ಮುಂಬಯಿ: ವಸಾಯಿ ರೋಡ್ ಜಿಎಸ್‌ಬಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರ ಬಾಲಾಜಿ ಸೇವಾ ಸಮಿತಿ ಶ್ರೀ ವೆಂಕಟರಮಣ ಭಜನ ಮಂಡಳಿಯವರ ಭಜನ ಕಾರ್ಯಕ್ರಮವು ಜೂ. 9ರಂದು ಆನಂದ ವಿಹಾರ ವಿದ್ಯಾಲಯ ಟ್ರಸ್ಟ್ ಬೋಲಿಂಜ್ ವಿರಾರ್‌ನ ಬಾಲಾಜಿ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಪುರುಷೋತ್ತಮ ಮಾಸದಲ್ಲಿ ಪ್ರತೀ ದಿನ ಬ್ರುಹತಿ ಸಹಸ್ರ ಯಾಗವು ಗುರೂಜೀ ಶ್ರೀ ಆಚಾರ್ಯ ಪ್ರಹÉದಾಚಾರ್ಯ ನಾಗರಹಳ್ಳಿ ಅವರ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಪೂಜಾ ವಿಧಿ-ವಿಧಾನಗಳು ಜರಗುತ್ತಿವೆ.
ಈ ಮಂಡಳಿಯವರು ಕನ್ನಡ, ಮರಾಠಿ, ಹಿಂದಿಯಲ್ಲಿ ಭಜನೆಗಳನ್ನು ಹಾಡಿ ನೆರೆದ ಸಭಿಕರ ಮನ ಸೆಳೆದರು.ಹಿಮ್ಮೇಳದಲ್ಲಿ ಹಾರ್ಮೋನಿ ಯಂನಲ್ಲಿ ನಿಡ್ಡೋಡಿ ಪ್ರಕಾಶ್ ಪ್ರಭು, ತಬಲಾದಲ್ಲಿ ಅಮೇಯ್ ಪೈ, ಸತೀಶ್ ಕಾಮತ್, ಅವನೀಕಾಂತ್ ಬೋರ್ಕರ್, ಪಖ್ವಾಜ್‌ನಲ್ಲಿ ಗಣೇಶ್ ಪೈ ಮತ್ತು ಅನಿಕೇತ್ ಚವಾಣ್ ಸಹಕರಿಸಿದರು. ವಿರಾರ್ ಬಾಲಾಜಿ ಮಂದಿರದವರಿಂದ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಗುರೂಜೀ ಯವರು ಪ್ರವಚನ ನೀಡಿ ಅಧಿಕ ಮಾಸದ ವಿಶೇಷತೆಯ ಬಗ್ಗೆ ವಿವರಿಸಿದರು. ತೇಜಸ್ವಿನಿ ನಾಗರಹಳ್ಳಿ ಅವರ ನೇತೃತ್ವದಲ್ಲಿ ಕುಂಕುಮಾರ್ಚನೆ ನಡೆಯಿತು.
ನೆರೆದ ಎಲ್ಲಾ ಮಹಿಳೆಯರು ಈ ಪೂಜೆಯ ಲಾಭ ಪಡೆದರು. ಗುರೂಜೀಯವರು ಭಜನ ಮಂಡಳಿಯ ಎಲ್ಲ ಸದಸ್ಯರಿಗೆ ಪ್ರಸಾದ ವಿತರಿಸಿ ಶುಭಹಾರೈಸಿದರು.
ವಸಾಯಿರೋಡ್ ಬಾಲಾಜಿ ಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.