Advertisement
1. ಓಟ್ಸ್ ಕಿಚಡಿಬೇಕಾಗುವ ಸಾಮಗ್ರಿ: ಓಟ್ಸ್- 1ಕಪ್, ಹೆಸರು ಬೇಳೆ-1/2 ಕಪ್, ಜೀರಿಗೆ 1ಟೀ ಚಮಚ, ಚಿಕ್ಕದಾಗಿ ಹೆಚ್ಚಿದ ಶುಂಠಿ ಒಂದಿಂಚು, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು-2, ಹೆಚ್ಚಿದ ಈರುಳ್ಳಿ-1, ಕ್ಯಾರೆಟ್-1, ಟೊಮೆಟೊ-2, ಬೀನ್ಸ್-5, ಕ್ಯಾಪ್ಸಿಕಂ-1 (ಎಲ್ಲ ತರಕಾರಿಗಳನ್ನೂ ಒಂದೇ ರೀತಿ ಹೆಚ್ಚಿಕೊಳ್ಳಿ) ಬಟಾಣಿ-1/2 ಕಪ್, ನೀರು-5 ಕಪ್, ಅರಿಶಿನ ಪುಡಿ- 1/2 ಚಮಚ, ಇಂಗು- ಚಿಟಿಕೆ, ತುಪ್ಪ- 3 ಟೀ ಚಮಚ, ಉಪ್ಪು, ಕರಿಬೇವು, ಕೊತ್ತಂಬರಿ.
ಬೇಕಾಗುವ ಸಾಮಗ್ರಿ: ಓಟ್ಸ್-1 ಕಪ್, ಚಿರೋಟಿ ರವೆ- 1/2 ಕಪ್, ಮೊಸರು-1 ಕಪ್, ಅಕ್ಕಿಹಿಟ್ಟು-1/2 ಕಪ್, ಉಪ್ಪು, ಜೀರಿಗೆ- 1 ಚಮಚ, ಚಿಕ್ಕದಾಗಿ ಹೆಚ್ಚಿದ ಶುಂಠಿ- 1/2 ಚಮಚ, ಕ್ಯಾರೆಟ್ ತುರಿ- 1 ಕಪ್, ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಂ-1, ಹಸಿಮೆಣಸಿನಕಾಯಿ 2, ಹೆಚ್ಚಿದ ಈರುಳ್ಳಿ-1, ಎಣ್ಣೆ ಅಥವಾ ತುಪ್ಪ, ಕೊತ್ತಂಬರಿ, ಕರಿಬೇವು.
Related Articles
Advertisement
3. ಓಟ್ಸ್ ಲಡ್ಡುಬೇಕಾಗುವ ಸಾಮಗ್ರಿ: ಓಟ್ಸ್- ಒಂದೂವರೆ ಕಪ್, ಸಕ್ಕರೆ-1 ಕಪ್, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ-20, ಏಲಕ್ಕಿ ಪುಡಿ-1/2 ಚಮಚ, ತುಪ್ಪ-1/2 ಕಪ್. ಮಾಡುವ ವಿಧಾನ: ಬಾಣಲೆಯಲ್ಲಿ ಓಟ್ಸ್ ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದು ಆರಿದ ನಂತರ ನುಣ್ಣಗೆ ಪುಡಿ ಮಾಡಿ, ಜರಡಿ ಹಿಡಿಯಿರಿ. ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಎರಡೂ ಪುಡಿಯನ್ನು ಮಿಶ್ರಣ ಮಾಡಿ. ತುಪ್ಪ ಬಿಸಿ ಮಾಡಿ, ಗೋಡಂಬಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿದು, ಅದನ್ನು ಓಟ್ಸ್ ಹಿಟ್ಟಿಗೆ ಸೇರಿಸಿ. ಏಲಕ್ಕಿ ಪುಡಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ತುಪ್ಪದ ಬಿಸಿಗೆ ಹಿಟ್ಟು ಉಂಡೆ ಕಟ್ಟುವ ಹದಕ್ಕೆ ಬಂದಿರುತ್ತದೆ. ಬಿಸಿ ಇರುವಾಗಲೇ ಉಂಡೆ ಕಟ್ಟಿ. 4. ಓಟ್ಸ್ ಮಸಾಲೆ ಚಪಾತಿ
ಬೇಕಾಗುವ ಸಾಮಗ್ರಿ: ಓಟ್ಸ್- 1ಕಪ್, ಗೋಧಿ ಹಿಟ್ಟು- ಒಂದೂವರೆ ಕಪ್, ಜೀರಿಗೆಪುಡಿ- 1/2 ಚಮಚ, ಧನಿಯಾ ಪುಡಿ- 1/2 ಚಮಚ, ಅಚ್ಚಖಾರದ ಪುಡಿ- 1 ಚಮಚ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ-1, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು, ಎಣ್ಣೆ ಅಥವಾ ತುಪ್ಪ. ಮಾಡುವ ವಿಧಾನ: ಮಿಕ್ಸಿಯಲ್ಲಿ ಓಟ್ಸ್ ಹಾಕಿ ನುಣ್ಣಗೆ ಪುಡಿಮಾಡಿ. ಓಟ್ಸ್ ಹಿಟ್ಟಿಗೆ, ಗೋಧಿ ಹಿಟ್ಟು, ಜೀರಿಗೆ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ. ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟನ್ನು ಕಾಲು ಗಂಟೆ ಹಾಗೇ ಬಿಟ್ಟು, ನಂತರ ಉಂಡೆ ಮಾಡಿಕೊಳ್ಳಿ. ಗೋಧಿ ಹಿಟ್ಟನ್ನು ಉದುರಿಸಿಕೊಂಡು ಚಪಾತಿ ಲಟ್ಟಿಸಿ. (ಹಿಟ್ಟನ್ನು ಮೊದಲು ತ್ರಿಕೋನ ಮಾಡಿ ಲಟ್ಟಿಸಿದರೆ ಮೆತ್ತಗಿರುತ್ತದೆ) ಕಾವಲಿ ಬಿಸಿ ಮಾಡಿ, ತುಪ್ಪ ಹಾಕಿ ಬೇಯಿಸಿದರೆ ಓಟ್ಸ್ ಮಸಾಲೆ ಚಪಾತಿ ರೆಡಿ. ವೇದಾವತಿ ಹೆಚ್. ಎಸ್.