ಚಾಮರಾಜನಗರ : ಜಿಲ್ಲಾ ಕೇಂದ್ರಕ್ಕೆ ಬಾರದೆ ಸಂತೇಮರಹಳ್ಳಿಯಲ್ಲಿ ಪ್ರಚಾರ ಸಭೆ ಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಉಡಿಗಾಲದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ‘ಪ್ರಧಾನ ಮಂತ್ರಿಯವರ ಬಗ್ಗೆ ಗೌರವವಿದೆ.ಆದರೆ ಅವರಿಗೆ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಅಂತ ಹೇಳಿದವರು ಯಾರು? ಯಾರೋ ಕರ್ನಾಟಕದವರೇ ಹೇಳಿರಬೇಕು. ಇದು
ಮೂರ್ಖತನದ ಪರಮಾವಧಿ. ಅವರು ರಾಜ್ಯದ, ದೇಶದ ಜನರ ಕ್ಷಮಾಪಣೆ ಕೇಳಲೇ ಬೇಕು’ ಎಂದರು.
‘ನಾವು ಪ್ರಧಾನಿಯವರ ಧೋರಣೆ ಕುರಿತು ನ್ಯಾಯಾಲಕ್ಕೆ ಹೋಗತಕ್ಕಂತಹ ಚಿಂತನೆ ಮಾಡಿದ್ದೇವೆ’ ಎಂದೂ ಹೇಳಿದರು.
ಚಾಮರಾಜನಗರ ಕ್ಷೇತ್ರದಲ್ಲಿ ವಾಟಾಳ್ ಅವರು ವಾಟಳ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.