Advertisement

ನಾಗರಿಕ ಸೇವಾ ಟ್ರಸ್ಟ್‌ಗೆ ವಸಂತ ಬಂಗೇರ ಭೇಟಿ

04:15 PM Jul 20, 2018 | |

ಬೆಳ್ತಂಗಡಿ: ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ, ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ನಾಗರಿಕ ಸೇವಾ ಟ್ರಸ್ಟ್‌ ಹಾಗೂ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಪ್ರಜಾಧಿಕಾರಿ ವೇದಿಕೆಯ ಸಂಚಾಲಕರೊಂದಿಗೆ ಸಸ್ಯೋದ್ಯಾನದಲ್ಲಿ ವಿಚಾರ ವಿನಿಮಯ ನಡೆಸಿದರು. ಟ್ರಸ್ಟ್‌ನ ಮುಂದಿನ 10 ವರ್ಷಗಳ ಸೇವೆ ಮತ್ತು ಜಾಗೃತಿ ಕಾರ್ಯ ಯೋಜನೆಯ ಕುರಿತು ಚಿಂತನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಸಂತ ಬಂಗೇರ ಅವರ ಸಲಹೆ ಪಡೆಯಲಾಯಿತು. ಎನ್‌ ಎಸ್‌ಟಿಗೆ ತನ್ನ ಸಂಪೂರ್ಣ ಸಹಕಾರ, ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

Advertisement

ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌, ಕಾರ್ಯದರ್ಶಿ ಜಯಪ್ರಕಾಶ್‌ ಭಟ್‌ ಸಿ.ಎಚ್‌., ಟ್ರಸ್ಟಿ ರಂಜನ್‌ ರಾವ್‌ ಯರ್ಡೂರ್‌, ಕನಕಪುರದ ಶಿವರಾಜೇ ಗೌಡ, ದಾವಣಗೆರೆಯ ಎಸ್‌. ಕುಮಾರ್‌, ನಾರಾಯಣ ಕಿಲಂಗೋಡಿ, ಕೆ.ಸೋಮ, ವಿದ್ಯಾ ನಾಯಕ್‌, ಬಾಲಕೃಷ್ಣ ಮಲೆಕುಡಿಯ, ಡಾ| ಕೃಷ್ಣಮೂರ್ತಿ, ಜೋಗಯ್ಯ ಮಲೆಕುಡಿಯ, ಸದಾಶಿವ ಹೆಗ್ಡೆ, ದಯಾನಂದ ಪೂಜಾರಿ, ಸಂಯೋಜಕ ಬಾಬು ಎ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next