Advertisement

ಹಿಂದುಳಿದ ಪ್ರದೇಶದಲ್ಲಿ ಹೈನುಗಾರರ ಆಶಾಕಿರಣ

09:43 PM Feb 13, 2020 | Sriram |

ಹೈನುಗಾರರ ಬದುಕಿಗೊಂದು ಹೊಸ ಆಯಾಮ ಸೃಷ್ಟಿಸಿ ಆ ಮೂಲಕ ಅವರ ಜೀವನೋಪಾಯಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿದ ಹೆಗ್ಗಳಿಕೆ ವಂಡ್ಸೆ ಹಾಲು ಉತ್ಪಾದಕರ ಸಂಘದ್ದು.

Advertisement

ವಂಡ್ಸೆ: ಇಲ್ಲಿನ ಪರಿಸರದ ಹೈನುಗಾರರ ಬದುಕಿಗೊಂದು ಹೊಸ ಆಯಾಮ ಸೃಷ್ಟಿಸಿ ಆ ಮೂಲಕ ಅವರ ಜೀವನೋಪಾಯಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿದ ಹೆಗ್ಗಳಿಕೆ ವಂಟೆÕ ಹಾಲು ಉತ್ಪಾದಕರ ಸಂಘದ್ದು. ಇದೀಗ ಸಂಘ ಯಶಸ್ವಿ 34 ವರ್ಷಗಳನ್ನು ಪೂರ್ಣಗೊಳಿಸಿದೆ.

ಜಾನು ವಾರುಗಳ ಸಾಕಣೆಯೊಂದಿಗೆ ಹೈನುಗಾರಿಕೆಯ ಮೂಲಕ ಆರ್ಥಿಕಾಭಿವೃದ್ಧಿಗೆ ಕಾರಣವಾಗಿ ಜನರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ದೊಂದಿಗೆ ಹುಟ್ಟಿಕೊಂಡಿತು.

3 ಸಾವಿರ ಲೀ.
ಹಾಲು ಸಂಗ್ರಹ
ಇಲ್ಲಿ ಶೀತಲೀಕೃತ ಘಟಕವೂ ಇದ್ದು ಅದರಲ್ಲಿ ಹಾಲು ಸಂಗ್ರಹಿಸಿ ಟ್ಯಾಂಕರ್‌ ಮೂಲಕ ಒಕ್ಕೂಟಕ್ಕೆ ರವಾನಿಸಲಾಗುತ್ತದೆ. ವಂಡ್ಸೆ, ಮಾರಣಕಟ್ಟೆ, ಕುಡೂರು, ಅರೆಶಿರೂರು ಮುಂತಾದೆಡೆಯಿಂದ ಸಂಗ್ರಹಿಸಲಾಗುವ ಹಾಲನ್ನು 3 ಸಾವಿರ ಲೀ. ಸಾಮರ್ಥಯದ ಸಾಂದ್ರ ಶೀತಲೀಕರಣ ಘಟಕದಲ್ಲಿ ಸಂಗ್ರಹಿಸಲಾಗುತ್ತದೆ. ಕರ್ನಾಟಕ ಹಾಲು ಉತ್ಪಾದನಾ ಮಹಾಮಂಡಳಿ 3 ಲಕ್ಷ ರೂ. ವೆಚ್ಚದ ಘಟಕವನ್ನು ಇದಕ್ಕಾಗಿ ಒದಗಿಸಿದೆ. ಈ ಭಾಗದಲ್ಲಿ ಗ್ರಾಮೀಣ ಅಭಿವೃದ್ಧಿಯ ಮೂಲ ಪ್ರೇರಣೆಯಾಗಿತ್ತು. ಅಷ್ಟೇ ಅಲ್ಲದೆ ಹೈನುಗಾರಿಕೆಗೆ ಗರಿಷ್ಠ ಪ್ರೋತ್ಸಾಹ ನೀಡಿದೆ

ಜೀವನಾಧಾರ
ಹೈನುಗಾರಿಕೆಯ ಮಹತ್ವವನ್ನು ಅರಿತಿರುವ ಅನೇಕ ಶ್ರಮಜೀವಿಗಳು ಅದನ್ನೇ ಜೀವನಾಧರವಾಗಿ ರೂಢಿಸಿ ಕೊಂಡಿದ್ದಾರೆ. ಗ್ರಾಮದ ಅನೇಕರ ಬದುಕು ಹಸನಾಗಿದೆ. ಆರಂಭದ ಹಂತದಲ್ಲಿ ಪೇಟೆಯ ಮುಖ್ಯ ರಸ್ತೆಯ ಐತಾಳರ ಕ್ಲಿನಿಕ್‌ ಬಳಿ ಹಾಗೂ ದಾಮೋದರ ಶಾನುಭಾಗರ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಅಂದರೆ 2008 ರಲ್ಲಿ ಹತ್ತು ಸೆಂಟ್ಸ್‌ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ.ಅಂದು ಎಂಟು ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಡೈರಿ ಇರಲಿಲ್ಲ. ಹೀಗಾಗಿ ಐದಾರು ಕಿ.ಮೀ. ದೂರದಿಂದ ಜನ ಇಲ್ಲಿಗೆ ಹಾಲು ತರುತ್ತಿದ್ದರು. ಆ ಕಾಲದಲ್ಲಿ ಒಂದೆರಡು ಲೀಟರ್‌ ಹಾಲು ಪೂರೈಕೆ ಮಾಡುವಾತನೇ ದೊಡ್ಡ ಹೈನುಗಾರನಾಗಿದ್ದ..

