Advertisement

ಮನೆ ಮಗ,ಬ್ಯುಸಿನೆಸ್ ಮ್ಯಾನ್‌,ಫೈಟ್‌ ನಲ್ಲಿ ದಳಪತಿ ವಿಜಯ್ ಶೈನ್:‌ ʼವಾರಿಸುʼ ಟ್ರೇಲರ್‌ ಔಟ್

05:56 PM Jan 04, 2023 | Team Udayavani |

ಚೆನ್ನೈ: ದಳಪತಿ ವಿಜಯ್‌ ಅಭಿನಯದ ಕಾಲಿವುಡ್‌ ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾದಲ್ಲಿ ಒಂದಾಗಿರುವ ʼವಾರಿಸುʼ ಸಿನಿಮಾ ಫ್ಯಾಮಿಲಿ ಡ್ರಾಮಾ,  ಆ್ಯಕ್ಷನ್ ಅಂಶಗಳುಳ್ಳ ಟ್ರೇಲರ್‌ ರಿಲೀಸ್‌ ಆಗಿದೆ.

Advertisement

ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿರುವ ʼವಾರಿಸುʼ ಟ್ರೇಲರ್‌ ನಲ್ಲಿ ದಳಪತಿ ವಿಜಯ್‌ ಅಭಿಮಾನಿಗಳಿಗೆ ಇಷ್ಟವಾಗುವ ಮಾಸ್‌ ಲುಕ್‌, ಎಮೋಷನಲ್‌ ಕ್ಯಾರೆಕ್ಟರ್‌, ಡ್ಯಾನ್ಸ್‌ ನಂಬರ್‌ ಗಳನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ವಿಜಯ್‌ ಸಿನಿಮಾದಲ್ಲಿ ಬ್ಯುಸಿನೆಸ್‌ ಮ್ಯಾನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಕಂಡು ಬರುತ್ತದೆ. ಒಂದು ಕುಟುಂಬದ ಕಥೆ ಇದಾಗಿದ್ದು, ಆ ಕುಟುಂಬದಲ್ಲಿ ವಿಜಯ್‌ ಅವರು ಮನೆಯ ಕಿರಿಯ ಮಗನಂತೆ ಟ್ರೇಲರ್‌ ನೋಡುವಾಗ ಮೇಲ್ನೋಟಕ್ಕೆ ಕಾಣುತ್ತದೆ.

ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ವಿಜಯ್‌ ಲವರ್‌ ಬಾಯ್‌ ಆಗಿಯೂ ಗಮನ ಸೆಳೆಯುವ ಅಂಶವನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ. ಇನ್ನುಳಿದಂತೆ ಸ್ಟೈಲಿಸ್ಟ್‌ ಆಗಿ ಕಾಣಿಸಿಕೊಳ್ಳುವ ವಿಜಯ್‌ ಅವರ ಫೈಟ್‌ ಸೀನ್‌ ಗಳು ಅಭಿಮಾನಿಗಳಿಗೆ ಇಷ್ಟವಾಗುದಂತೂ ಖಂಡಿತ.

ದಿಲ್‌ ರಾಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಎಸ್.ತಮನ್‌ ಮ್ಯೂಸಿಕ್‌, ಕಾರ್ತಿಕ್ ಪಳನಿ ಛಾಯಾಗ್ರಹಣ ಮಾಡಿದ್ದಾರೆ. ಶರತ್‌ ಕುಮಾರ್‌, ಜಯಸುಧಾ, ಪ್ರಕಾಶ್‌ ರಾಜ್‌, ಶಾಮ್‌, ಸಂಗೀತ ಮೊದಲಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಅಂದಹಾಗೆ ವಾರಿಸು ಜ.12 ರಂದು ರಿಲೀಸ್‌ ಆಗಲಿದ್ದು, ತೆಲುಗಿನಲ್ಲೂ ಡಬ್‌ ಆಗಿ ತೆರೆಗೆ ಬರಲಿದೆ. ಇನ್ನೊಂದೆಡೆ ಅವರ ʼತುನಿವುʼ ಸಿನಿಮಾ ಕೂಡ ಜ.11 ರಂದು ರಿಲೀಸ್‌ ಆಗಲಿದ್ದು, ಪೊಂಗಲ್ ಹಬ್ಬಕ್ಕೆ ಪ್ರೇಕ್ಷಕರನ್ನು ಸೆಳೆಯುವ ಯತ್ನವನ್ನು ಎರಡೂ ಚಿತ್ರಗಳು ಮಾಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next