Advertisement
ಗೌತಮರ ಶಾಪ, ಕಲಿಯ ಪ್ರಭಾವದಿಂದ ಸಜ್ಜನರಲ್ಲಿ ಜ್ಞಾನ ಹ್ರಾಸವಾಗಿ ಅಜ್ಞಾನ ವಿಜೃಂಭಿಸಿ ದಾಗ ತಣ್ತೀಜ್ಞಾನದ ಬೆಳಕಾಗಿ ಬಂದವರೇ ಶ್ರೀ ವೇದವ್ಯಾಸರು. ಬೆಸ್ತರ ಹೆಣ್ಣು ಸತ್ಯವತಿಯಲ್ಲಿ ಅವತರಿಸಿ ಲೋಕಕ್ಕೆಲ್ಲ ಜ್ಞಾನದ ಬೆಳಕನ್ನು ನೀಡಿದ ಭಗವಂತನ ಅವತಾರವೇ ಶ್ರೀ ವ್ಯಾಸ. ವೈವಸ್ವತ ಮನ್ವಂತರದ ಈ 28ನೆಯ ದ್ವಾಪರದಲ್ಲಿ ಭಾರತ ಖಂಡದಲ್ಲೇ ಅವತರಿಸಿ ಜ್ಞಾನ ಹಾಗೂ ಬಲಕಾರ್ಯ ವನ್ನು ತೋರಿದ ಮೇರುಶಕ್ತಿ ಶ್ರೀ ವ್ಯಾಸ.
Related Articles
Advertisement
ವೇದಾರ್ಥಗಳ ನಿರ್ಣಯಕ್ಕಾಗಿ ವೇದಾಂತ ಸೂತ್ರಗಳೆಂದು ಪ್ರಸಿದ್ಧವಾದ ಬ್ರಹ್ಮಸೂತ್ರಗಳನ್ನು ರಚಿಸಿ ಭಗವಂತನ ಗುಣಮಹಾತೆ¾ಯನ್ನು ಸ್ಪಷ್ಟೀಕರಿಸಿದರು. ಸಜ್ಜನರ ಉದ್ಧಾರಕ್ಕಾಗಿ ಸಮಗ್ರ ಮಹಾಭಾರತದ ರಚನೆಯನ್ನು ಐತಿಹಾಸಿಕ ಭಾರತ ಘಟಿಸುವ ಮೊದಲೇ ರಚಿಸಿ ತಮ್ಮ ಸರ್ವಜ್ಞತ್ವವನ್ನು ಮೆರೆದರು. ಮಹಾಭಾರತದ ಪ್ರತಿಯೊಂದು ಘಟನೆ, ಪಾತ್ರಗಳು, ಸಂಭಾಷಣೆಗಳು ಚಾಚೂ ತಪ್ಪದೆ ಮೊದಲೇ ತಮ್ಮ ಕೃತಿ ಭಾರತದಲ್ಲಿ ತಿಳಿಸಿದ ವ್ಯಾಸರು ಭಗವಂತನ ಅವತಾರವೇ ಎನ್ನುವುದನ್ನು ದೃಢಪಡಿಸಿದರು (ಕೋ ಹ್ಯನ್ಯಃ ಪುಂಡರೀಕಾಕ್ಷಾನ್ಮಹಾಭಾರತ ಕೃದ್ಭವೇತ್). ಭಾರತದ ಪಾತ್ರಧಾರಿಗಳಾಗಿ ಅದರ ಕತೃìಗಳಾಗಿ ಮೆರೆದ ವ್ಯಾಸರ ಸಾಹಸ ಕಲ್ಪನಾತೀತ. ಕರತಲ ಆಮಲಕದಂತೆ ಸಮಗ್ರ ಭಾರತ ಘಟನೆಯನ್ನು ಮೊದಲೇ ಕಣ್ಮುಂದೆ ನಿಲ್ಲಿಸಿದ ವ್ಯಾಸರ ರಚನ ಕೌಶಲ ಊಹೆಗೂ ನಿಲುಕದು. ಮಹಾಭಾರತ ಕೇವಲ ಐತಿಹಾಸಿಕ ಘಟನೆ ಮಾತ್ರವಲ್ಲ, ಅದಕ್ಕೊಂದು ಅಧ್ಯಾತ್ಮ ಅರ್ಥವಿದೆ. ಅದೊಂದು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವಂತಹುದು. ವ್ಯಾಸರಿಂದ ರಚಿಸಲ್ಪಟ್ಟ ಮುಕ್ಕಣ್ಣ ಮಹಾಭಾರತ. ಅದರ ತಣ್ತೀದ ಪ್ರಚಾರಕ್ಕಾಗಿ ವೈಶಂಪಾಯನರನ್ನೇ ನೇಮಿಸಿದರು.
