Advertisement
ಘಟನೆ: 1ಮಾರುಕಟ್ಟೆಗಳಲ್ಲಿ ಇಂದು ನಮಗೆ ಹೇರಳವಾಗಿ ಸಿಗುವ ವಿದೇಶಿ ಬರಹಗಾರರ ಪುಸ್ತಕಗಳಲ್ಲಿ ಗುಣಮಟ್ಟವಿರುತ್ತದೆ. ಆದರೆ ಕತೃಗಳು ಅವರ ದೇಶದ ಪತ್ರಿಕಾ ರಂಗದ ಸ್ಥಿತಿಗತಿ ಹಾಗೂ ಆಯಾಮಗಳ ಕುರಿತು ಕೃತಿಯನ್ನು ರಚಿಸಿರುತ್ತಾರೆ. ಆದರೆ ಅವು ಇನ್ನೊಂದು ದೇಶದ ಸ್ಥಿತಿಗತಿಗಳಿಗೆ ತಾಳೆಯಾಗಲೂಬಹುದು, ಅಥವಾ ಭಿನ್ನವಾಗಿರಲೂಬಹುದು. ಆಯಾಯ ದೇಶದ ಸ್ಥಿತಿಗನುಗುಣವಾಗಿ ಮಾಹಿತಿ ನೀಡುವ ಪುಸ್ತಕಗಳು ಮುಖ್ಯವಾಗಿರುತ್ತದೆ.
ಪತ್ರಿಕೋದ್ಯಮದಲ್ಲಿ ದೇಶೀಯ ಉದ್ಯಮದ ಬೆಳವಣಿಗೆಗೆ ಪೂರಕವಾಗುವಂತೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದು, ಪತ್ರಿಕೋದ್ಯಮವನ್ನು ಆಸಕ್ತಿಯಿಂದ ಕಲಿಯಲು ಬರುವ ವಿದ್ಯಾರ್ಥಿಗಳಿಗೂ ಇದು
ಪ್ರಯೋಜನವಾಗಲಿದೆ. ಘಟನೆ: 3
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ, ಅಂತರ್ಜಾಲ, ಆಧುನಿಕ ಮುದ್ರಣ ತಂತ್ರಜ್ಞಾನ, ಛಾಯಾಚಿತ್ರ ಗ್ರಹಣ ಹೀಗೆ ಹಲವು ವಿಷಯಗಳಿಗೆ ಸುಗಮವಾದ ದಾರಿಯನ್ನು ನಿರ್ಮಿಸಿಕೊಳ್ಳುವುದು ಹೇಗೆ ಎಂಬುದನ್ನು ಲೇಖಕರು ವಿವರಿಸುತ್ತಾರೆ. ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳು ಆಸಕ್ತಿಯಿಂದ ಯಾವುದರಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಸುಂದರವಾಗಿ ವರ್ಣಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಯಾವುದೋ 10-15 ಪುಸ್ತಕಳನ್ನು ಓದಿ ಅರ್ಥ ಮಾಡಿಕೊಳ್ಳುವುದನ್ನು ಸುಲಭವಾಗಿ ಒಂದೇ ಪುಸ್ತಕವನ್ನು ಓದಿ ಅರ್ಥ ಮಾಡಿಕೊಳ್ಳಬಹುದಾಗಿದೆ.
Related Articles
Advertisement