ಮುಂಬಯಿ: ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದವರ ಬಾಲಾಜಿ ಸೇವಾ ಸಮಿತಿಯ ಬಾಲಾಜಿ ಮಂದಿರದಲ್ಲಿ ಮೇ 26ರಿಂದ ಜೂ. 2ರವರೆಗೆ ಪುರು ಷೋತ್ತಮ ಮಾಸದ ನಿಮಿತ್ತ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ ವನ್ನು ಆಯೋಜಿಸಲಾಗಿತ್ತು.
ಗುರೂಜೀ ಆಚಾರ್ಯ ಪ್ರಹ್ಲಾ ದಾಚಾರ್ಯ ರಾ. ನಾಗರಹಳ್ಳಿ ಇವರು ಹಿಂದಿಯಲ್ಲಿ ಪ್ರವಚನ ನೀಡಿದರು. ದಿನಂಪ್ರತಿ ಸಂಜೆ 6 ರಿಂದ 8 ರವರೆಗೆ ಪ್ರವಚನವನ್ನು ಆಯೋ ಜಿಸಲಾಗಿತ್ತು. ಆನಂತರ ಗುರೂಜೀ ಅವರಿಂದ ಮಹಾಮಂಗಳಾರತಿ, ಫಲಮಂತ್ರಾಕ್ಷತೆ ವಿತರಣೆ ನಡೆ ಯಿತು. ಇದೇ ಸಂದರ್ಭದಲ್ಲಿ ತೇಜಸ್ವಿನಿ ನಾಗರಹಳ್ಳಿ ಇವರಿಂದ ಕನ್ನಡದಲ್ಲಿ ಪ್ರವಚನ ನೀಡಿದರು. ಪ್ರಾರಂಭದ ದಿನದಂದು ಭಜನ ಕಾರ್ಯಕ್ರಮ ನೆರವೇರಿತು. ಮಂಡಳಿ ಯವರು ಕನ್ನಡ, ಮರಾಠಿಯಲ್ಲಿ ಭಜನೆಗಳನ್ನು ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಹಾರ್ಮೋನಿಯಂನಲ್ಲಿ ಮಲ್ಪೆವಿಶ್ವನಾಥ ಪೈ ಮತ್ತು ನಿಡ್ಡೋಡಿ ಪ್ರಕಾಶ್ ಪ್ರಭು ಇವರು ಹಾರ್ಮೋನಿಯಂನಲ್ಲಿ, ತಬಲಾದಲ್ಲಿ, ಅಮೇಯ್ ಪೈ ಮತ್ತು ಸತೀಶ್ ಕಾಮತ್ ಇವರು ಪಖ್ವಾಜ್‌ನಲ್ಲಿ ಗಣೇಶ್ ಪೈ, ಪ್ರಸಾದ್ ಪ್ರಭು, ಅಶೋಕ್ ಶಿಂಧೆ ಇವರು ಸಹಕರಿಸಿದರು. ಗುರೂಜೀಯವರನ್ನು ಸಮಿತಿಯ ವತಿಯಿಂದ ಫಲಪುಷ್ಪವನ್ನಿತತ್ತು ಗೌರವಿಸಲಾಯಿತು. ಆನಂತರ ವೇದಮೂರ್ತಿ ಗಿರಿಧರ ಭಟ್ ಇವರಿಂದ ದೇವರಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಶಾಶ್ವತ ಸೇವಾದಾರರಿಗೆ ಪ್ರಸಾದ ವನ್ನಿತ್ತು ಗೌರವಿಸಲಾಯಿತು. ಮಹಾ
ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಯನ್ನು ಆಯೋಜಿಸ ಲಾಗಿತ್ತು. ಸ್ವಾತಿ ಮತ್ತು ಸದಾಶಿವ ಪ್ರಭು ಕುಟುಂಬಸ್ಥರು ಅನ್ನಸಂತರ್ಪಣೆಯನ್ನು ಪ್ರಾಯೋಜಿಸಿದ್ದರು. ದಿನಂಪ್ರತಿ ಉಪಾ ಹಾರದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ವಸಾಯಿ ಪರಿಸರದ ಎಲ್ಲಾ ಸಮಾಜ ಬಾಂಧವರು ಮತ್ತು ಸದ್ಭಕ್ತರು, ಹಿತೈಷಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಪ್ರವಚನದ ಲಾಭವನ್ನು ಪಡೆದರು. ಶ್ರೀ ಗುರುರಾಜ ಮಾನವ ಜಾಗೃತಿ ಕೇಂದ್ರ ವಸಾಯಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳು, ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.