Advertisement

ವಂಡ್ಸೆ -ಅಡಿಕೆಕೊಡ್ಲು ಸಂಪರ್ಕ ಕಿರುಸೇತುವೆ ನಿರ್ಮಾಣ

08:05 AM Jul 23, 2017 | |

ಕುಂದಾಪುರ:  ವಂಡ್ಸೆ ಗ್ರಾ.ಪಂ. ವ್ಯಾಪ್ತಿಯ  ವಂಡ್ಸೆಯಿಂದ ಅಡಿಕೆಕೊಡ್ಲು, ಸಂಭಾರ್ತಿ, ನೂಜಾಡಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಯು ನಿರ್ಮಾಣವಾಗಿದ್ದು, ಇದರಿಮದ ಈ ಭಾಗದ  ಜನರ ಬಹುದಿನದ ಕನಸು ನನಸಾಗಿದೆ.

Advertisement

ಈ ಭಾಗದಲ್ಲಿ  ಸುಮಾರು ನೂರ ಐವತ್ತಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು ದಿನ ನಿತ್ಯದ ಸಂಚಾರಕ್ಕೆ ಈ ಮಾರ್ಗವನ್ನೇ ಅವಲಂಬಿಸಿದ್ದರು. ಆದರೆ ಅತಿ ಹತ್ತಿರದಲ್ಲೇ ಇರುವ ವಂಡ್ಸೆ ಪೇಟೆಯನ್ನು ಸಂಪರ್ಕಿಸಲು ಈ ತೊರೆಯನ್ನು ದಾಟಿ ಹೋಗಬೇಕಾಗಿರುವುದರಿಂದ  ಮಳೆಗಾಲದಲ್ಲಿ  ಈ ನಾರ್ಗದಲ್ಲಿ ಸಂಚರಿಸುವುದು ಬಹಳಷ್ಟು ಕಷ್ಟಕರವಾಗಿತ್ತು. ಈ ಸೇತುವೆಗೆ ಪೂರಕವಾಗಿ ಸಂಪರ್ಕ ರಸ್ತೆ ನಿರ್ಮಾಣವಾಗಿ 4-5 ವರ್ಷ ಕಳೆದರೂ ಸೇತುವೆ ಮಾತ್ರ ನಿರ್ಮಾಣ ಆಗಿರಲಿಲ್ಲ. ಇದರಿಂದಾಗಿ ಈ ಭಾಗದ ಜನರು  ಅಡಿಕೆಕೊಡ್ಲುವಿಗೆ ನೂಜಾಡಿ ಮೂಲಕ  ಸುಮಾರು ಐದು ಕಿ.ಮೀ ಸುತ್ತು ಬಳಿಸಿ ಸಾಗಬೇಕಾಗಿದ್ದರಿಂದ ಇಲ್ಲಿನ ಜನರಿಗೆ  ಸೇತುವೆ ನಿರ್ಮಾಣ ತುರ್ತು ಆವಶ್ಯಕತೆಯಾಗಿತ್ತು.

ಕರಾವಳಿ ಪ್ರಾಧಿಕಾರ, ಗ್ರಾ.ಪಂ. ನಿಧಿ ಬಳಕೆ
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರ ಶಿಫಾರಸಿನಂತೆ ಕರಾವಳಿ ಪ್ರಾಧಿಕಾರದಿಂದ ರೂ.5 ಲಕ್ಷ ರೂ.ಹಾಗೂ  ಬಾಕಿ ಉಳಿದ ರಸ್ತೆ  ಕಾಮಗಾರಿಗೆ ವಂಡ್ಸೆ ಗ್ರಾ.ಪಂ ಅನುದಾನವನ್ನು   ಬಳಸಿಕೊಂಡು ಈ ಕಿರು ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣವಾಗಲಿದೆ. ಕೂಡು ರಸ್ತೆ ಹಾಗೂ ಬದಿಕಟ್ಟುವ ಕೆಲಸ ಬಾಕಿಇದ್ದು  ಶೀಘ್ರದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.

ಸೇತುವೆ ನಿರ್ಮಾಣದಿಂದ  ಈ ಭಾಗ‌ದ ಜನರಿಗೆ ಮುಖ್ಯವಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ.

