Advertisement

ವಸಿಷ್ಠ ಸಿಂಹ ಹೊಸ “ಪಂಥ’

09:55 AM Oct 27, 2019 | Lakshmi GovindaRaju |

ನಟ ವಸಿಷ್ಠ ಸಿಂಹ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಅವರ ಅಭಿನಯದ “ಇಂಡಿಯಾ ವರ್ಸಸ್‌ ಇಂಗ್ಲೆಡ್‌’, “ಕಾಲಚಕ್ರ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಆ ಬೆನ್ನಲ್ಲೇ ಅವರು “ಪಂಥ’ ಎಂಬ ಚಿತ್ರದಲ್ಲಿ ನಟಿಸುತ್ತಿದಾರೆ. “ಗೂಗಲ್‌’ ಸಿನಿಮಾ ಬಳಿಕ ನಾಗೇಂದ್ರ ಪ್ರಸಾದ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಸಿಷ್ಠ ಸಿಂಹ ಜೊತೆಯಲ್ಲಿ ರಚಿತಾರಾಮ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ನಾಗೇಂದ್ರಪ್ರಸಾದ್‌, “ಇದೊಂದು ಮೈಂಡ್‌ಗೇಮ್‌ ಕುರಿತ ಚಿತ್ರ. ಪಕ್ಕಾ ಮನರಂಜನಾತ್ಮಕವಾಗಿಯೇ ಮೂಡಿಬರಲಿದೆ. ವಸಿಷ್ಠ ಸಿಂಹ ಹಾಗೂ ರಚಿತಾ ರಾಮ್‌ ಜೊತೆ ಮೊದಲ ಸಲ ಕೆಲಸ ಮಾಡುತ್ತಿದ್ದೇನೆ. ಉಳಿದಂತೆ ಚಿತ್ರದಲ್ಲಿ ಪ್ರಕಾಶ್‌ ಬೆಳವಾಡಿ ಅವರು ಇರಲಿದ್ದಾರೆ. ಈ ಚಿತ್ರ ಉತ್ಸವ್‌ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಸಂಗೀತ ನನ್ನದೇ ಇರಲಿದೆ.

ಸದ್ಯಕ್ಕೆ ಇದು ಮಾಹಿತಿ. ಇಷ್ಟರಲ್ಲೇ ಚಿತ್ರದಲ್ಲಿ ಇನ್ನು ಯಾರೆಲ್ಲಾ ಕಲಾವಿದರು ಇರುತ್ತಾರೆ, ಬೇರೆ ತಂತ್ರಜ್ಞರು ಯಾರಿರುತ್ತಾರೆ. ಯಾವಾಗ ಚಿತ್ರೀಕರಣ ಶುರುವಾಗಲಿದೆ ಎಂಬುದನ್ನು ತಿಳಿಸುತ್ತೇನೆ’ ಎನ್ನುತ್ತಾರೆ ನಾಗೇಂದ್ರ ಪ್ರಸಾದ್‌. ಅಂದಹಾಗೆ, “ಪಂಥ’ ಚಿತ್ರಕ್ಕೆ “ಡಿಬೇಟ್‌ ಆನ್‌ ದಿ ಬೆಟ್‌’ ಎಂಬ ಅಡಿಬರಹವಿದೆ. ಹಾಗಾಗಿ, ಇದೊಂದು ಪಕ್ಕಾ ಮೈಂಡ್‌ ಗೇಮ್‌ ಕುರಿತ ಸಿನಿಮಾ ಎಂಬುದನ್ನು ನಿರೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next