Advertisement
ಹಾಲು-ತರಕಾರಿ ಪಲಾವ್ಬೇಕಾಗುವ ಸಾಮಗ್ರಿ: 1 ಕಪ್ ಬೆಳ್ತಿಗೆ ಅಕ್ಕಿ (ಸೋನಾ ಮಸೂರಿ), ಒಂದೂವರೆ ಕಪ್ ಹಾಲು, 1/2 ಕಪ್ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ ಮಿಶ್ರಣ, 1-2 ಲವಂಗ, 2-3 ಹಸಿಮೆಣಸು, 1/4 ಇಂಚು ಉದ್ದದ ಚಕ್ಕೆ, 6-7 ಗೋಡಂಬಿ, 1/4 ಕಪ್ ಎಣ್ಣೆ , 1/2 ಚಮಚ ಸಾಸಿವೆ, ರುಚಿಗೆ ತಕ್ಕಷ್ಟು ಉಪ್ಪು , ಸ್ವಲ್ಪ ಕೊತ್ತಂಬರಿಸೊಪ್ಪು .
ಬೇಕಾಗುವ ಸಾಮಗ್ರಿ: 1 ಕಪ್ ಸೋನಾ ಮಸೂರಿ ಅಕ್ಕಿ, 3/4 ಕಪ್ ತೊಗರಿಬೇಳೆ, 2 ಒಣಮೆಣಸು, 1 ಹಸಿಮೆಣಸು, 1/2 ಚಮಚ ಲವಂಗ, 1/2 ಚಮಚ ಚಕ್ಕೆ, 2 ಕಾಳುಮೆಣಸು, 1/2 ಚಮಚ ಕೊತ್ತಂಬರಿ, 1/2 ಚಮಚ ಉದ್ದಿನಬೇಳೆ, 1/4 ಚಮಚ ಜೀರಿಗೆ, 7-8 ಕಾಳು ಮೆಂತೆ, ಚಿಟಿಕೆ ಅರಸಿನ, 1 ಕಪ್ ಸಣ್ಣಗೆ ಹೆಚ್ಚಿದ ಬೀನ್ಸ್, ಕ್ಯಾರೆಟ್, ಬಟಾಣಿ ಮಿಶ್ರಣ, 1 ಟೊಮೆಟೊ, 1/2 ಚಮಚ ಹುಳಿರಸ, 1/2 ಚಮಚ ಬೆಲ್ಲ , 1 ಈರುಳ್ಳಿ , 1 ಟೊಮೆಟೊ, 1/4 ಕಪ್ ತೆಂಗಿನ ತುರಿ, ಉಪ್ಪು ರುಚಿಗೆ ತಕ್ಕಷ್ಟು , 1/4 ಚಮಚ ಕೆಂಪು ಮೆಣಸು ಪುಡಿ, 2 ಚಮಚ ಎಣ್ಣೆ , 1 ಎಸಳು ಕರಿಬೇವು, ಕೊತ್ತಂಬರಿಸೊಪ್ಪು .
