Advertisement

ವಸಾಯಿರೋಡ್‌  ಜಿಎಸ್‌ಬಿ  ಶಾಂತಿಧಾಮ ಸೇವಾ ಸಮಿತಿ: ಮಹಾಶಿವರಾತ್ರಿ 

12:50 AM Mar 07, 2019 | |

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಮಾ. 4ರಂದು ಮಹಾಶಿವರಾತ್ರಿ ಉತ್ಸವವು ಅದ್ದೂರಿಯಾಗಿ ನಡೆಯಿತು.

Advertisement

ಪೂರ್ವಾಹ್ನ ಶಿವನ ಲಿಂಗಕ್ಕೆ ಭಸ್ಮಲೇಪನ, ಬಿಲ್ವಾರ್ಚನೆ, ಲಿಂಗಾಷ್ಟಕ, ಅಷ್ಟೋತ್ತರ, ವಿವಿಧ ಬಗೆಯ ಅಭಿಷೇಕ, ಸಮಿತಿಯ ವಿಶ್ವಸ್ತರಾದ ಅಭಿಜಿತ್‌ ನರಸಿಂಹ ಪ್ರಭು ಅವರ ಹಸ್ತದಿಂದ ಜರಗಿತು. ಸಂಜೆ ರುದ್ರಾಭಿಷೇಕ, ಪಂಚಾಮೃತ, ಹಾಲು, ಕಬ್ಬಿನ ರಸ, ಸೀಯಾಳ ಅಭಿಷೇಕ, ಬಿಲ್ವಾರ್ಚನೆ ಮತ್ತು ವಿವಿಧ ಪೂಜೆ ಸಮಿತಿಯ ವಿಶ್ವಸ್ತರಾದ ನರಸಿಂಹ ಅನಂತ ಪ್ರಭು ಅವರ ಹಸ್ತದಿಂದ ಜರಗಿತು.

ಸಮಿತಿಯ ವಿಶ್ವಸ್ತರಾದ ಲಕ್ಷ್ಮೀ ನರಸಿಂಹ ಪ್ರಭು ಅವರು ಶಿವನ ಅಷ್ಟೋತ್ತರ, ಮಹಾ ಮೃತ್ಯುಂಜಯ ಮಂತ್ರವನ್ನು ಸಾಮೂಹಿಕವಾಗಿ ಪಠಿಸಿ ಶಿವ
ರಾತ್ರಿಯ ಮಹಿಮೆಯ ಬಗ್ಗೆ ಭಕ್ತಾದಿಗಳಿಗೆ ವಿಸ್ತಾರವಾಗಿ ಹೇಳಿದರು. ಸಮಿತಿಯವರಿಂದ ಭಜನ ಕಾರ್ಯಕ್ರಮ ನಡೆಯಿತು.

ಮಂಡಳಿಯ ಸದಸ್ಯರು, ಶಿವನ ಭಜನೆಗಳನ್ನು ಹಾಡಿದರು. ತಬಲಾದಲ್ಲಿ ಅಭಿಜಿತ್‌ ಪ್ರಭು, ಪಖ್ವಾಜ್‌ನಲ್ಲಿ ಸನತ್‌ ಕುಮಾರ್‌ ಪ್ರಭು ಸಹಕರಿಸಿದರು. ಶಿವನ ಪ್ರತಿಮೆಗೆ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಲಾಯಿತು. ಪ್ರಸಾದ ರೂಪದಲ್ಲಿ ಮಧ್ಯಾಹ್ನ ಮತ್ತು ಸಂಜೆ ಫಲಾಹಾರದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು.  

ಅಭಿಜಿತ್‌ ಪ್ರಭು ಅವರನೇತೃತ್ವದಲ್ಲಿ ಅಲಂಕರಿಸಿದ ಶಿವನ ಮಂಟಪ ನೆರೆದ ಭಕ್ತಾದಿಗಳನ್ನು  ಆಕರ್ಷಿಸಿತು. ಕಾರ್ಯಕ್ರಮದಲ್ಲಿ ಜಿಎಸ್‌ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next