Advertisement

“ಅರ್ಧ ಚಂದಿರ’ ಲವ್‌ ಟ್ರ್ಯಾಕ್‌ನಲ್ಲಿ ವಸಿಷ್ಠ –ಮಯೂರಿ: Watch

04:53 PM Nov 04, 2018 | |

“ನೀರ್‌ ದೋಸೆ’ ನಂತರ ನವರಸ ನಾಯಕ ಜಗ್ಗೇಶ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “8 ಎಂಎಂ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಬ್ಯೂಟಿಫುಲ್‌ ರೊಮ್ಯಾಂಟಿಕ್‌ ಲವ್‌ ಟ್ರ್ಯಾಕ್‌ನ್ನು ಬಿಡುಗಡೆ ಮಾಡಿದೆ.

Advertisement

ಹೌದು! ವಸಿಷ್ಠ ಮತ್ತು ಮಯೂರಿ ಕಾಂಬಿನೇಷನ್‍ನ “ಅರ್ಧ ಚಂದಿರ’ ಎಂಬ ಮೆಲೋಡಿಯಸ್‌ ಹಾಡು ಬಿಡುಗಡೆಯಾಗಿದ್ದು, ಗೌಸ್‌ಪೀರ್‌ ಸಾಹಿತ್ಯವಿದೆ. ಜ್ಯೂಡಾ ಸ್ಯಾಂಡಿ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಸುಪ್ರಿಯಾ ಲೋಹಿತ್‌ ಮತ್ತು ಅಭಿನಂದನ್‌ ಧ್ವನಿಯಲ್ಲಿ ಮೂಡಿಬಂದಿದೆ.

“ಅರ್ಧ ಚಂದಿರ’ ಹಾಡು ಸನಿಹ, ವಿರಹಗಳ ಸಮ್ಮಿಲನವನ್ನ ಸೂಚಿಸುವ ಸಿನಿಮಾದ ಒನ್‌ ಆಫ್‌ ದಿ ಹೈಲೈಟ್‌ ಸಾಂಗ್‌ ಎಂದರೆ ತಪ್ಪಿಲ್ಲ. ಅಂದ ಹಾಗೇ “8 ಎಂಎಂ’ ತಮಿಳಿನ 8 ತೊಟಕಲ್ ಚಿತ್ರದ ಕನ್ನಡ ಅವತರಣಿಕೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಹರಿಕೃಷ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ.

ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್‍ಲೈನ್ ವೆಂಕಟೇಶ್, ಮಯೂರಿ, ಆದಿಲೋಕೇಶ್‌ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ. ಅಂದ ಹಾಗೆ ಚಿತ್ರವು ಇದೇ ತಿಂಗಳ 16ರಂದು ತೆರೆಗೆ ಬರಲು ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next