ಚೆನ್ನೈ: ದಂತಕಳ್ಳ ಮತ್ತು ಪೊಲೀಸರ ಗುಂಡಿಗೆ ಬಲಿಯಾದ ವೀರಪ್ಪನ್‌ನ ಹಿರಿಯ ಸಹೋದರ ಮಡೈವನ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
Advertisement
ಈತ ಅರಣ್ಯ ಅಧಿಕಾರಿ ಚಿದಂಬರಂ ಅವರನ್ನು ಹತ್ಯೆ ಮಾಡಿದ್ದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
1987ರಿಂದಲೂ ಈತ ಸೇಲಂನ ಕೇಂದ್ರ ಕಾರಾಗೃಹದಲ್ಲೇ ಜೈಲುವಾಸ ಅನುಭವಿಸುತ್ತಿದ್ದ. ಮೇ 1ರಂದು ಈತನಿಗೆ ಹೃದಯಾಘಾತವಾಗಿದ್ದು, ಸೇಲಂ ಆಸ್ಪತ್ರೆಗೆ ಸೇರಿಸಲಾಗಿತ್ತು.
ಅಲ್ಲೇ ಚಿಕಿತ್ಸೆ ಫಲಕಾರಿಯಾಗದೇ ಸತ್ತಿದ್ದಾನೆ. 2004ರ ಅ.18ರಂದು ವೀರಪ್ಪನ್‌ನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇಂದಿಗೂ ಇವನ ಸಹಚರರು, ಸಂಬಂಧಿಗಳು ತಮಿಳುನಾಡಿನ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
Related Articles
Advertisement