ಒಂದು ಕಡೆ ಫ್ಯಾಮಿಲಿ ಸೆಂಟಿಮೆಂಟ್, ಇನ್ನೊಂದು ಕಡೆ ಲವ್, ಮತ್ತೂಂದು ಕಡೆ ಬೇಡ ಬೇಡವೆಂದರೂ ಕೈ ಬೀಸಿ ಕರೆಯುವ ರೌಡಿಸಂ… ನಾಯಕನ ಬಾಳಲ್ಲಿ ಈ ಮೂರು ಅಂಶಗಳು ಬಂದು ಹೋಗುತ್ತವೆ. ಅಂತಿಮವಾಗಿ ಆತ ಯಾವುದನ್ನು ಆಯ್ಕೆ ಮಾಡುತ್ತಾನೆ… ಈ ಕುತೂಹಲ ನಿಮಗಿದ್ದರೆ ನೀವು “ವೀರಂ’ ಸಿನಿಮಾ ನೋಡಬೇಕು.
“ವೀರಂ’ ಒಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಇಲ್ಲಿನ ಮಾಸ್ ಅಂಶಗಳಿಗೆ ಕ್ಲಾಸ್ ಫ್ರೆàಮ್ ಕೂಡಾ ಇದೆ. ಹಾಗಾಗಿ, ಇದನ್ನು ಫ್ಯಾಮಿಲಿ ಡ್ರಾಮಾವಾಗಿಯೂ ನೋಡಬಹುದು. ಈ ಚಿತ್ರದ ನಿರ್ದೇಶಕರ ಪರಮುದ್ದೇಶ ಇಡೀ ಸಿನಿಮಾವನ್ನು ಹೈವೋಲ್ಟೆàಜ್ ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಅಂಶಗಳೊಂದಿಗೆ ಕಟ್ಟಿಕೊಡೋದು. ಅದನ್ನು ನೀಟಾಗಿ ಮಾಡಿದ್ದಾರೆ ಕೂಡಾ. ಆ ಮಟ್ಟಿಗೆ “ವೀರಂ’ ಮೆಚ್ಚುಗೆಗೆ ಪಾತ್ರವಾಗುವ ಸಿನಿಮಾ. ನಿರ್ದೇಶಕರಿಗೆ ತಾನು ಏನು ಹೇಳಬೇಕು ಮತ್ತು ಅದನ್ನು ಹೇಗೆ ಹೇಳಬೇಕು ಎಂಬ ಸ್ಪಷ್ಟತೆ ಇರುವುದರಿಂದ ಚಿತ್ರ ಗೊಂದಲಮುಕ್ತ.
ಇನ್ನು ಕಥೆಯ ಬಗ್ಗೆ ಹೇಳುವುದಾದರೆ ಅಕ್ಕನ ಪ್ರೀತಿಯಲ್ಲಿ ಬೆಳೆದಿರುವ ಇಬ್ಬರು ಹುಡುಗರು ಅನಿವಾರ್ಯವಾಗಿ ರೌಡಿಸಂ ಫೀಲ್ಡ್ ಗೆ ಎಂಟ್ರಿಕೊಟ್ಟಾಗ, ಅದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ. ಅದು ಫ್ಯಾಮಿಲಿ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬ ಅಂಶಗಳೊಂದಿಗೆ ಚಿತ್ರದ ಕಥೆ ಸಾಗುತ್ತದೆ. ಕಾಲೇಜ್ ಹಿನ್ನೆಲೆಯಿಂದ ಆರಂಭವಾಗುವ ಕಥೆ ಮುಂದೆ ಹಲವು ಮಜಲುಗಳನ್ನು ದಾಟಿಕೊಂಡು ಬರುತ್ತದೆ. ಅಂತಿಮವಾಗಿ ಒಂದು ಮಾಸ್ ಸಿನಿಮಾವಾಗಿ ರಂಜಿಸುತ್ತದೆ. ಈ ಸಿನಿಮಾದ ಹೈಲೈಟ್‌ಗಳಲ್ಲಿ ಚಿತ್ರದ ಸಂಭಾಷಣೆ ಎನ್ನಬಹುದು. ರಗಡ್ ಹಿನ್ನೆಲೆಯ ಕಥೆಗೆ ಅಷ್ಟೇ ಖಡಕ್ ಆಗಿರುವ ಪಂಚಿಂಗ್ ಸಂಭಾಷಣೆ ಬರೆಯಲಾಗಿದೆ.
ಇನ್ನು, ಚಿತ್ರದಲ್ಲಿ ಲವ್‌ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವೂ ಇದೆ. ಆದರೆ, ಯಾವುದನ್ನೂ ಅತಿಯಾಗಿ ತೋರಿಸದೇ, ಕಥೆಯನ್ನು ಮುಂದುವರೆಸಲಾಗಿದೆ. ಇಡೀ ಸಿನಿಮಾದ ಹೈಲೈಟ್ ಎಂದರೆ ಅದು ನಾಯಕ ಪ್ರಜ್ವಲ್ ದೇವರಾಜ್. ಇಲ್ಲಿ ಅವರು ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲವರ್‌ಬಾಯ್, ಆ್ಯಕ್ಷನ್ ಹೀರೋ ಹಾಗೂ ಫ್ಯಾಮಿಲಿ ಮ್ಯಾನ್… ಈ ಮೂರರಲ್ಲೂ ಪ್ರಜ್ವಲ್ ಇಷ್ಟವಾಗುತ್ತಾರೆ. ಅದರಲ್ಲೂ ತಾನು ಔಟ್ ಅಂಡ್ ಔಟ್ ಮಾಸ್ ಸಿನಿಮಾಗಳಿಗೂ ಸೈ ಎಂಬುದನ್ನು ಮತ್ತೂಮ್ಮೆ ಪ್ರಜ್ವಲ್ ಸಾಬೀತು ಮಾಡಿದ್ದಾರೆ.
ನಾಯಕಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ವಿಲನ್ ಆಗಿ ನಟಿಸಿರುವ “ಶಿಷ್ಯ’ ದೀಪಕ್ ಗಮನ ಸೆಳೆಯುತ್ತಾರೆ. ಮುಂದೆ ಒಳ್ಳೆಯ ಅವಕಾಶ ಸಿಕ್ಕರೆ ನೆಗೆಟಿವ್ ಪಾತ್ರಗಳಲ್ಲಿ ದೀಪಕ್ ಮಿಂಚುವ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಬಲರಾಜವಾಡಿ, ಅಚ್ಯುತ್ ಕುಮಾರ್, ಶ್ರುತಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಂದು ಆ್ಯಕ್ಷನ್ ಕಂ ಫ್ಯಾಮಿಲಿ ಡ್ರಾಮಾವನ್ನು ಬಯಸುವವರಿಗೆ “ವೀರಂ’ ಇಷ್ಟವಾಗಬಹುದು.
ರವಿ ರೈ