಕುಮಾರ್‌, ಡಿ.ಎನ್‌. ರಾಘವ, ನಿರ್ಮಲ್‌ ಕುಮಾರ್‌, ಪ್ರಭಾಕರ್‌ ಜೋಗಿ, ಸತೀಶ್‌ ಭಂಡಾರಿ, ಬಾದ್‌ಷಾ ಸಾಂಬಾರ್‌ ತೋಟ, ಪದ್ಮಾವತಿ ಅಮೀನ್‌, ನಮಿತಾ ಶ್ಯಾಂ, ವಿಜಯಲಕ್ಷ್ಮೀ ಬಿ. ಶೆಟ್ಟಿ, ದೇವಕಿ ಆರ್‌. ಉಳ್ಳಾಲ್‌, ಧನಲಕ್ಷ್ಮೀ , ಶಶಿಕಲಾ ಗಟ್ಟಿ, ಮಲ್ಲಿಕಾ ಭಂಡಾರಿ, ಅನುಪಮಾ ಸಿ. ಬಬ್ಬುಕಟ್ಟೆ, ಹೇಮಾ ಯು., ವಾಣಿ ಲೋಕಯ್ಯ, ಗೀತಾ ಸಲ್ಡಾನಾ, ದೇವಕಿ ಯು. ಬೋಳಾರ್‌ ಉಪಸ್ಥಿತರಿದ್ದರು. ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್‌ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವನೆಗೈದರು. ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next