ಅಷ್ಟಾದಶ ಪುರಾಣಗಳನ್ನು ರಚಿಸಿ ತಣ್ತೀ ಜ್ಞಾನದ ರಾಶಿಯನ್ನು ಬೃಹತ್ತಾಗಿಸಿದರು. ಪುರಾಣ, ಭಾರತ, ಪಂಚರಾತ್ರಗಳ ಪ್ರಚಾರಕ್ಕಾಗಿ ರೋಮ ಹರ್ಷಣರನ್ನು ಆದೇಶಿಸಿದರು. ಜೈಮಿನಿ ಮೂಲಕ ಪೂರ್ವ ಮೀಮಾಂಸವನ್ನು ರಚಿಸಿದರು. ದೈವೀ ಮೀಮಾಂಸದ ಆದ್ಯಂತ ಸೂತ್ರಗಳನ್ನ ತಾವೇ ರಚಿಸಿ ಮಧ್ಯ ಭಾಗವನ್ನು ಪೈಲರಿಂದ ರಚಿಸಿದರು. 18ನೆಯದಾದ ಶ್ರೀ ಮದ್ಭಾಗವತ ಮಹಾಪುರಾಣದ ರಚನೆಯನ್ನು ನಾರದರ ಪ್ರಾರ್ಥನೆಯಂತೆ ಸಮಾಧಿ ಭಾಷೆಯಲ್ಲಿ ರಚಿಸಿ ಸಜ್ಜನರಿಗೆ ತಣ್ತೀಜ್ಞಾನದ ಮಹಾಬೆಳಕನ್ನು ಚೆಲ್ಲಿ ಸಂಸಾರದ ಜಂಜಾಟದಿಂದ ಮುಕ್ತರಾಗಿ ಪರತಣ್ತೀದೆಡೆಗೆ ಸಾಗುವ ಮಾರ್ಗವನ್ನು ತೋರಿ ಮಹದುಪಕಾರವನ್ನ ಮಾಡಿದರು.ಸಾಧನೆಯ ಪಥದಲ್ಲಿ ಮೇಲೇರಿ ಆ ಪರತಣ್ತೀ ವನ್ನು ಹೊಂದಲು ಮಾನವರಿಗೆಲ್ಲ ಸಮಾನ ಅವಕಾಶವಿದೆ. ಆದರೆ ಸಾಧನೆಯ ಮಾರ್ಗಗಳು ಬೇರೆಯಿದೆ. ಅಂತ್ಯಜನಿಗೂ ಮುಕ್ತಿಯ ಮಾರ್ಗವನ್ನು ತೋರಿದವರು ವ್ಯಾಸರು. ವೇದಜ್ಞಾನದಿಂದ ಮುಕುತಿ ಪಥದಲ್ಲಿ ನಡೆಯಲು ಅಸಾಧ್ಯವಾದವರಿಗೆ ಮಹಾಭಾರತವನ್ನು ರಚಿಸಿ ತನ್ಮೂಲಕ ಸ್ತ್ರೀಯರಿಗೂ ಅಂತ್ಯಜರಿಗೂ ನಾಮಸ್ಮರಣೆ ಮಾತ್ರದಿಂದಲೇ ಮುಕುತಿ ಪಥಕೆ ಸಾಧನವದು ಎಂದು ತಿಳಿಸಿದವರು ಶ್ರೀ ವ್ಯಾಸರು. ಇಂದಿಗೂ ಬದರಿ ಕ್ಷೇತ್ರದಿ ಉಪದೇಶದಲ್ಲಿ ನಿರತರಾಗಿರುವರೆಂದು ಭಾವುಕರ ನಂಬಿಕೆ. ತಣ್ತೀಜ್ಞಾನದ ಮಹಾಬೆಳಕನ್ನ ಚೆಲ್ಲಿ ಆತ್ಮೋದ್ಧಾರದ ದಾರಿಯನ್ನು ತೋರಿದ ವ್ಯಾಸರ ನೆನಪನ್ನ ಮಾಘ ಮಾಸದ ವ್ಯಾಸ ಪೂರ್ಣಿಮೆಯಂದು ಮಾಡುವ ಸಣ್ಣ ಪ್ರಯತ್ನವಿದಷ್ಟೇ. – ಚಿಪ್ಪಗಿರಿ ನಾಗೇಂದ್ರ ಆಚಾರ್ಯ