ಹುಮನಾಬಾದ: ಪಟ್ಟಣದ ಕುಲದೇವ, ಐತಿಹಾಸಿಕ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಹುಮನಾಬಾದ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಸಂಕ್ರಮಣ ಹಬ್ಬದ ಗುರುವಾರ ಸಂಜೆ ಚಾಲನೆ ನೀಡಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ವಿವಿಧ ರೀತಿಯ ನಿಯಮಗಳು ಪಾಲಿಸಿಕೊಂಡು ಸರಳವಾಗಿ ವಿವಿಧ ದಾರ್ಮಿಕ ಆಚರಣೆ ನಡೆದವು. ದೇವಸ್ಥಾನ ಆವರಣದಿಂದ ಸಂಗೀತ ವಾದ್ಯಗಳೊಂದಿಗೆ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವೀರಭದ್ರೇಶ್ವರ ದೇವರ ಶಲ್ಯ ಸುಡುವ
ಕಾರ್ಯಕ್ರಮ ನಡೆಯಿತು.
ಪ್ರತಿ ವರ್ಷ ಪಲ್ಲಕ್ಕಿ ಮೇರವಣಿಗೆ ಸಾಗುವ ರಸ್ತೆಗಳಲ್ಲಿ ಭಕ್ತರು ದೇವರಿಗೆ ಶಾಲು ಹೊದಸಿ, ನೈವೇದ್ಯ ಅರ್ಪಿಸಿ, ದೇವರ ದರ್ಶನ ಪಡೆಯುವುದು ಸಾಮಾನ್ಯ ಇತ್ತು. ಆದರೆ ಈ ವರ್ಷ ಈ ಯಾವುದೇ ಆಚರಣೆಗೆ ಆಡಳಿತ ಮಂಡಳಿ ಅವಕಾಶ ನೀಡಲಿಲ್ಲ.
ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರಶಿವಾಚಾರ್ಯರು, ಶಾಸಕ ರಾಜಶೇಖರ ಪಾಟೀಲ, ಡಾ| ಚದ್ರಶೇಖರ ಪಾಟೀಲ, ಜಿಪಂ ಮಾಜಿ ಸದಸ್ಯ ವೀರಣ್ಣಾ ಪಾಟೀಲ, ತಹಶೀಲ್ದಾರ್ ನಾಗಯ್ಯ ಹಿರೇಮಠ,ಪ್ರಮುಖರಾದ ಮಲ್ಲಿಕಾರ್ಜುನ ಮಾಶೇಟ್ಟಿ, ಶರಣಪ್ಪಾ ರೆಚಟ್ಟಿ, ದತ್ತಕುಮಾರ ಚಿದ್ರಿ, ಅರವಿಂದ ಅಗಡಿ, ಗಿರೀಶ ಪಾಟೀಲ, ಮಲ್ಲಿಕಾರ್ಜುನ ಮುಗುಳಿ, ಬಾಬುರಾವ ಪೊಚಂಪಳ್ಳಿ, ಸಿದ್ದು ಚಕಪಳ್ಳಿ, ರಾಚಣ್ಣಾ ಧುಮನಸೂರೆ, ವಿಜಯಕುಮಾರ ಕೋರಿ, ಶ್ರೀನಿವಾಸ ಚವ್ಹಾಣ, ಶರಣಪ್ಪ ಗುಡ್ಡಾ, ಸಂಜು ಸ್ವಾಮಿ, ಸೋಮಶೇಖರ ಮಠಪತಿ, ಕೈಲಾಸ ಕುಂಬಾರ್, ಈರಣ್ಣ ಮಡಿವಾಳ, ಕಂಠೆಪ್ಪಾ ಸ್ವಾಮಿ, ಗುರುಲಿಂಗ ರೇಷ್ಮಿ, ಭೀಮಣ್ಣಾ ಕೊತ್ತಾ ಸೇರಿದಂತೆ ನೂರಾರು ಭಕ್ತರು ಇದ್ದರು.