Advertisement

ಕುಶಾಲನಗರದಲ್ಲಿ ವಾಸವಿ ಜಯಂತಿ ಆಚರಣೆ

11:24 PM May 15, 2019 | Team Udayavani |

ಮಡಿಕೇರಿ: ವಾಸವಿ ಯುವಜನ ಸಂಘದ ಆಶ್ರಯದಲ್ಲಿ ಕುಶಾಲನಗರದಲ್ಲಿ ವಾಸವಿ ಜಯಂತಿ ಕಾರ್ಯಕ್ರಮ ನಡೆಯಿತು.

Advertisement

ಸ್ಥಳೀಯ ವಾಸವಿ ಮಹಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್‌.ಸತ್ಯನಾರಾಯಣ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ಸಂಸ್ಕೃತಿ, ಆಚರಣೆಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಸಮುದಾಯ ಬಾಂಧವರು ಪರಿಸರ ರಕ್ಷಣೆಯ ಬಗ್ಗೆ ಕೂಡ ಚಿಂತನೆ ಹರಿಸಬೇಕಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ತ್ಯಜಿಸುವುದರೊಂದಿಗೆ ಜೀವಜಲವನ್ನು ಪೋಲು ಮಾಡದೆ ಸಂರಕ್ಷಣೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.

ವಿವಿಧ ರೀತಿಯ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಸುಧಾರಣೆಗೆ ಕೂಡ ಕೈಲಾದ ಕೊಡುಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ಅತೀವ ಮಳೆಯಿಂದಾಗಿ ನಷ್ಟಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರಿಗೆ ಕನ್ನಿಕಾ ಸಹಕಾರ ಸಂಘದ ಆರ್ಥಿಕ ಸಹಕಾರ ನೀಡಲಾಯಿತು. ರಥಬೀದಿಯಲ್ಲಿನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ ಸಹಾಯಕ ನಿರ್ದೇಶಕ ಕೆ.ಪಿ.ವೇಣುಗೋಪಾಲ್‌, ಆರ್ಯವೈಶ್ಯ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷರಾದ ಬಿ.ಆರ್‌.ನಾಗೇಂದ್ರಪ್ರಸಾದ್‌, ರಾಜ್ಯ ಘಟಕ ನಿರ್ದೇಶಕರಾದ ಎಸ್‌.ಎನ್‌.ನರಸಿಂಹಮೂರ್ತಿ, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಶ್ರೀಲಕ್ಷಿ¾ ರವಿಚಂದ್ರ, ಯುವತಿಯರ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ, ಯುವಜನ ಸಂಘದ ಅಧ್ಯಕ್ಷ ನಾಗಪ್ರವೀಣ್‌, ನಿಕಟಪೂರ್ವ ಅಧ್ಯಕರಾದ ವಿ.ಆರ್‌.ಮಂಜುನಾಥ್‌, ಎಸ್‌.ಎಸ್‌.ಕುಮಾರ್‌, ಕಾರ್ಯದರ್ಶಿ ಅರ್ಜುನ್‌ ಎನ್‌ ಗುಪ್ತ, ಉಪಾಧ್ಯಕರಾದ ವೈಶಾಖ್‌, ಪ್ರವೀಣ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next