“1975′ ಹೀಗೊಂದು ವಿಭಿನ್ನ ಶೀರ್ಷಿಕೆಯ ಚಿತ್ರ ತಯಾರಾಗಿದ್ದು, ಅದರ ಮೊದಲ ಹಾಡು “ಶುಭಾರಂಭ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಹಾಗೂ ನಿರ್ಮಾಪಕ ಮುನೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದರು.
“ಸಿಲ್ವರ್ ಸ್ಕ್ರೀನ್ ಫಿಲಂ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ದಿನೇಶ್ ರಾಜನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ “1975′ ಚಿತ್ರಕ್ಕೆ, ನಿರ್ದೇಶಕ ವಸಿಷ್ಠ ಬಂಟನೂರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚಿತ್ರ ನಿರ್ದೇಶಕ ವಸಿಷ್ಠ ಬಂಟನೂರ್ ಮಾತನಾಡಿ, “1975 ಚಿತ್ರ ನನ್ನ ಎರಡನೇ ಕನಸು. ನಮ್ಮೆಲ್ಲ ಕನಸಿಗೆ ಬಣ್ಣ ಹಚ್ಚುವ ಕನಸು ನಮ್ಮದು. ಆ ಕನಸು ಈಗ ನನಸಾಗುವತ್ತ ಸಾಗಿದೆ. ಇದೊಂದು ಥ್ರಿಲ್ಲರ್ ಸಬೆjಕ್ಟ್‌ನ ಸಿನಿಮಾ. 2 ಗಂಟೆ 5 ನಿಮಿಷದ ಚಿತ್ರ ಎಲ್ಲೂ ಬೋರ್ ಆಗದ ರೀತಿಯಲ್ಲಿ ಕಟ್ಟಿ ಕೊ ಟ್ಟಿ ದ್ದೇನೆ. ಇನ್ನು, ಚಿತ್ರ ಶೀರ್ಷಿಕೆ “1975′ ಇದೆಯಾದರೂ ಚಿತ್ರ ಅಂದಿನ ಕಾಲದ ಕಥೆಯಲ್ಲ. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯಂತಹ ವಿಷಯ ಇಟ್ಟುಕೊಂಡು ಮಾಡಿರುವ ಸಿನಿಮಾ. ಆ “1975′ ಸಂಖ್ಯೆ ಏನು ಹೇಳುತ್ತದೆ ಎಂಬುದನ್ನು ಚಿತ್ರ ನೋಡಿ ತಿಳಿಯಬೇಕು’ ಎಂದರು.
ನಿರ್ಮಾಪಕ ದಿನೇಶ್ ರಾಜನ್ ಮಾತನಾಡಿ, “ನಾನು ಮೂಲತಃ ತಮಿಳುನಾಡಿನವನು. ಆದರೆ ಕನ್ನಡ ಚಿತ್ರ ಮಾಡಬೇಕೆಂಬ ಆಸೆ ಇತ್ತು. ಈಗ ನೆರವೇರುತ್ತಿದೆ. ನಮ್ಮ ಚಿತ್ರಕ್ಕೆ ಎಲ್ಲರ ಸಹಕಾರ ಹಾಗೂ ಶುಭಹಾರೈಕೆ ಇರಲಿ’ ಎಂದು ಹೇಳಿದರು.
ಇದನ್ನೂ ಓದಿ:ಬಿಹಾರ ಸಚಿವ ಸಂಪುಟ ವಿಸ್ತರಣೆ: ನಿತೀಶ್ ಕುಮಾರ್ ಗೆ ಗೃಹ, ತೇಜಸ್ವಿಗೆ ಆರೋಗ್ಯ ಖಾತೆ
ಚಿತ್ರದಲ್ಲಿ ನಾಯಕನಾಗಿ ಜೈ ಶೆಟ್ಟಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದು, ನಾಯಕಿಯಾಗಿ ಮಾನಸ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನಿರ್ದೇಶನದ ಜೊತೆಗೆ ವಸಿಷ್ಠ ಬಂಟನೂರ್ ಕಥೆ,ಚಿತ್ರ ಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಸಂದೇಶ್ ಬಾಬಣ್ಣ, ಧನಂಜಯ್ ವರ್ಮ, ಶಿವಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಾಗೇಂದ್ರ ಅರಸ್ ಸಂಕಲನ, ಪ್ರಸನ್ನ ಗುರಲ್ ಕೆರೆ ಛಾಯಾಗ್ರಹಣ, ಕಲೈ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