Advertisement

ವೀರ ಕೇಸರಿ ಕಲಾವೃಂದ ಮುಂಬಯಿ ಇದರ 38ನೇ ವಾರ್ಷಿಕೋತ್ಸವ ಸಂಭ್ರಮ

04:05 PM Apr 27, 2017 | |

ಮುಂಬಯಿ: ವೀರ ಕೇಸರಿ ಕಲಾವೃಂದ ಮುಂಬಯಿ ಇದರ 38ನೇ ವಾರ್ಷಿಕೋತ್ಸವ ಸಂಭ್ರಮವು ಎ. 16ರಂದು ಗೋರೆಗಾಂವ್‌ ಪಶ್ಚಿಮದ ಕೇಶವ್‌ ಗೋರೆ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.

Advertisement

ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಅಧ್ಯಕ್ಷೆ ಶಕುಂತಳಾ ಪ್ರಭು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ| ಕರುಣಾಕರ ಶೆಟ್ಟಿ ಪಣಿಯೂರು, ಸಂಗೀತ ಕ್ಷೇತ್ರದ ಸಾಧಕ ಶೇಖರ ಸಸಿಹಿತ್ಲು ಮತ್ತು ಶಶಿಕಲಾ ಕೋಟೆಕಾರ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಭರತನಾಟ್ಯ ಕಲಾವಿದೆ ಕುಮಾರಿ ಶ್ರುತಿ ಶೇಖರ್‌ ಶೆಟ್ಟಿ  ಹಾಗೂ ಗಾಯಕಿ ವಿನಯ ಅನಂತಕೃಷ್ಣ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ಸಮ್ಮಾನಕ್ಕೆ ಉತ್ತರಿಸಿದ ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರು, ಬೇರೆ ಸಂಘ ಸಂಸ್ಥೆಗಳು ಗುರುತಿಸದ ಸಾಧಕರನ್ನು ಹುಡುಕಿ ಅವರನ್ನು ಸಮ್ಮಾನಿಸಿದ ವೀರಕೇಸರಿ ಕಲಾವೃಂದದ ಕಾರ್ಯ ಸ್ತುತ್ಯರ್ಹ. ಯಾವುದೇ ಸಮ್ಮಾನದ ಬೆನ್ನುಬೀಳದ ನನ್ನನ್ನು ಗುರುತಿಸಿ ಗೌರವಿಸಿದ ವೀರಕೇಸರಿ ಕಲಾವೃಂದಕ್ಕೆ ಋಣಿಯಾಗಿದ್ದೇನೆ. ಮುಂದಿನ ದಿನ

ಗಳಲ್ಲಿಯೂ ನಾನು ಸಾಹಿತ್ಯ ಕ್ಷೇತ್ರದ ಹೊಸ ಪ್ರತಿಭೆಗಳಿಗೆ ನನ್ನಿಂದಾ ದಷ್ಟು ಪ್ರೋತ್ಸಾಹವನ್ನು ಕೊಡುತ್ತಾಬರುತ್ತೇನೆ. ಜಿಡಿ ಜೋಶಿ ಪ್ರತಿಷ್ಠಾ

ನದ ಮೂಲಕ ಮನೆಮನೆಯಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೊಸ ಪ್ರತಿಭೆಗಳನ್ನು ಬೆಳಕಿಗೆ  ತರುವ  ಯತ್ನ  ಮಾಡು
ತ್ತಿದ್ದೇವೆ ಎಂದರು.

