Advertisement

ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟಿಸಿದ ಪ್ರಧಾನಿ

01:29 PM Jul 18, 2023 | Team Udayavani |

ಪೋರ್ಟ್ ಬ್ಲೇರ್‌: ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

Advertisement

ಸುಮಾರು 710 ಕೋಟಿ ವೆಚ್ಚದಲ್ಲಿ ಈ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗಿದ್ದು ಇದರಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪರ್ಕ ವೇಗ ಹೆಚ್ಚಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಹಿಂದೆ ಇದ್ದ ಟರ್ಮಿನಲ್‌ನ ಸಾಮರ್ಥ್ಯವು ಪ್ರತಿದಿನ 4,000 ಪ್ರವಾಸಿಗರಿಗೆ ಸೇವೆ ನೀಡಲು ಮಾತ್ರ ಶಕ್ತವಾಗಿತ್ತು, ಆದರೆ ಹೊಸ ಟರ್ಮಿನಲ್ ನಿರ್ಮಾಣದಿಂದ ಪ್ರತಿದಿನ ಸುಮಾರು 11,000 ಪ್ರವಾಸಿಗರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು. ಈಗ 10 ವಿಮಾನಗಳು ಏಕಕಾಲದಲ್ಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಲು ಸಾಧ್ಯವಾಗಲಿದೆ ಎಂದು ಹೇಳಿದರು. ಅಷ್ಟು ಮಾತ್ರವಲ್ಲದೆ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವು ಪ್ರಯಾಣದ ಸುಲಭತೆ ಮತ್ತು ವ್ಯವಹಾರವನ್ನು ಸುಲಭಗೊಳಿಸುವ ಜೊತೆಗೆ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಹೊಸ ಟರ್ಮಿನಲ್ ಕಟ್ಟಡದ ವಿಸ್ತೀರ್ಣವು ಸುಮಾರು 40,800 ಚದರ ಮೀಟರ್ ಹೊಂದಿದ್ದು. ಮಾಹಿತಿಯ ಪ್ರಕಾರ, ಈ ಟರ್ಮಿನಲ್ ನಲ್ಲಿ ಪ್ರತಿ ವರ್ಷ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಅಲ್ಲದೆ ದಿನಕ್ಕೆ 11,000 ಪ್ರವಾಸಿಗರನ್ನು ನಿಭಾಯಿಸುವ ಸಾಮರ್ಥ್ಯ ಇರಲಿದೆ. ಇದರೊಂದಿಗೆ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ 80 ಕೋಟಿ ವೆಚ್ಚದಲ್ಲಿ ಎರಡು ಬೋಯಿಂಗ್-767 -400 ಮತ್ತು ಎರಡು ಏರ್‌ಬಸ್ -321 ಮಾದರಿಯ ವಿಮಾನಗಳಿಗೆ ಸೂಕ್ತವಾದ ಏಪ್ರನ್ ಅನ್ನು ಸಹ ಸಿದ್ಧಪಡಿಸಲಾಗಿದೆ. ಇದರೊಂದಿಗೆ ವಿಮಾನ ನಿಲ್ದಾಣದಲ್ಲಿ ಏಕಕಾಲಕ್ಕೆ 10 ವಿಮಾನಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದರು.

ಒಟ್ಟು 28 ಚೆಕ್​ ಕೌಂಟರ್​ಗಳನ್ನು ಹೊಂದಿದ್ದು ಮೂರು ಪ್ರಯಾಣಿಕರ ಬೋರ್ಡಿಂಗ್​ ಬ್ರಿಡ್ಜ್​ಗಳನ್ನ ನಿರ್ಮಿಸಲಾಗಿದೆ. ಉನ್ನತ ತಂತ್ರಜ್ಞಾನದೊಂದಿಗೆ ಟರ್ಮಿನಲ್​ ರೂಫ್​ಗೆ ಸ್ಕೈಲೈಟ್ಸ್​ ಅನ್ನು ಅಳವಡಿಸಲಾಗಿದ್ದು ಇವು ದಿನದ 12 ಗಂಟೆವರೆಗೆ ನೈಸರ್ಗಿವಾದ ಬೆಳಕನ್ನು ನೀಡಲಿದ್ದು ವಿದ್ಯುತ್ ಬೆಳಕಿನ ಅಗತ್ಯ ಇಲ್ಲವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next