Advertisement

Varahi Project; 9 ಕೋಟಿಯಿಂದ 1,300 ಕೋ.ರೂ. ದಾಟಿದ ಯೋಜನೆ!

12:34 AM Jul 12, 2023 | Team Udayavani |

ಉಡುಪಿ: ಒಂದು ನೀರಾವರಿ ಯೋಜನೆ; ಬರೋಬ್ಬರಿ 44 ವರ್ಷಗಳಲ್ಲಿ ಅದರ ಯೋಜನಾ ವೆಚ್ಚ ಎಷ್ಟರ ಮಟ್ಟಿಗೆ ಏರಿಕೆಯಾಗಬಹುದು? ಹತ್ತು ಪಟ್ಟು, ಇಪ್ಪತ್ತು ಪಟ್ಟು…

Advertisement

ಅಷ್ಟಾಗಿದ್ದರೆ ನಿಟ್ಟುಸಿರು ಬಿಡ ಬಹುದಿತ್ತು. ಅವೆಲ್ಲವನ್ನೂ ಮೀರಿಸು ವಂತೆ ನೂರಾರು ಪಟ್ಟು ಹೆಚ್ಚಾ ದರೆ? ಇಷ್ಟಕ್ಕೂ ಈ ಯೋಜನೆ ಪೂರ್ಣಗೊಂಡಿತೇ? ಇಲ್ಲ , ಇನ್ನೂ ಪ್ರಗತಿಯಲ್ಲಿದೆ! ಅಚ್ಚರಿ ಎಂದರೆ ಯೋಜನಾ ವೆಚ್ಚ ಪರಿಷ್ಕರಣೆ ಈಗಲೂ ಮುಗಿದಿಲ್ಲ. ಮತ್ತೊಂದು ಪರಿಷ್ಕೃತ ಯೋಜನೆಯ ಪ್ರಕಾರ ಇದರ ವೆಚ್ಚ 1,700 ಕೋಟಿ ರೂ. ತಲುಪಬಹುದು!

ಹಲವು ಸರಕಾರಗಳು, ಇಲಾಖೆ, ಜನಪ್ರತಿನಿಧಿಗಳ ಕಾರ್ಯವೈಖರಿಗೂ ಇದು ಸ್ಪಷ್ಟ ನಿದರ್ಶನ. ಕೃಷಿ ಗೆಂದು ಆರಂಭವಾದ ಯೋಜನೆ ನೀರಿಲ್ಲದೆ ಕೃಷಿಕರೆಲ್ಲ ಊರು ಬಿಡುವ ಸ್ಥಿತಿ ಬಂದರೂ ಜಾರಿಗೊಂಡಿಲ್ಲ.

ಎಲ್ಲರ ಗದ್ದೆಗಳಿಗೆ ನೀರು ಹರಿದಿಲ್ಲ ಎಂಬುದೇ ಅಚ್ಚರಿ. ಹಾಗಾಗಿ ಯೋಜನೆ ರೈತರಿಗೋ, ಇಲಾಖೆಗೋ, ಅಧಿಕಾರಿಗಳಿಗೋ ಎಂಬ ಪ್ರಶ್ನೆ ಜನರದ್ದು.

4 ದಶಕಗಳ ಹಿಂದೆ ಕೇವಲ 9.43 ಕೋ.ರೂ. ಆಡಳಿತಾತ್ಮಕ ಅನುಮೋದನೆ ಯಿಂದ ಆರಂಭಗೊಂಡ ವಾರಾಹಿ ನೀರಾವರಿ ಯೋಜನೆಗೆಯ ಗಾತ್ರ ಪ್ರಸ್ತುತ 1,302.09 ಕೋಟಿ ರೂ.ಗೆ ತಲುಪಿದೆ. ಆದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.

Advertisement

ಉಡುಪಿ ಮತ್ತು ಕುಂದಾಪುರ ತಾಲೂಕಿನ 15,702 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 1979ರಲ್ಲಿ ಆಗಿನ ರಾಜ್ಯ ಸರಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಅನಂತರ ಯೋಜನೆಯ ಗಾತ್ರ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಾ ಸಾಗಿತೇ ವಿನಾ ಕಾಮಗಾರಿ ವೇಗ ಪಡೆಯಲೇ ಇಲ್ಲ. ಇದರಿಂದ ಈ ಭಾಗದ ರೈತರು ವಾರಾಹಿ ಬರುತ್ತಾಳೆಂದು ಕಾಯುತ್ತ ಕುಳಿತಿದ್ದಾರೆ, ಅವರ ಕಾಯುವಿಕೆ ಇನ್ನೂ ಮುಗಿದಿಲ್ಲ.

ವಾರಾಹಿ ಬಲದಂಡೆ ಸಾಮಾನ್ಯ ಕಾಲುವೆ ಸರಪಳಿಯಲ್ಲಿ 18.72 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಎಡ ದಂಡೆ ಕಾಲುವೆ ಸರಪಳಿ ಯಲ್ಲಿ 38 ಕಿ.ಮೀ. ಪೂರ್ಣಗೊಂಡಿದೆ. ಇದ ರಿಂದ ಸುಮಾರು 6,110 ಹೆಕ್ಟೇರ್‌ ಪ್ರದೇಶ ಅಚ್ಚುಕಟ್ಟು ಸೃಜಿಸಲಾಗಿದೆ. ಆಗಬೇಕಾದ ಕಾಮಗಾರಿಗಳು ಸಾಕಷ್ಟಿವೆ.

