Advertisement

Vande Bharath: ಪ್ರಾಯೋಗಿಕ ಸಂಚಾರ: ಬೆಂಗಳೂರು-ಹೈದರಾಬಾದ್‌ ರೈಲಿಗೆ ರವಿವಾರ ಮೋದಿ ಚಾಲನೆ

12:16 AM Sep 22, 2023 | Team Udayavani |

ಹೈದರಾಬಾದ್‌: ಕರ್ನಾಟಕ ರಾಜಧಾನಿ ಬೆಂಗಳೂರು ಮತ್ತು ತೆಲಂಗಾಣ ರಾಜಧಾನಿ ಹೈದರಾಬಾದ್‌ ನಡುವಿನ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಸೆ.24ರಂದು ಹಸುರು ನಿಶಾನೆ ಸಿಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ಈ ಮಾರ್ಗದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿತು.

Advertisement

ಬೆಂಗಳೂರು ಮತ್ತು ಹೈದರಾಬಾದ್‌ ನಡುವಿನ 610 ಕಿ.ಮೀ. ಮಾರ್ಗವನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕೇವಲ 8 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿದೆ. ಇದೇ ರವಿವಾರ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ವರ್ಚುವಲ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಮೂರು ವಂದೇ ಭಾರತ್‌ ರೈಲುಗಳು ಸಿಕ್ಕಿದಂತಾಗಲಿದೆ.

ಎಷ್ಟು ಗಂಟೆಗೆ ಹೊರಡಲಿದೆ?: ಹೈದರಾಬಾದ್‌ನ ಕಾಚಿಗುಡ ರೈಲು ನಿಲ್ದಾಣದಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮುಂಜಾನೆ 5.30ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಇದೇ ರೀತಿ ಯಶವಂತಪುರ ರೈಲು ನಿಲ್ದಾಣದಿಂದ ಮಧ್ಯಾಹ್ನ 2.45ಕ್ಕೆ ರೈಲು ಹೊರಟು ರಾತ್ರಿ 11.15ಕ್ಕೆ ಕಾಚಿಗುಡ ರೈಲು ನಿಲ್ದಾಣ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ: ಬುಧವಾರ ಹೊರತುಪಡಿಸಿ, ಎಲ್ಲ ದಿನಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಈ ಮಾರ್ಗದಲ್ಲಿ ಸಂಚರಿಸಲಿದೆ. ಧರ್ಮಾವರಂ, ಡೋನ್‌, ಅನಂತಪುರ, ಕರ್ನೂಲ್‌ ನಗರ ಮತ್ತು ಮೆಹಬೂಬನಗರ ರೈಲು ನಿಲ್ದಾಣಗಳಲ್ಲಿ ರೈಲು ನಿಲುಗಡೆ ನೀಡಲಿದೆ.

8 ಗಂಟೆ 30 ನಿಮಿಷಗಳ ಪ್ರಯಾಣ: ಬೆಂಗಳೂರಿನಿಂದ ಕಾಚೆಗುಡಕ್ಕೆ ಪ್ರಸ್ತುತ 20 ರೈಲುಗಳು ಸಂಚರಿಸುತ್ತಿವೆ. ಈ ರೈಲುಗಳ ಸರಾಸರಿ ಪ್ರಯಾಣ ಸಮಯ 12 ಗಂಟೆಗಳು. ಆದರೆ ವಂದೇ ಭಾರತ್‌ ರೈಲು ಈ ದೂರವನ್ನು ಕೇವಲ 8 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next