Advertisement

ಜಿ-23ಯಲ್ಲಿ ಗುರುತಿಸಿಕೊಳ್ಳಲ್ಲ: ಮಾಜಿ ಮುಖ್ಯಮಂತ್ರಿ ಮೊಯ್ಲಿ ಸ್ಪಷ್ಟನೆ

10:20 PM Mar 01, 2021 | Team Udayavani |

ನವದೆಹಲಿ: ಕಾಂಗ್ರೆಸ್‌ ನಾಯಕತ್ವದ ಕೂಗೆತ್ತಿರುವ ಜಿ-23 ತಂಡದಲ್ಲಿ ತಾವಿಲ್ಲವೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

Advertisement

ಫೆ. 27ರಂದು ಇದೇ ತಂಡದ ಸದಸ್ಯರು, ಕಾಶ್ಮೀರದಲ್ಲಿ ಸಮಾವೇಶ ನಡೆಸಿದ್ದಾರೆ. ಇದಕ್ಕೆ ಮೊಯ್ಲಿ ಗೈರಾಗಿದ್ದರು. ಈ ಬಗ್ಗೆ ಪಿಟಿಐ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ತಾವು ಜಿ-23 ಗುಂಪಿನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರಲ್ಲದೆ, ರಾಹುಲ್‌ ಅವರೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಿಂದಿರುಗಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೂಂದೆಡೆ, ಜಿ-23ಯ ಮತ್ತೂಬ್ಬ ಸದಸ್ಯ ಆನಂದ್‌ ಶರ್ಮಾ ಅವರು ಪಶ್ಚಿಮ ಬಂಗಾಳ ಚುನಾವಣೆಗಾಗಿ ಕಾಂಗ್ರೆಸ್‌ ಹೆಣೆಯುತ್ತಿರುವ ಕಾರ್ಯತಂತ್ರ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲಿ, ಎಡಪಕ್ಷಗಳೊಂದಿಗೆ ಕೈ ಜೋಡಿಸಿರುವುದು ಕಾಂಗ್ರೆಸ್‌ನ ಮೂಲ ಪರಿಕಲ್ಪನೆಯನ್ನೇ ಅಲುಗಾಡಿಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತದ ವಾತಾವರಣ ಅಶುದ್ಧ: ಮತ್ತೆ ಕಿಡಿಕಾರಿದ ಟ್ರಂಪ್‌

Advertisement

Udayavani is now on Telegram. Click here to join our channel and stay updated with the latest news.

Next