Advertisement

ಬದುಕಿ ಉಳಿದ ಏಕೈಕ ಅಧಿಕಾರಿ ವರುಣ್‌ ಸಿಂಗ್‌

12:19 AM Dec 09, 2021 | Team Udayavani |

ಹೆಲಿಕಾಪ್ಟರ್‌ ದುರಂತದಲ್ಲಿ ಐಎಎಫ್ ನ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಮಾತ್ರವೇ ಬದುಕುಳಿದಿದ್ದಾರೆ. ಅವರಿಗೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈ ಹಿಂದೆಯೂ ಒಮ್ಮೆ ಪ್ರಾಣಾಪಾಯದಿಂದ ಪಾರಾಗಿದ್ದರು. ಅವರಿಗೆ ಆ.15ರಂದು ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಗೌರ ವಿಸಲಾಗಿತ್ತು.

Advertisement

ವರುಣ್‌ ಸಿಂಗ್‌ ಅವರು 2020 ಅ. 12ರಂದು ಯುದ್ಧವಿಮಾನವೊಂದರ ಪರೀ ಕ್ಷಾರ್ಥ ಹಾರಾಟ ನಡೆಸುತ್ತಿದ್ದರು. ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ಇಳಿಸುವ ಪ್ರಯತ್ನದಲ್ಲಿದ್ದ ವೇಳೆ, ವಿಮಾನದ ನಿರ್ವ ಹಣಾ ಸಿಸ್ಟಂ ಕೂಡ ಸ್ಥಗಿತಗೊಂಡಿತು.

ವಿಮಾನ ಸಂಪೂರ್ಣವಾಗಿ ನಿಯಂತ್ರಣ ತಪ್ಪಿದೆ. ಇನ್ನೇನು ಕೆಳಗೆ ಬಿದ್ದು, ಸತ್ತೇ ಹೋಗುತ್ತೇನೆ ಎನ್ನುವಂತಹ ಸನ್ನಿವೇಶವಿದ್ದರೂ, ಧೃತಿಗೆಡದ ವರುಣ್‌ ಅವರು, ವಿಮಾನವನ್ನು ಮರುನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಈ ಶೌರ್ಯವನ್ನು ಮೆಚ್ಚಿ ಅವರಿಗೆ ಶೌರ್ಯಚಕ್ರ ಪ್ರಶಸ್ತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next