Advertisement

 ಇನ್ನೋರ್ವ ಸಮ್ಮಾನಿತ ಶೇಖರ ಸರ್ಸಿಹಿತ್ಲು ಅವರು ಮಾತನಾಡಿ,  ಸುಮಾರು 35 ವರ್ಷದಿಂದ ಸಂಗೀತ ಕ್ಷೇತ್ರದಲ್ಲಿ ದುಡಿಯುತ್ತಾ ಬಂದಿದ್ದೇನೆ. ಯಾವುದೇ ಅಪೇಕ್ಷೆ, ಫಲಾಪೇಕ್ಷೆಯಿಲ್ಲದೆ ದುಡಿದ ನಾನು ನನ್ನ$ಮನಸಿನ ಸಂತೋಷಕ್ಕೆ ಸಂಗೀತವನ್ನು ಆರಿಸಿಕೊಂಡಿದ್ದೇನೆ. ನನ್ನ ಖುಷಿಗೆ ಬಳಸಿಕೊಂಡ ಸಂಗೀತವನ್ನು ಮೆಚ್ಚಿ ತಾವು ಇಂದು ನನ್ನನ್ನು ಸಮ್ಮಾನಿಸಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಶಶಿಕಲಾ ಕೋಟೆಕಾರ್‌ ಸಮ್ಮಾನ ಸ್ವೀಕರಿಸಿ ಮಾತನಾಡಿ, ಗೋರೆಗಾಂವ್‌ ಪಹಾಡಿ ಸ್ಕೂಲಿನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಹಲವು ವರ್ಷಗಳ ಹಿಂದೆಯೇ ನಿವೃತ್ತಿ ಹೊಂದಿ ನನ್ನಷ್ಟಕ್ಕೇ ನಾನು ಬದುಕುತ್ತಿದ್ದರೂ  ನನ್ನನ್ನು ಗುರುತಿಸಿ ಗೌರವಿಸಿದ್ದು ಈ ಸಂಸ್ಥೆಯ ಹೆಗ್ಗಳಿಕೆ ಎಂದರು.

ಸಮಾರಂಭದಲ್ಲಿ ಅತಿಥಿಗಳಾಗಿ ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷ ಮಹಾಬಲ ಕುಂದರ್‌, ಚಾಮುಂಡೇಶ್ವರಿ ದೇವಸ್ಥಾನ ಥಾಣೆ ಆಡಳಿತ ಮೊಕ್ತೇಸರ ಶಿವಪ್ರಸಾದ ಪೂಜಾರಿ, ಜಗನ್ನಾಥ ಕೋಟ್ಯಾನ್‌, ಸಂಗೀತಕಾರ ರಾಜಕುಮಾರ್‌ ಕಾರ್ನಾಡ್‌, ಫಸ್ಟ್‌ ಸ್ಟೆಪ್‌ ನರ್ಸರಿ ಸ್ಕೂಲ್‌ ಸಫಲ ಇದರ ನಿರ್ದೇಶಕಿ ಪುಷ್ಪಾ ಅಶೋಕ್‌ ಜೋಶಿ, ವೀರಕೇಸರಿ ಕಲಾವೃಂದದ ಸಾಂಸ್ಕೃತಿಕ  ಸಮಿತಿಯ ಕಾರ್ಯಾಧ್ಯಕ್ಷ ಶ್ಯಾಮ್‌ ಟಿ. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಮೇಶ್‌ ಶೆಟ್ಟಿ ಪಯ್ನಾರು, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೆ. ವಿ. ಆರ್‌. ಐತಾಳ್‌, ಪ್ರೇಮನಾಥ ಸುವರ್ಣ ಉಪಸ್ಥಿತರಿದ್ದರು. ಭಾಸ್ಕರ ಸುವರ್ಣ ಸಸಿಹಿತ್ಲು, ರತ್ನಾಕರ ಪೂಜಾರಿ, ಶಾಂಭವಿ ಪೂಜಾರಿ, ಸುನಿಲ್‌ ರಾವ್‌, ಮಹದೇವ ಸಾಲ್ಯಾನ್‌, ಪ್ರಸನ್ನ ಕುಂಟಾಡಿ, ಉಷಾ ಪಿ. ಸುವರ್ಣ ಮೊದಲಾದವರು ಸಹಕರಿಸಿದರು. ಕವಿ, ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ ಹಾಗೂ ಭಾಸ್ಕರ ಸುವರ್ಣ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಶೆಟ್ಟಿ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next