ಅಪಾಯಕಾರಿ ತೊರೆಯಿಂದ ಮುಕ್ತಿ 
ತೊರೆಯು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ  ಶಾಲಾ ಮಕ್ಕಳಿಗೆ  ಹಾಗೂ ಸ್ಥಳಿಯ ಜನರಿಗೆ ತೊರೆ ದಾಟುವುದು ಕಷ್ಟಕರವಾಗಿತ್ತು. ಪರಿಸರದ   ಗ್ರಾಮಸ್ಥರು  ಕಿರು ಸೇತುವೆ ಕಲ್ಪಿಸಿಕೊಡುವಂತೆ ಬೇಡಿಕೆ ಇಡುತ್ತಲೇ ಬಂದಿದ್ದರು ಹಾಗೂ ಗ್ರಾಮಸಭೆಯಲ್ಲಿ  ಮನವಿ ಮಾಡಿದ್ದರೂ  ಕೆಲವೊಂದು ತಾಂತ್ರಿಕ ಕಾರಣಗಳಿಂದ  ಸೇತುವೆ ರಚನೆಗೆ ಸಮಯ ಕೂಡಿ ಬಂದಿರಲಿಲ್ಲ. ನಂತರ  ವಂಡ್ಸೆ  ಗ್ರಾ.ಪಂ. ಅಧ್ಯಕ್ಷರು ಸ್ವತಃ ಮುತುವರ್ಜಿವಹಿಸಿಕೊಂಡು  ಸೇತುವೆ ನಿರ್ಮಾಣ ಮಾಡುವಲ್ಲಿ  ಹೆಚ್ಚಿನ ಕಾಳಜಿಯನ್ನು ವಹಿಸಿದ್ದರು.  ಇದರಿಂದಾಗಿ  ವಂಡ್ಸೆ ಭಾಗದ ಅಡಿಕೆಕೊಡ್ಲು  ನೂಜಾಡಿಯಿಂದ  ಹೋಗುವವರು  ಈ  ಮಾರ್ಗವಾಗಿ  ಹೋಗಲು ಅನಕೂಲಕರವಾಗಿದೆ. ಸುಮಾರು ನಾಲ್ಕೈದು ಕಿ.ಮೀ. ಸುತ್ತಿ ಬಳಸುವುದು ತಪ್ಪಿದಂತಾಗಿದೆ.

Advertisement

ಸಣ್ಣ ತೊರೆಗೆ ಕಿರು ಸೇತುವೆಯನ್ನು ನಿರ್ಮಿಸುವಂತೆ ಗ್ರಾಮಸ್ಥರ ಬೇಡಿಕೆಯಂತೆ ಗ್ರಾ.ಪಂ. ನಿರ್ಣಯವನ್ನು ಕೈಗೊಂಡು ಶಾಸಕರ ಶಿಫಾರಸಿನೊಂದಿಗೆ ಕರಾವಳಿ ಪ್ರಾಧಿಕಾರದ ಅನುದಾನವನ್ನು ಬಳಸಿಕೊಂಡು  ಕಿರು ಸೇತುವೆಯನ್ನು ನಿರ್ಮಿಸಲಾಗಿದೆ.  ಗ್ರಾ.ಪಂ. ಹಾಗೂ ಕರಾವಳಿ ಪ್ರಾಧಿಕಾರದ ಅನುದಾನವನ್ನು   ಬಳಿಸಿಕೊಂಡು  ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣವಾಗಲಿದೆ.ಇನ್ನು  ಕೂಡು ರಸ್ತೆ ಹಾಗೂ ಸೈಡ್‌ ವಾಲ್‌ಗ‌ಳ ನಿರ್ಮಾಣದ ಕಾಮಗಾರಿ ನಡೆಯಲಿದೆ. ಅತಿ ಶೀಘ್ರದಲ್ಲಿ ಜನಸಂಚಾರಕ್ಕೆ  ಈ ಮಾರ್ಗ ಮುಕ್ತವಾಗಲಿದೆ.
-ಉದಯಕುಮಾರ್‌ ಶೆಟ್ಟಿ, 
ಅಧ್ಯಕ್ಷರು, ವಂಡ್ಸೆ ಗ್ರಾ.ಪಂ.

– ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next