Advertisement

Australian Open: ವನಿತಾ ಡಬಲ್ಸ್‌ ಸು ವೀ-ಮಾರ್ಟೆನ್ಸ್‌ ಜೋಡಿಗೆ ಪ್ರಶಸ್ತಿ

10:54 PM Jan 28, 2024 | Team Udayavani |

ಮೆಲ್ಬರ್ನ್: ತೈವಾನ್‌ನ ಹೀ ಸು ವೀ-ಬೆಲ್ಜಿಯಂನ ಎಲೈಸ್‌ ಮರ್ಟೆನ್ಸ್‌ ಆಸ್ಟ್ರೇಲಿಯನ್‌ ಓಪನ್‌ ವನಿತಾ ಡಬಲ್ಸ್‌ ಪ್ರಶಸ್ತಿಯನ್ನೆತ್ತಿದ್ದಾರೆ. ರವಿವಾರದ ಫೈನಲ್‌ನಲ್ಲಿ ಇವರು ಜೆಲೆನಾ ಒಸ್ಟಾಪೆಂಕೊ (ಲಾತ್ವಿಯಾ)- ಲುದ್ಮಿಲಾ ಕಿಶೆನೋಕ್‌ (ಉಕ್ರೇನ್‌) ವಿರುದ್ಧ 6-1, 7-5ರಿಂದ ಗೆದ್ದು ಬಂದರು.

Advertisement

ದ್ವಿತೀಯ ಶ್ರೇಯಾಂಕದ ಸು ವೀ-ಮರ್ಟೆನ್ಸ್‌ ಜೋಡಿಗೆ ಒಲಿದ 2ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಇದಾಗಿದೆ. ಇದಕ್ಕೂ ಮೊದಲು 2021ರ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದರು.
38 ವರ್ಷದ ಹೀ ಸು ವೀ ವನಿತಾ ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ 2ನೇ ಅತೀ ಹಿರಿಯ ಆಟಗಾರ್ತಿ ಆಗಿದ್ದಾರೆ. ದಾಖಲೆ ಲೀಸಾ ರೇಮಂಡ್‌ ಹೆಸರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next