Advertisement

ರೈಲು ಸಂಚಾರದಲ್ಲಿ  ವ್ಯತ್ಯಯ

03:55 AM Jul 19, 2017 | Team Udayavani |

ಮಂಗಳೂರು: ಕೇರಳದ ಕೋಝಿಕೋಡ್‌- ಕಣ್ಣೂರು ನಡುವೆ ರೈಲು ಮಾರ್ಗದ ಹಳಿ ನವೀಕರಣ ಕಾಮಗಾರಿಯನ್ನು ಜು. 18ರಿಂದ ಆ. 18 ವರೆಗಿನ ಒಂದು ತಿಂಗಳ ಪರ್ಯಂತ ಕೈಗೆತ್ತಿಕೊಳ್ಳಲಾಗಿದ್ದು, ಆ ಪ್ರಯುಕ್ತ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಲಿದೆ. 

Advertisement

ಮಂಗಳೂರು- ಕೋಝಿಕೋಡ್‌ ಪ್ಯಾಸೆಂಜರ್‌ (56654) ರೈಲು ಮತ್ತು ಮಂಗಳೂರು- ಕೊಯಮುತ್ತೂರು ಪ್ಯಾಸೆಂಜರ್‌ (56324) ರೈಲನ್ನು ಕಣ್ಣೂರು- ಕೋಝಿಕೋಡ್‌ ಮಧ್ಯೆ ಹಾಗೂ ಕೊಯಮುತ್ತೂರು- ಮಂಗಳೂರು ಪ್ಯಾಸೆಂಜರ್‌ (56323) ರೈಲನ್ನು ಕೋಝಿಕೋಡ್‌- ಕಣ್ಣೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. 

ಮಂಗಳೂರು- ಕೊಯಮುತ್ತೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ (22609) ರೈಲು ಪೊಡನೂರಿಗೆ 50 ನಿಮಿಷ ತಡವಾಗಿ
ಆಗಮಿಸಲಿದೆ. ಮುಂಬಯಿ ಲೋಕಮಾನ್ಯತಿಲಕ್‌- ಕೊಚ್ಚುವೇಲಿ ಎಕ್ಸ್‌ಪ್ರೆಸ್‌ (12201) ರೈಲು ಶೋರನೂರಿಗೆ (ಮಂಗಳವಾರ) 60 ನಿಮಿಷ ವಿಳಂಬವಾಗಿ ತಲುಪಲಿದೆ. ನಾಗರ್‌ಕೋವಿಲ್‌- ಮಂಗಳೂರು ಸೆಂಟ್ರಲ್‌ ಏರನಾಡ್‌ ಎಕ್ಸ್‌ಪ್ರೆಸ್‌ (16606) ರೈಲು ಮಂಗಳೂರಿಗೆ ಜು. 23, 25, 26 ಮತ್ತು 28 ರಂದು 110 ನಿಮಿಷ ತಡವಾಗಿ ತಲುಪುವುದು. 

ಜು. 19, 22, 24, 27 ಮತ್ತು 29 ರಂದು ಈ ವಿಭಾಗದಲ್ಲಿ ರೈಲು ಸಂಚಾರ ಎಂದಿನಂತಿರುತ್ತದೆ ಎಂದು ದಕ್ಷಿಣ ರೈಲ್ವೇಯ ಪ್ರಕಟನೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next