Advertisement

ಮೆಟ್ರೋ ಸೇವೆಯಲ್ಲಿ ವ್ಯತ್ಯಯ

02:48 PM Nov 30, 2021 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಹಸಿರು ಮಾರ್ಗ ದಲ್ಲಿ ಸೋಮವಾರ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡು, ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ರೇಷ್ಮೆ ಸಂಸ್ಥೆ- ನಾಗಸಂದ್ರ ನಡುವಿನ ಪೀಣ್ಯ ಕೈಗಾರಿಕಾ ಪ್ರದೇಶ ನಿಲ್ದಾಣದ ಬಳಿ ಮಧ್ಯಾಹ್ನ 1.10ರ ಸುಮಾರಿಗೆ ತಾಂ ತ್ರಿಕ ದೋಷ ಕಾಣಿಸಿಕೊಂಡಿದೆ.

Advertisement

ಇದರಿಂದ ಹಿಂದಿನ ನಿಲ್ದಾಣದಲ್ಲೇ ರೈಲು ನಿಲುಗಡೆ ಮಾಡಿ, ವಾಪಸ್‌ ಕಳು ಹಿಸಲಾಯಿತು. ಇದರಿಂದ ಪ್ರಯಾ ಣಿಕರು ಕೆಲಹೊತ್ತು ಆತಂಕಕ್ಕೆ ಒಳಗಾದರು. ಅಲ್ಲದೆ ರೈಲು ಇಳಿದು, ರಸ್ತೆ ಮೂಲಕ ಪ್ರಯಾಣ ಬೆಳೆಸಬೇಕಾದ್ದರಿಂದ ಕಿರಿಕಿರಿಯೂ ಉಂಟಾಯಿತು. 1.10ರಿಂದ 1.35ರವರೆಗೆ ಅಂದರೆ ಸುಮಾರು 25 ನಿಮಿಷಗಳ ಕಾಲ ಸೇವೆಯಲ್ಲಿ ವ್ಯತ್ಯಯ ಉಂಟಾ ಯಿತು. ಆ ಮಾರ್ಗದಲ್ಲಿ ಬರುವ ಎಲ್ಲ ರೈಲುಗಳಿಗೂ ಇದರಿಂದ ಸಮಸ್ಯೆ ಆಯಿತು.

ಇದನ್ನೂ ಓದಿ:-ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

ಹಾಗಾಗಿ, ರೇಷ್ಮೆ ಸಂಸ್ಥೆಯಿಂದ ಬರುವ ಮೆಟ್ರೋ ರೈಲುಗಳು ಯಶವಂತಪುರಕ್ಕೆ ಬಂದು ವಾಪಸ್‌ ಆದವು. 1.35ರ ನಂತರ ಎಂದಿನಂತೆ ಇಡೀ ಮಾರ್ಗಕ್ಕೆ ರೈಲುಗಳ ಕಾರ್ಯಾಚರಣೆ ಮುಂದುವರಿಯಿತು.

ಆಗಿದ್ದೇನು?: ಪ್ರತಿ ನಿಲ್ದಾಣದಲ್ಲೂ ಹಾಗೂ ರೈಲು ಮಾರ್ಗದುದ್ದಕ್ಕೂ “ಡಿಟೆಕ್ಷನ್‌ ಪಾಯಿಂಟ್‌’ ಇರುತ್ತದೆ. ಇದು ನೀಡುವ ಸೂಚನೆಗಳ ಆಧರಿಸಿ ನಿಲ್ದಾಣಗಳಿಗೆ ರೈಲುಗಳನ್ನು ಸ್ವೀಕರಿಸುವುದು ಮತ್ತು ಕಳುಹಿಸುವ ಕೆಲಸ ನಡೆಯುತ್ತದೆ. ಸುರಕ್ಷತೆ ಸೇರಿದಂತೆ ಎಲ್ಲ ಸೂಚನೆಗಳನ್ನೂ ಇದು ನೀಡುತ್ತದೆ.

Advertisement

ಯುಪಿಎಸ್‌ ಬ್ಯಾಟರಿಯಿಂದ ಕಾರ್ಯ ನಿರ್ವಹಿಸುವ ಈ ಡಿಟೆಕ್ಷನ್‌ ಪಾಯಿಂಟ್‌ನಿಂದ ಸಿಗ್ನಲ್‌ ಬರದಿದ್ದರೆ, ಅದು ತಾಂತ್ರಿಕ ದೋಷ ಎಂದು ಪರಿಗಣಿಸಿ ರೈಲುಗಳನ್ನು ಸ್ವೀಕರಿಸುವುದಿಲ್ಲ. ಪೀಣ್ಯ ಕೈಗಾರಿಕಾ ಪ್ರದೇಶ ನಿಲ್ದಾಣದಲ್ಲಿ ಸೋಮವಾರ ಈ ಡಿಟೆಕ್ಷನ್‌ ಪಾಯಿಂಟ್‌ನಿಂದ ಮಧ್ಯಾಹ್ನ 1.10ಕ್ಕೆ ಯಾವುದೇ ಸೂಚನೆಗಳು ಬರಲಿಲ್ಲ. ಹಾಗಾಗಿ, ಸುರಕ್ಷತೆ ದೃಷ್ಟಿಯಿಂದ ಎರಡೂ ಕಡೆಯಿಂದ ಬರಬೇಕಾದ ರೈಲುಗಳನ್ನು ಹತ್ತಿರದ ನಿಲ್ದಾಣಗಳಲ್ಲೇ ನಿಲುಗಡೆಗೆ ಸೂಚಿಸಲಾಯಿತು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next