Advertisement

ವರದ ಮೋಶನ್‌ ಪೋಸ್ಟರ್‌ ಗೆ ಮೆಚ್ಚುಗೆ

09:17 AM Jul 15, 2021 | Team Udayavani |

“ರಾಬರ್ಟ್‌’ ಚಿತ್ರದ ಯಶಸ್ಸಿನ ನಂತರ ಮರಿ ಟೈಗರ್‌ ವಿನೋದ್‌ ಪ್ರಭಾಕರ್‌ “ವರದ’ನಾಗಿ ಬರುತ್ತಿದ್ದಾರೆ. ಈ ಚಿತ್ರದ ಮೋಷನ್‌ ಪೋಸ್ಟರ್‌ “ಆನಂದ್‌ ಆಡಿಯೋ’ ಮೂಲಕ ಬಿಡುಗಡೆಯಾಗಿದೆ. ಸ್ಯಾಂಡಲ್‌ ವುಡ್‌ ನಲ್ಲಿ ಈ ಚಿತ್ರದ ಮೋಷನ್‌ ಪೋಸ್ಟರ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಚಿತ್ರದ ಬಗ್ಗೆ ಮಾತನಾಡಿದ ನಾಯಕ ವಿನೋದ್‌ ಪ್ರಭಾಕರ್‌, “ವರದ ತಂದೆ-ಮಗನ ಬಾಂಧವ್ಯದ ಸಿನಿಮಾ. ಈ ಚಿತ್ರದಲ್ಲಿ ನನ್ನ ತಂದೆಯಾಗಿ ಖ್ಯಾತ ನಟ ಚರಣ್‌ ರಾಜ್‌ ಅಭಿನಯಿಸಿದ್ದಾರೆ. ನಾಯಕಿಯಾಗಿ ಅಮಿತಾ ನಟಿಸಿದ್ದಾರೆ. ನೆಗಟಿವ್‌ ಶೇಡ್‌ನ‌ಲ್ಲಿ ನಟಿಸಿರುವ ಮಠ ಅವರ ಪಾತ್ರ ತುಂಬಾ ಚೆನ್ನಾಗಿದೆ. ನನ್ನ ತಾಯಿಯ ಪಾತ್ರದಲ್ಲಿ ಅಭಿನಯಿಸಿರುವ ಅಶ್ವಿ‌ನಿಗೌಡ ಸೇರಿದಂತೆ ಇದರಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿದೆ. ತಾಂತ್ರಿಕ ವರ್ಗ ದವರ ಚಿತ್ರ ಸುಂದರವಾಗಿ ಮೂಡಿಬರಲು ಹೆಚ್ಚು ಸಹಕಾರಿ. ಮುಂದೆ ಚಿತ್ರದ ಟೀಸರ್‌, ಟ್ರೇಲರ್‌ ಬಿಡುಗಡೆಯಾಗಲಿದೆ ಆಗ ಸಾಕಷ್ಟು ಮಾಹಿತಿ ನೀಡುತ್ತೇನೆ’ ಎಂದು ವಿನೋದ್‌ ತಿಳಿಸಿದರು.

ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಹಿರಿಯ ನಟ ಚರಣ್‌ ರಾಜ್, ಹಿಂದೆ ಪ್ರಭಾಕರ್‌ ಅವರೊಂದಿಗೆ ನಟಿಸಿದ್ದ ಅನುಭವಗಳನ್ನು ಹಂಚಿಕೊಂಡರು. “ತಂದೆಯಂತೆ ಮಗ ವಿನೋದ್‌ಕೂಡ ಸ್ನೇಹಜೀವಿ, ಅವರಿಗೆ ಉತ್ತಮ ಭವಿಷ್ಯವಿದೆ’ ಎಂದರು. ನಿರ್ದೇಶಕ ಉದಯ ಪ್ರಕಾಶ್‌ ಅವರ ಕಾರ್ಯವೈಖರಿಯನ್ನು ಚರಣ್‌ ರಾಜ್‌ ಮುಕ್ತಕಂಠದಿಂದ ಶ್ಲಾಘಿಸಿದರು.

ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕ ಉದಯ ಪ್ರಕಾಶ್‌, “ಈ ಚಿತ್ರ 2 ವರ್ಷಗಳ ಹಿಂದೆ ಆರಂಭವಾಯಿತು. ಆದರೆ ಕೊರೋನ ಎಂಬ ಒಂದು ಪದ ದಿಂದ ನಮ್ಮ ಚಿತ್ರ ತಡವಾಗಲುಕಾರಣವಾಯಿತು. ಇಲ್ಲದಿದ್ದರೆಕಳೆದ ವರ್ಷವೇ ತೆರೆಗೆ ಬರುತಿತ್ತು’ ಎಂದರು.

“ಈಗಾಗಲೇ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟರ್‌ ಪೊ›ಡಕ್ಷನ್‌ ಕೆಲಸ ಬಿರುಸಿನಿಂದ ಸಾಗಿದೆ. ಈಗ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದೇವೆ. ಅದರಲ್ಲಿ ಬರುವ ಮೂರು ಸಂಭಾಷಣೆಗಳೇ ಚಿತ್ರದಕಥಾವಸ್ತು. ನನ್ನ ಚಿತ್ರ ಉತ್ತಮವಾಗಿ ಮೂಡಿಬರುತ್ತಿರುವುದಕ್ಕೆ ನನ್ನ ಚಿತ್ರತಂಡದ ಸಹಕಾರವೇ ಪ್ರಮುಖ ಕಾರಣ. ಅದರಲ್ಲೂ ನಮ್ಮ ನಾಯಕ ವಿನೋದ್‌ ಪ್ರಭಾಕರ್‌ ಅವರು ಚಿತ್ರದಲ್ಲಿ ತೊಡಗಿಸಿಕೊಳ್ಳುವ ರೀತಿ ಅದ್ಭುತ. ಎಲ್ಲದಕ್ಕೂ ಮಿಗಿಲಾಗಿ ಈ ಚಿತ್ರ ಆರಂಭಿಸುವಾಗ ನನ್ನ ಬಳಿ ಕೇವಲ ಒಂದು ಲಕ್ಷ ರೂಪಾಯಿ ಇತ್ತು. ಆ ಸಮಯದಲ್ಲಿ ನನಗೆ ಉತ್ತೇಜನ ನೀಡಿ ಚಿತ್ರ ನಿರ್ಮಾಣ ಮಾಡುವಂತೆ ಪ್ರೇರೇಪಿಸಿದ ತಮ್ಮ ಶ್ರೀಮತಿ ಸುನಿತಾ ಅವರಿಗೆ ವಿಶೇಷ ಧನ್ಯವಾದ’ ಎಂದು ತಿಳಿಸಿದರು ಉದಯ ಪ್ರಕಾಶ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next