Advertisement

Women Ashes: ಅನ್ನಾಬೆಲ್‌ ಅಜೇಯ ಶತಕ

10:37 PM Jun 23, 2023 | Team Udayavani |

ನಾಟಿಂಗ್‌ಹ್ಯಾಮ್‌: ಇಲ್ಲಿನ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ನಡೆಯುತ್ತಿರುವ ವನಿತಾ ಆ್ಯಶಸ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯದ ಕೆಳ ಕ್ರಮಾಂಕದ ಆಟಗಾರ್ತಿ ಅನ್ನಾಬೆಲ್‌ ಸದರ್‌ಲ್ಯಾಂಡ್‌ ಅಜೇಯ ಶತಕ ಬಾರಿಸಿ ಇಂಗ್ಲೆಂಡ್‌ಗೆ ಸವಾಲಾದರು.

Advertisement

8ನೇ ಕ್ರಮಾಂಕದಲ್ಲಿ ಆಡಲಿಳಿದ ಅನ್ನಾಬೆಲ್‌ 39 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ದ್ವಿತೀಯ ದಿನದ ಬ್ಯಾಟಿಂಗ್‌ ಮುಂದುವರಿಸಿ 137 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಇವರ ಅಮೋಘ ಬ್ಯಾಟಿಂಗ್‌ ಸಾಹಸದಿಂದ ಆಸ್ಟ್ರೇಲಿಯ 473 ರನ್‌ ಪೇರಿಸಿತು. ಇದು ಅನ್ನಾಬೆಲ್‌ ಸದರ್‌ಲ್ಯಾಂಡ್‌ ಅವರ ಕೇವಲ 3ನೇ ಟೆಸ್ಟ್‌. ಈವರೆಗೆ ಗಳಿಸಿದ್ದು ಬರೀ 18 ರನ್‌. ಸರ್ವಾಧಿಕ ಗಳಿಕೆ 8 ರನ್‌ ಆಗಿತ್ತು. 184 ಎಸೆತ ನಿಭಾಯಿಸಿದ ಅವರು 16 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಅಲಾನಾ ಕಿಂಗ್‌ 21, ಕಿಮ್‌ ಗಾರ್ತ್‌ 22 ರನ್‌ ಮಾಡಿದರು. ಇಂಗ್ಲೆಂಡ್‌ನ‌ ಎಡಗೈ ಸ್ಪಿನ್ನರ್‌ ಸೋಫಿ ಎಕ್‌

ಸ್ಟೋನ್‌ 5 ವಿಕೆಟ್‌ ಹಾರಿಸಿದರು. ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್‌ ಒಂದು ವಿಕೆಟಿಗೆ 151 ರನ್‌ ಮಾಡಿ ದಿನದಾಟ ಮುಂದುವರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next