Advertisement

ಅದಾಲತ್‌ ಮೂಲಕ ವಿವಿಧ ಯೋಜನೆ ಮಾಹಿತಿ

12:03 PM Aug 07, 2018 | |

ಕೆಂಗೇರಿ: ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಅಡಿ ಬರುವ ದುರ್ಬಲ ವರ್ಗಗಳು, ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಫ‌ಲಾನುಭವಿಗಳು, ವೃದ್ಧರಿಗೆ ವಿವಿಧ ಯೋಜನೆಗಳ ಮಾಹಿತಿ ನೀಡುವ ಉದ್ದೇಶದಿಂದ ಕೆಂಗೇರಿ ನಾಡ ಕಚೇರಿಯಲ್ಲಿ ಸೋಮವಾರ ಪಿಂಚಣಿ ಅದಾಲತ್‌ ಹಮ್ಮಿಕೊಳ್ಳಲಾಗಿತ್ತು.

Advertisement

ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಶೇ.40ಕ್ಕೂ ಹೆಚ್ಚು ಪ್ರಮಾಣದ ಅಂಗವೈಕಲ್ಯ ಹೊಂದಿರುವ ವಿಕಲಚೇತನರಿಗೆ ಮಾಶಾಸನ, ಸಂಧ್ಯಾ ಸುರಕ್ಷಾ ಸೇರಿದಂತೆ ಹಲವು ಯೋಜನೆಗಳು, ಹಾಗೂ ಫ‌ಲಾನುಭವಿಗಳ ಕುಂದುಕೂರತೆಗಳ ಬಗ್ಗೆ ಅದಾಲತ್‌ನಲ್ಲಿ ಚರ್ಚೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌, ಕ್ಷೇತ್ರದ ನಾಲ್ಕು ಹೋಬಳಿಗಳಲ್ಲೂ ಪಿಂಚಣಿ ಅದಾಲತ್‌ ನಡೆಸುವ ಮೂಲಕ ಸಾರ್ವಜನಿಕರಿಗೆ ವಿವಿಧ ಯೋಜನೆಗಳನ್ನು ತಲುಪಿಸಲಾಗುತ್ತಿದೆ. ಕಂದಾಯ ಇಲಾಖೆ ಕಚೇರಿಗಳು “ರೋಲ್‌ಕಾಲ್‌ ಅಡ್ಡೆ’ಗಳಾಗಬಾರದು. ಕಚೇರಿಯಲ್ಲಿನ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿರಬೇಕು ಎಂದರು.

ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್‌ ಎಚ್‌.ಟಿ.ಮಂಜಪ್ಪ, ವಿಶೇಷ ತಹಶೀಲ್ದಾರ್‌ ಶಿವಪ್ಪ ಲಮಾಣಿ, ಉಪ ತಹಶೀಲ್ದಾರ್‌ ಕೃಷ್ಣಮೂರ್ತಿ, ಕುಂಬಳಗೂಡು ಗ್ರಾ.ಪಂ ಅಧ್ಯಕ್ಷ ಚಿಕ್ಕರಾಜು, ಗ್ರಾ.ಪಂ ಸದಸ್ಯ ಶಿವಮಾದಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next