ಬೆಂಗಳೂರು: ದಕ್ಷಿಣ ತಾಲೂಕಿನ ವರ್ತೂರು ಬಳಿ ಶುಕ್ರವಾರ ಬೆಳಗ್ಗೆ ಬಿಎಂಟಿಸಿ ಬಸ್ಸೊಂದು ಆರ್ಕಾವತಿ ನದಿಗೆ ಉರುಳಿದ್ದು 40 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾವರೆಕೆರೆಯಿಂದ ನೆಲಮಂಗಲಕ್ಕೆ ತೆರಳುತ್ತಿದ್ದ ಬಸ್ ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸುವ ಭರದಲ್ಲಿ ತಡೆಗೊಡೆಗೆ ಗುದ್ದಿ ನದಿಗೆ ಬಿದ್ದಿದೆ ಎಂದು ಹೇಳಲಾಗಿದೆ.
10 ಮಂದಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
15 ಅಡಿಯಷ್ಟು ರಸ್ತೆಯಿಂದ ಕೆಳಕ್ಕೆ ಬಿದ್ದಿದ್ದು ನೀರಿನ ಪ್ರಮಾಣ ಅಷ್ಟೇನು ಇಲ್ಲದೆ ಇದ್ದುದರಿಂದ ಪ್ರಾಣ ಹಾನಿ ತಪ್ಪಿದೆ ಎಂದು ಹೇಳಲಾಗಿದೆ.
Related Articles
ಸ್ಥಳಕ್ಕೆ ತಾವರೆಕೆರೆ ಪೊಲೀಸರು ದೌಡಾಯಿಸಿದ್ದು ಬಸ್ಸನ್ನು ಮೇಲಕ್ಕೆತ್ತಲು ಕಾರ್ಯಾಚರಣೆ ನಡೆಸಲಾಗುತ್ತಿದೆ.