Advertisement

27 ವರ್ಷಗಳ ಬಳಿಕ ಸೆರೆ ಸಿಕ್ಕ ವೀರಪ್ಪನ್‌ ಸಹಚರೆ ಸೆಲ್ವಿ

11:15 PM Feb 02, 2020 | Lakshmi GovindaRaj |

ಕೊಳ್ಳೇಗಾಲ: ನರಹಂತಕ ವೀರಪ್ಪನ್‌ ದುಷ್ಕೃತ್ಯಗಳಿಗೆ ನೆರವಾಗಿದ್ದ ಹಾಗೂ ಹಲವು ಪ್ರಕರಣಗಳಿಗೆ ಬೇಕಾಗಿದ್ದ ಮಹಿಳೆಯನ್ನು ಪೊಲೀಸರು ತಾಲೂಕಿನ ಜಾಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಬಂಧಿಸಿದ್ದಾರೆ. ಕಾಡುಗಳ್ಳ ವೀರಪ್ಪನ್‌ನ ಸಹಚರರ ಪೈಕಿ ಓರ್ವನಾಗಿದ್ದ ಗ್ರಾಮದ ವೇಲೆಯನ್‌ ಪತ್ನಿ ಸೆಲ್ವಿ (40) ಬಂಧಿತ ಮಹಿಳೆ.

Advertisement

ಈಕೆ ವೀರಪ್ಪನ್‌ ತಂಡದ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 27 ವರ್ಷಗಳ ಬಳಿಕ ಪೊಲೀಸರಿಗೆ ಸೆರೆಸಿಕ್ಕಿದ್ದಾಳೆ. ಈ ಹಿಂದೆ ವೀರಪ್ಪನ್‌ ತಂಡ ನಡೆಸಿದ್ದ ರಾಮಾಪುರ ಪೊಲೀಸ್‌ ಠಾಣೆ ಸ್ಫೋಟ ಪ್ರಕರಣ ಹಾಗೂ ಪೊಲೀಸ್‌ ಠಾಣೆಯಲ್ಲಿದ್ದ ಬಂದೂಕುಗಳ ಅಪಹರಣ ಪ್ರಕರಣಗಳಲ್ಲಿ ಸೆಲ್ವಿ ಭಾಗಿಯಾಗಿದ್ದ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ಕಡತವನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೆಲ್ವಿ ಪೊಲೀಸರಿಗೆ ಸಿಗದೆ ಕಾಡಂಚಿನ ಗ್ರಾಮಗಳಲ್ಲಿ ತಲೆಮರೆಸಿ ಕೊಂಡಿದ್ದಳು. ಈ ನಡುವೆ ಈಕೆ ಪತಿ ವೇಲೆಯನ್‌ ಮೃತಪಟ್ಟಿದ್ದ. ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಆರೋಪಿ ಗೈರಾದ ಹಿನ್ನೆಲೆಯಲ್ಲಿ ಬಾಡಿ ವಾರೆಂಟ್‌ ಆದೇಶ ಹೊರಡಿಸಲಾಗಿತ್ತು. ಕೊನೆಗೆ ಆರೋಪಿ ತಾಲೂಕಿನ ಜಾಗೇರಿ ಗ್ರಾಮದಲ್ಲಿ ತೋಟದ ಮನೆಯೊಂದರಲ್ಲಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಸೆಲ್ವಿ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next