Related Articles
Advertisement
ದುಡ್ಲೆಹುಳಿ ಚಿತ್ರಾನ್ನಬೇಕಾಗುವ ಸಾಮಗ್ರಿ: 1 ಕಪ್ ಸೋನಾ ಮಸೂರಿ ಅಕ್ಕಿ, 1 ದುಡ್ಲೆಹುಳಿ, 3-4 ಹಣಸಿಮೆಣಸು, 1 ಎಸಳು ಕರಿಬೇವಿನೆಲೆ, ಸ್ವಲ್ಪ ಕೊತ್ತಂಬರಿಸೊಪ್ಪು , 1/2 ಚಮಚ ಸಾಸಿವೆ, 1/2 ಚಮಚ ಉದ್ದಿನಬೇಳೆ, 2 ಚಮಚ ತೆಂಗಿನ ತುರಿ, 1/4 ಚಮಚ ಅರಸಿನ ಪುಡಿ, ರುಚಿಗೆ ಬೇಕಷ್ಟು ಉಪ್ಪು , 1 ಈರುಳ್ಳಿ, ಹುರಿದ ನೆಲಗಡಲೆ ಬೀಜ 1 ಚಮಚ, 1/4 ಕಪ್ ಎಣ್ಣೆ. ತಯಾರಿಸುವ ವಿಧಾನ: ಉದುರು ಉದುರಾಗಿ ಅನ್ನ ಮಾಡಿ. ಹಸಿಮೆಣಸು, ಕರಿಬೇವು, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿಡಿ. ಬಾಣಲೆ ಒಲೆಯ ಮೇಲಿಡಿ. ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ನಂತರ ಉದ್ದಿನಬೇಳೆ, ಹುರಿದ ನೆಲಗಡಲೆ, ಕರಿಬೇವು, ಈರುಳ್ಳಿ ಚೂರು, ಕೊತ್ತಂಬರಿಸೊಪ್ಪು , ಹೆಚ್ಚಿದ ಹಸಿಮೆಣಸು, ಅರಸಿನ ಪುಡಿ ಹಾಕಿ ಚೆನ್ನಾಗಿ ತೊಳಸಿ. ಉರಿ ಸಣ್ಣಗಿರಲಿ. ಉಪ್ಪು , ಆರಿದ ಅನ್ನ, ತೆಂಗಿನ ತುರಿ, ದುಡ್ಲೆಹುಳಿ ರಸ ಬೇಕಾದಷ್ಟು ಹಿಂಡಿ, ಅನ್ನವನ್ನು ಸರಿಯಾಗಿ ತೊಳಸಿ. ನಂತರ ಬಿಸಿಯಾಗಿರುವಾಗಲೇ ಸವಿಯಿರಿ. ಎಳ್ಳನ್ನ
ಬೇಕಾಗುವ ಸಾಮಗ್ರಿ: 1 ಕಪ್ ಉದುರು ಉದುರಾಗಿರುವ ಅನ್ನ, 1/4 ಕಪ್ ಎಳ್ಳು , 3 ಚಮಚ ಗಸಗಸೆ, 1 ಚಮಚ ಸಾಸಿವೆ, 1 ಚಮಚ ಜೀರಿಗೆ, ಸ್ವಲ್ಪ ಗೋಡಂಬಿ, 4 ಚಮಚ ಒಣ ಕೊಬ್ಬರಿ, 3-4 ಬ್ಯಾಡಗಿ ಒಣಮೆಣಸು, ನೆಲ್ಲಿಕಾಯಿ ಗಾತ್ರದ ಹುಳಿ, ಉಪ್ಪು ರುಚಿಗೆ ತಕ್ಕಷ್ಟು , ರುಚಿಗೆ ತಕ್ಕಷ್ಟು ಬೆಲ್ಲ , 1 ಚಮಚ ಉದ್ದಿನಬೇಳೆ, ಸ್ವಲ್ಪ ಕೊತ್ತಂಬರಿಸೊಪ್ಪು, 3-4 ಚಮಚ ಎಣ್ಣೆ. ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಎಳ್ಳು, ಗಸಗಸೆ, ಒಣಮೆಣಸು ಹುರಿಯಿರಿ. ಹುರಿದ ಮಿಶ್ರಣವನ್ನು ಪುಡಿಮಾಡಿ. ನಂತರ ಬಾಣಲೆಗೆ ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಜೀರಿಗೆ ಹಾಕಿ. ನಂತರ ಉದ್ದಿನಬೇಳೆ, ಗೋಡಂಬಿಯನ್ನು ಹಾಕಿ ಹುರಿಯಿರಿ. ಹುರಿದ ಮಿಶ್ರಣಕ್ಕೆ ಹುಳಿರಸ, ಬೆಲ್ಲ , ಉಪ್ಪು ಹಾಕಿ ಕುದಿಸಿ. ನಂತರ ಒಣಕೊಬ್ಬರಿ ಹಾಕಿ ಇಳಿಸಿ. ಸ್ವಲ್ಪ ತಣಿದ ಬಳಿಕ ಅನ್ನಕ್ಕೆ ಹಾಕಿ ಬೆರೆಸಿ. ಮೊಸರಿನೊಂದಿಗೆ ಸವಿಯಿರಿ. ಸರಸ್ವತಿ ಎಸ್. ಭಟ್