2024-25 ಗಡುವು
ರಾಜ್ಯ ಸರಕಾರ ಯೋಜನೆಯನ್ನು ಕಾಲಮಿತಿ ಯೊಳಗೆ ಪೂರ್ಣಗೊಳಿಸಲು ಮತ್ತೂಂದು ಗಡುವು ವಿಧಿಸಿದೆ. ಯೋಜನೆಯಡಿ ಕಾಲುವೆ ನಿರ್ಮಾಣ, ಅರಣ್ಯ ಹಾಗೂ ಅರಣ್ಯೇತರ ಭೂ ಪ್ರದೇಶಗಳ ಸ್ವಾಧೀನ ಪಡೆಯಲು / ಹಸ್ತಾಂತರಿಸಲು (ಅದಕ್ಕೆ ಪರಿಹಾರ ನೀಡುವುದು ಸೇರಿ) ಪ್ರಯತ್ನ ನಡೆದಿದೆ. ಕಾಮಗಾರಿಗಳನ್ನು 2024 25ನೇ ಸಾಲಿನಲ್ಲಿ ಪೂರ್ಣಗೊಳಿಸಲು ಸೂಚಿಸ ಲಾಗಿದೆ. ಸರಕಾರದ ಅನುದಾನದ ಲಭ್ಯತೆಯ ಆಧಾರದಲ್ಲಿ ಮುಂದಿನ ಕ್ರಮ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಎಲ್ಲ ತಾಲೂಕುಗಳಿಗೂ ನೀರು
ವಾರಾಹಿ ಅಚ್ಚುಕಟ್ಟಿನ ಪ್ರದೇಶಕ್ಕೆ ನೀರುಣಿಸಲು ಯೋಜನೆಯನ್ನು ಆರಂಭಿಸಲಾಗಿತ್ತು. ಅನಂತರ ಯೋಜನೆಯನ್ನು ತಾಲೂಕಿನಿಂದ ಹೊರಗೂ ವಿಸ್ತರಿಸಲಾಯಿತು. ಪ್ರಸ್ತುತ ವಾರಾಹಿಯಿಂದಲೇ ಉಡುಪಿ ನಗರಕ್ಕೂ ಕುಡಿಯುವ ನೀರು ಪೂರೈಸುವ ಯೋಜನೆ ಚಾಲ್ತಿಯಲ್ಲಿದೆ. ಬೈಂದೂರು ಮತ್ತು ಕಾರ್ಕಳ ತಾಲೂಕಿಗೂ ಪ್ರತ್ಯೇಕ ಯೋಜನೆಯಡಿ ವಿಸ್ತರಿಸಲಾಗಿದೆ ಮತ್ತು ಕಾಮಗಾರಿಯೂ ನಡೆಯುತ್ತಿದೆ. ಹೀಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ವಾರಾಹಿ ಬರಲಿದೆಯಂತೆ.

9.43 ಕೋ.ರೂ.ಗಳಿಂದ ಯೋಜನೆ ಆರಂಭವಾಗಿ 2003 2004ರಲ್ಲಿ 569.53 ಕೋ.ರೂ.ಗಳಿಗೆ ಯೋಜನೆ ಪರಿಷ್ಕೃತಗೊಂಡಿತು. 2006ರಲ್ಲಿ ಸರಕಾರ ಈ ಪರಿಷ್ಕೃತ ಯೋಜನೆಗೆ ಆನುಮೋದನೆ ನೀಡಿತು. ವಿಶೇಷವೆಂದರೆ ಈವರೆಗೆ 1,302 ಕೋ.ರೂ. ವೆಚ್ಚ ಮಾಡಲಾಗಿದೆ.

ಹೊಸ ಡಿಪಿಆರ್‌
ವಾರಾಹಿ ಯೋಜನೆಯನ್ನು ಇನ್ನಷ್ಟು ವಿಸ್ತರಿ ಸುವ ಹಿನ್ನೆಲೆಯಲ್ಲಿ 2014 15ರಲ್ಲಿ 1,789.50 ಕೋ.ರೂ.ಗಳಿಗೆ ಪರಿಷ್ಕೃತ ವಿಸ್ತೃತ ಯೋಜನ ವರದಿ (ಡಿಪಿಆರ್‌) ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಪರಿಷ್ಕೃತ ಡಿಪಿಆರ್‌ಗೆ ಒಪ್ಪಿಗೆ ನೀಡಿದಲ್ಲಿ ಯೋಜನೆಯ ಗಾತ್ರ ಇನ್ನಷ್ಟು ಹಿಗ್ಗಲಿದೆ ಎಂದು ಹೇಳಲಾಗುತ್ತಿದೆ.

ಕಾಮಗಾರಿ ವಿಳಂಬ ಏಕೆ?
ಯೋಜನೆಯ ಬಹುಪಾಲು ಪ್ರದೇಶದಲ್ಲಿ ಅರಣ್ಯ, ಸಂರಕ್ಷಿತ ಅರಣ್ಯ ಇರುವುದರಿಂದ ಕಾಮಗಾರಿಗೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ ಎನ್ನುವುದು ಅಧಿಕಾರಿಗಳ ವಾದ. ಆದರೆ ತಾಂತ್ರಿಕ ಸಮಸ್ಯೆ ಇಲ್ಲದ ಕಡೆಗಳಲ್ಲೂ ಕಾಮಗಾರಿ ವಿಳಂಬವಾಗುತ್ತಿದೆ ಎಂಬುದಕ್ಕೆ ಅಧಿಕಾರಿಗಳಲ್ಲಿ ಉತ್ತರ ಇಲ್ಲ ಎನ್ನುವುದು ಸಾರ್ವಜನಿಕರ ವಾದ.

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next