Advertisement
ಬ್ರೆಡ್ ವಿದ್ ಸ್ವೀಟ್‌ಕಾರ್ನ್ ಸ್ಯಾಂಡ್ವಿಚ್ಬೇಕಾಗುವ ಸಾಮಗ್ರಿ: ಬ್ರೆಡ್ ಪೀಸ್‌ಗಳು- ಆರು, ಸ್ವೀಟ್‌ಕಾರ್ನ್- ಆರು ಚಮಚ, ಕಾಳುಮೆಣಸಿನ ಪುಡಿ- ಒಂದು ಚಮಚ, ಮೆಂತೆಸೊಪ್ಪು- ನಾಲ್ಕು ಚಮಚ, ನೀರುಳ್ಳಿ – ನಾಲ್ಕು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ಕೆಂಪುಮೆಣಸಿನ ಪುಡಿ- ಅರ್ಧ ಚಮಚ, ಟೊಮೆಟೋ ಕೆಚಪ್- ನಾಲ್ಕು ಚಮಚ, ಉಪ್ಪು ರುಚಿಗೆ.
ಬೇಕಾಗುವ ಸಾಮಗ್ರಿ: ಬ್ರೌನ್‌ಬ್ರೆಡ್- ಎಂಟು ಪೀಸ್, ಹುರಿದ ಶೇಂಗಾ- ಎಂಟು ಚಮಚ, ಕೊತ್ತಂಬರಿಸೊಪ್ಪು- ಎಂಟು ಚಮಚ, ಶುಂಠಿ- ಅರ್ಧ ಇಂಚು, ಬೆಳ್ಳುಳ್ಳಿ- ಹತ್ತು ಬೀಜ, ಹಸಿ ಮೆಣಸಿನಕಾಯಿ- ನಾಲ್ಕು, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು.
Related Articles
Advertisement
ಬನಾನ ಸ್ಯಾಂಡ್‌ವಿಚ್ ಬೇಕಾಗುವ ಸಾಮಗ್ರಿ: ಬ್ರೆಡ್‌ಪೀಸ್- ಆರು, ಹೆಚ್ಚಿದ ಬಾಳೆಹಣ್ಣು – ನಾಲ್ಕು, ಹೆಚ್ಚಿದ ಖರ್ಜೂರ- ನಾಲ್ಕು, ಹೆಚ್ಚಿದ ಚೆರಿ- ನಾಲ್ಕು, ಫೂಟ್ಸ್ ಜಾಮ್- ನಾಲ್ಕು ಚಮಚ, ಜೇನುತುಪ್ಪ- ಎರಡು ಚಮಚ. ತಯಾರಿಸುವ ವಿಧಾನ: ಬ್ರೆಡ್‌ಗೆ ತುಪ್ಪ ಸವರಿಕೊಂಡು ಕಾದ ಕಾವಲಿಯಲ್ಲಿ ಕೆಂಪಗೆ ಬಿಸಿ ಮಾಡಿ. ನಂತರ ಒಂದು ಬ್ರೆಡ್ ಪೀಸ್‌ಗೆ ಫೂಟ್‌ಜಾಮ್ ಸವರಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹರಡಿ ಕೊನೆಗೆ ಜೇನುತುಪ್ಪ ಸವರಿ ಮೇಲಿನಿಂದ ಇನ್ನೊಂದು ಬ್ರೆಡ್ ಸೇರಿಸಿ ಸರ್ವ್ ಮಾಡಬಹುದು. ಬ್ರೆಡ್ ರಸಾಯನ
ಬೇಕಾಗುವ ಸಾಮಗ್ರಿ: ಬ್ರೆಡ್‌ಪೀಸ್- ನಾಲ್ಕು, ತಂಪಾದ ದಪ್ಪಹಾಲು- ಒಂದೂವರೆ ಕಪ್, ಹೆಚ್ಚಿದ ಸೇಬು, ಬಾಳೆಹಣ್ಣು, ಖರ್ಜೂರ, ಒಣದ್ರಾಕ್ಷಿ, ಸಪೋಟ ಇತ್ಯಾದಿ ಹಣ್ಣುಗಳ ಮಿಶ್ರಣ- ಅರ್ಧ ಕಪ್, ಓಟ್ಸ್ – ಒಂದು ಚಮಚ, ಜೇನುತುಪ್ಪ – ಎರಡು ಚಮಚ, ಹೆಚ್ಚಿದ ಬಾದಾಮಿ- ಒಂದು ಚಮಚ. ತಯಾರಿಸುವ ವಿಧಾನ: ಓಟ್ಸ್‌ನ್ನು ಸ್ವಲ್ಪ ಬೆಚ್ಚಗೆ ಮಾಡಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಹಾಲು ಹಾಗೂ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳನ್ನು ಮತ್ತು ಜೇನುತುಪ್ಪಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಸರ್ವ್ ಮಾಡುವಾಗ ಬ್ರೆಡ್‌ಚೂರುಗಳನ್ನು ಸೇರಿಸಿ ಮೇಲಿನಿಂದ ಚೆರಿಯಿಂದ ಅಲಂಕರಿಸಬಹುದು. ಗೀತಸದಾ