Advertisement

ಅಂಗವಿಕಲರಿಗೆ ವಿವಿಧ ಸಲಕರಣೆ ವಿತರಣೆ 

10:04 AM Mar 18, 2018 | Team Udayavani |

ಮಹಾನಗರ: ದ.ಕ. ಸಂಸದ ನಳಿನ್‌ಕುಮಾರ್‌ ಕಟೀಲು ಅವರು ಶನಿವಾರ ನಗರದ ಜಿ.ಪಂ. ಸಭಾಂಗಣದಲ್ಲಿ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಒಟ್ಟು 8.29 ಲಕ್ಷ ರೂ. ಅನುದಾನದಲ್ಲಿ ಒಟ್ಟು ಏಳು ಮಂದಿ ಅಂಗವಿಲಕರಿಗೆ ಕೃತಕ ಕಾಲು ಹಾಗೂ ಕೈ ಜೋಡಣೆ ಸಲಕರಣೆಗಳನ್ನು ವಿತರಿಸಿದರು.

Advertisement

ಫಲಾನುಭವಿಗಳಾದ ಚಿಕ್ಕಮುಟ್ನೂರಿನ ರೂಪೇಶ್‌, 102 ನೆಕ್ಕಿಲಾಡಿಯ ಗಣೇಶ್‌ ಎಂ., ಮುರುಳ್ಯದ ಸೀತಾರಾಮ, ಬಜ್ಜೋಡಿಯ ನಾರಾಯಣ ಶೆಟ್ಟಿ, ಕೊಯಿಲ ಗ್ರಾಮದ ರಕ್ಷಿತಾ, ರಾಮಕುಂಜದ ರಾಧಾಕೃಷ್ಣ ಎ., ತೋಕೂರಿನ ಆನಂದ ಪೂಜಾರಿ ಅವರಿಗೆ ಸೌಲಭ್ಯ ವಿತರಿಸಲಾಯಿತು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಸಿಇಒ ಡಾ| ಎಂ.ಆರ್‌. ರವಿ, ಯೋಜನ ನಿರ್ದೇಶಕ ಲೋಕೇಶ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಎಂಡೋಲೈಟ್‌ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಜೆ. ಇಮ್ಯಾನುವೆಲ್‌ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next