Advertisement

ಹೊಸ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್ ಗೆ ವೇದಿಕಾ ನಾಯಕಿ

12:17 PM Feb 22, 2022 | Team Udayavani |

ಪ್ರಜ್ವಲ್‌ ದೇವರಾಜ್‌ ನಟನೆಯ “ಗಣ’ ಚಿತ್ರ ಆರಂಭವಾಗಿರೋದು ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ನಾಯಕಿಯ ಎಂಟ್ರಿಯಾಗಿದೆ. ಅದು ವೇದಿಕಾ. ಯಾವ ವೇದಿಕಾ ಎಂದು ನೀವು ಕೇಳಬಹುದು. ಅಂದಹಾಗೆ, ವೇದಿಕಾ ಕನ್ನಡಕ್ಕೆ ಹೊಸ ಹುಡುಗಿಯಲ್ಲ. ಈಗಾಗಲೇ “ಸಂಗಮ’, “ಶಿವಲಿಂಗ’ ಸೇರಿದಂತೆ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗ “ಗಣ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

Advertisement

ಆರಂಭದಲ್ಲಿ ಈ ಚಿತ್ರಕ್ಕೆ ಸಾರಾ ನಾಯಕಿ ಎಂದು ಹೇಳಲಾಗಿತ್ತು. ಆಕ್ಷನ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಹರಿ ಪ್ರಸಾದ್‌ ಜಕ್ಕ ನಿರ್ದೇಶಿಸುತ್ತಿದ್ದಾರೆ. ತೆಲುಗಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಹರಿಪ್ರಸಾದ್‌ ಅವರಿಗೆ ಕನ್ನಡದಲ್ಲಿ ಮೊದಲ ಚಿತ್ರ. “ಚರಿ ಕ್ರಿಯೇಷನ್ಸ್‌’ ಲಾಂಛನದಲ್ಲಿ ಪಾರ್ಥು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್‌ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ಥಿಯೇಟರ್‌ ಮುಂದೆ ಫ್ಯಾನ್ಸ್‌ ಕಟೌಟ್‌! ಫೆ. 25ಕ್ಕೆ ‘ಓಲ್ಡ್‌ ಮಾಂಕ್‌’ ಚಿತ್ರ ತೆರೆಗೆ

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್‌ ಸೀಳಿನ್‌ ಸಂಗೀತ ನೀಡುತ್ತಿದ್ದಾರೆ. ಜೈ ಆನಂದ್‌ ಛಾಯಾಗ್ರಹಣ ಹಾಗೂ ಹರೀಶ್‌ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.  ಸಂಪತ್‌ ಕುಮಾರ್‌, ರವಿ ಕಾಳೆ, ಶಿವರಾಜ್‌ ಕೆ ಆರ್‌ ಪೇಟೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next