Advertisement

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

04:58 PM Sep 23, 2023 | Team Udayavani |

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ದಿಲೀಪ್ ವೆಂಗ್‌ಸರ್ಕರ್ ಅವರು ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಹಲವಾರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕ್ರೀಡಾಂಗಣದ ಬಗ್ಗೆ 6 ಸಂಗತಿಗಳು ಇಲ್ಲಿವೆ:

1. ಕ್ರೀಡಾಂಗಣವು 30,000 ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ, ಮೆಟ್ಟಿಲುಗಳನ್ನು ಹೋಲುವ ಪ್ರೇಕ್ಷಕರ ಗ್ಯಾಲರಿ ಇರುತ್ತದೆ. ಕ್ರೀಡಾಂಗಣವು ಏಳು ಪಿಚ್‌ಗಳನ್ನು ಹೊಂದಿರುತ್ತದೆ ಮತ್ತು ಡಿಸೆಂಬರ್ 2025 ರ ವೇಳೆಗೆ ಸಿದ್ಧವಾಗುವ ಸಾಧ್ಯತೆಯಿದೆ.

2. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಗಂಜಾರಿಯಲ್ಲಿನ ಭೂ ಸ್ವಾಧೀನಕ್ಕೆ 120 ಕೋಟಿ ರೂ. ಮತ್ತೊಂದೆಡೆ ಬಿಸಿಸಿಐ ಕ್ರೀಡಾಂಗಣದ ನಿರ್ಮಾಣ ವೆಚ್ಚವನ್ನು (330 ಕೋಟಿ ರೂ.) ಭರಿಸಲಿದೆ.

Advertisement

3. ಶಿವನ ಪ್ರೇರಣೆಯಿಂದ ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ. ಇದರ ಮೇಲ್ಛಾವಣಿಯ ಕವರ್‌ಗಳು ಅರ್ಧಚಂದ್ರಾಕೃತಿಯಲ್ಲಿವೆ. ಫ್ಲಡ್ ಲೈಟ್ಸ್ ಗಳು ತ್ರಿಶೂಲ ಆಕೃತಿಯಲ್ಲಿದೆ. ಆಸನಗಳನ್ನು ನೋಡಿದರೆ ವಾರಣಾಸಿ ಘಾಟ್‌ಗಳು ನೆನಪಾಗುತ್ತವೆ. ಮುಂಭಾಗವು ಚಿಗುರೆಲೆಗಳನ್ನು ಹೋಲುವ ಲೋಹದ ಹಾಳೆಗಳನ್ನು ಒಳಗೊಂಡಿದೆ.

4. ಕಾನ್ಪುರದ ಗ್ರೀನ್ ಪಾರ್ಕ್ ಮತ್ತು ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂ ನಂತರ ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಿದೆ.

5.ಈ ಕ್ರೀಡಾಂಗಣದ ವಾಸ್ತುಶಿಲ್ಪವು ಭಗವಾನ್ ಶಿವನಿಂದ ಪ್ರೇರಿತವಾಗಿದೆ. ಭಾರತೀಯ ಹಿಂದೂ ಶೈಲಿಯಲ್ಲಿ ವಾರಣಾಸಿಯ ಈ ಮೈದಾನ ಸಿದ್ಧವಾಗುತ್ತಿದ್ದು, ಸದ್ಯ ಎಲ್ಲರ ಆಕರ್ಷಣೀಯ ಕ್ರೇಂದ್ರ ಬಿಂದುವಾಗಲಿದೆ.

6. ಈಗಾಗಲೇ ಹೆಚ್ಚಿನ ಪ್ರವಾಸಿಗರ ಭೇಟಿಯನ್ನು ಕಾಣುತ್ತಿರುವ ವಾರಣಾಸಿಯಲ್ಲಿ ಸಾವಿರಾರು ಕಾರ್ಮಿಕರಿಗೆ ಈ ಕ್ರೀಡಾಂಗಣವು ಆದಾಯವನ್ನು ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕ್ರೀಡಾಂಗಣಕ್ಕೆ ಬರುವ ಜನಸಂದಣಿಯಿಂದ ಪ್ರಯೋಜನ ಪಡೆಯುವವರಲ್ಲಿ ಚಾಲಕರು ಮತ್ತು ಬೋಟ್‌ಮೆನ್‌ಗಳು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next