Advertisement

ಹೈನುಗಾರಿಕೆಯ ಬಗ್ಗೆ ಕೆಎಂಎಫ್‌
ವೈದ್ಯರ ನೇತƒತ್ವದಲ್ಲಿ ವಿವಿಧ ತರಬೇತಿ ಶಿಬಿರ ನಡೆದಿದೆ. ಜಾನುವಾರು ಪ್ರದರ್ಶನ ನಡೆದಿದೆ. ಹಾಲು ಉತ್ಪಾದಕರ ಸಂಘವು ಮಹಾಸಭೆ, ವಿಶೇಷ ಸಭೆ, ಹಾಗೂ ಪ್ರತಿ ತಿಂಗಳ ಸಭೆ ನಡೆಸುತ್ತದೆ. ಈ ಸಂಘವು 11 ಮಂದಿ ನಿರ್ದೇಶಕರನ್ನು ಹೊಂದಿದ್ದು 300 ಕ್ಕೂ ಮಿಕ್ಕಿ ಸದಸ್ಯರಿದ್ದಾರೆ.

1986ರಲ್ಲಿ ಆರಂಭ
ಕುಗ್ರಾಮವಾಗಿದ್ದ ವಂಡ್ಸೆಯು ಆ ಕಾಲಘಟ್ಟದಲ್ಲಿ ಹಿಂದುಳಿದ ಪ್ರದೇಶವಾಗಿತ್ತು.ಅಲ್ಲಿನ ಜನಜೀವನ ಕೂಡ ತ್ರಾಸದಾಯಕವಾಗಿತ್ತು. ಒಂದಿಷ್ಟು ಮಂದಿ ಬದುಕಿಗೊಂದು ಹೊಸ ಸ್ವರೂಪ ಒದಗಿಸುವ ನಿಟ್ಟಿನಲ್ಲಿ ಆರಂಭಿಸಿದ್ದ ವಂಡ್ಸೆ ಹಾಲು ಉತ್ಪಾದಕರ ಸಹಕಾರಿ ಸಂಘ ಇದೀಗ ಹೆಮ್ಮರವಾಗಿ
ಬೆಳೆದಿದೆ.

ಹಲವು ವರ್ಷಗಳ ಹಿಂದೆ ಸಂಘ ಮುಚ್ಚುವ ಪರಿಸ್ಥಿತಿ ಎದುರಾದಾಗ ಧƒತಿಗೆಡದೆ ಹೆ„ನುಗಾರರು ಹಾಗೂ ಸದಸ್ಯರ ಬೆಂಬಲದೊಂದಿಗೆ ಸಂಘವನ್ನು ಪುನಶ್ಚೇತನಗೊಳಿಸಲಾಗಿದೆ.
-ತ್ಯಾಂಪಣ್ಣ ಶೆಟ್ಟಿ ,
ಅಧ್ಯಕ್ಷರು, ವಂಡ್ಸೆ ಹಾ.ಉ.ಸ. ಸಂಘ

ಅಧ್ಯಕ್ಷರು:
ಸಚ್ಚಿದಾನಂದ ಶೆಟ್ಟಿ,ವಂಡಬಳ್ಳಿ
ಜಯರಾಮ ಶೆಟ್ಟಿ,ಕುಷ್ಟಪ್ಪ ಶೆಟ್ಟಿ,
ತ್ಯಾಂಪಣ್ಣ ಶೆಟ್ಟಿ (ಹಾಲಿ)
ಕಾರ್ಯದರ್ಶಿಗಳು:
ಸವಿ.ಕೆ.ಶಿವರಾಮ ಶೆಟ್ಟಿ, ಆನಂದ ನಾಯ್ಕ,
ಜ್ಯೋತಿ, ಸರೋಜಾ, ಅನುಷಾ,
ಸುಮಲತಾ, ರೇವತಿ, ಸುಮಾ, ಭರತ ಆಚಾರ್ಯ (ಹಾಲಿ)

  ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next