Advertisement
ಡೆನ್ಮಾರ್ಕ್‌ನ ಮುನ್ನಡೆ ಯೊಂದಿಗೆ ಈ ಹೋರಾಟ ಕಾವೇರಿಸಿಕೊಂಡಿತ್ತು. ನಾಡಿಯಾ ನಾದಿಮ್ ಪಂದ್ಯದ ಆರೇ ನಿಮಿಷದಲ್ಲಿ ಪೆನಾಲ್ಟಿ ಗೋಲೊಂದರ ಮೂಲಕ ಡೆನ್ಮಾರ್ಕ್ ಖಾತೆ ತೆರೆದರು. ಆದರೆ ಇದಾದ ನಾಲ್ಕೇ ನಿಮಿಷದಲ್ಲಿ ಹಾಲೆಂಡ್ ತಂಡದ ವಿವಿ ಯನ್ ಮೀಡೆಮಾ ಆಕರ್ಷಕ ಗೋಲಿನ ಮೂಲಕ 1-1 ಸಮಬಲ ತಂದಿತ್ತರು. ಪಂದ್ಯದ ಮುಕ್ತಾಯಕ್ಕೆ 2 ನಿಮಿಷ ಇರುವಾಗ ಮತ್ತೂಂದು ಮಹತ್ವದ ಗೋಲನ್ನು ಅವರು ಸಿಡಿಸಿದರು.
ಹಾಲೆಂಡ್ ಯೂರೋ ಕಪ್ ಗೆದ್ದ ಕೇವಲ 4ನೇ ತಂಡವಾಗಿದೆ. ಜರ್ಮನಿ ಸರ್ವಾಧಿಕ 8 ಸಲ, ನಾರ್ವೆ ಮತ್ತು ಸ್ವೀಡನ್ ತಲಾ 2 ಸಲ ಚಾಂಪಿಯನ್ ಆಗಿವೆ. 1995ರಿಂದ 2013ರ ತನಕ ಜರ್ಮನಿ ಸತತ 6 ಸಲ ಪ್ರಶಸ್ತಿಯನ್ನೆತ್ತಿ ತನ್ನ ಪ್ರಾಬಲ್ಯ ಸ್ಥಾಪಿಸಿತ್ತು. ಈ ಪಂದ್ಯಾವಳಿಗೆ ಅಧಿಕೃತ ಮಾನ್ಯತೆ ಲಭಿಸುವ ಮುನ್ನ ಇಟಲಿ (1969) ಮತ್ತು ಡೆನ್ಮಾರ್ಕ್ (1979) ಚಾಂಪಿಯನ್ ಆಗಿದ್ದವು. “ಇದೊಂದು ಓಪನ್ ಮ್ಯಾಚ್ ಆಗಿತ್ತು. ಎರಡೂ ತಂಡಗಳು ಅಮೋಘ ಹೋರಾಟ ಪ್ರದರ್ಶಿಸಿದವು. ಪ್ರಶಸ್ತಿ ಸಮರ ವೊಂದರಲ್ಲಿ 6 ಗೋಲು ದಾಖ ಲಾದದ್ದು ವನಿತಾ ಫುಟ್ಬಾಲ್ ಪಾಲಿಗೆ ಮಹತ್ವದ ಸಂಗತಿಯಾಗಿದೆ’ ಎಂದು ಹಾಲೆಂಡ್ ಕೋಚ್ ಸರಿನಾ ವೀಗ್‌ಮನ್ ಪ್ರತಿಕ್ರಿಯಿಸಿದ್ದಾರೆ.
“ನಾವು ಈ ಕೂಟದಲ್ಲಿ 6 ಆದ್ಭುತ ಪಂದ್ಯಗಳನ್ನು ಆಡಿದ್ದೇವೆ. ಹಿನ್ನಡೆ ಸಾಧಿಸಿ ದರೂ ಗೆದ್ದು ಬರುವ ತಾಕತ್ತು ನಮಗಿದೆ ಎಂಬುದನ್ನು ಫೈನಲ್‌ನಲ್ಲಿ ತೋರಿಸಿ ಕೊಟ್ಟಿದ್ದೇವೆ…’ ಎಂಬುದು ಹಾಲೆಂಡಿನ ಗೆಲುವಿನ ರೂವಾರಿ ವಿವಿಯನ್ ಮೀಡೆಮಾ ಅವರ ಹೇಳಿಕೆ.